Sunday, September 8, 2024

Latest Posts

ದಾಖಲೆ ಬರೆದ ರಾಮಲಲ್ಲಾ: ಒಂದೇ ತಿಂಗಳಲ್ಲಿ 25 ಕೋಟಿ ಕಾಣಿಕೆ ಸಂಗ್ರಹ

- Advertisement -

Uttar Pradesh News: ಜನವರಿ 22ಕ್ಕೆ ಅಯೋಧ್ಯೆಯ ರಾಮಲಲ್ಲಾ ದೇವಸ್ಥಾನ ಉದ್ಘಾಟನೆ ಆಗಿದ್ದೇ ತಡ, ನಾನು ಯಾವಾಗ ರಾಮಮಂದಿರ ನೋಡುತ್ತೇನೋ, ರಾಮಲಲ್ಲಾನ ದರ್ಶನ ಮಾಡುತ್ತೇನೋ ಎಂದು ಭಕ್ತಾದಿಗಳು ಸಾಲು ಸಾಲಾಗಿ ಅಯೋಧ್ಯೆಗೆ ಬರುತ್ತಿದ್ದಾರೆ.

ಹೀಗೆ ಬರುತ್ತಿರುವವರು ಬಾಲಕರಾಮನಿಗೆ ಕಾಣಿಕೆಯನ್ನೂ ತಂದು ಕೊಡುತ್ತಿದ್ದಾರೆ. ಬಾಲಕ ರಾಮ ಒಂದು ತಿಂಗಳಲ್ಲೇ ಕೋಟಿ ಕೋಟಿ ಒಡೆಯನಾಗಿದ್ದಾನೆ. ಒಂದೇ ತಿಂಗಳಲ್ಲಿ 25 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಜನವರಿ 23ರಿಂದ ಇಲ್ಲಿಯವರೆಗೂ 60 ಲಕ್ಷಕ್ಕೂ ಹೆಚ್ಚು ಭಕ್ತರು ರಾಮಲಲ್ಲಾನ ದರ್ಶನಕ್ಕಾಗಿ ಬಂದಿದ್ದಾರೆಂದು, ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ಅವರೆಲ್ಲರೂ ರಾಮಲಲ್ಲಾನಿಗೆ ಕಾಣಿಕೆ ಹಾಕಿದ್ದು, ಇನ್ನು ಕೆಲವರು ಮನೆಯಿಂದಲೇ ರಾಮಲಲ್ಲಾನಿಗೆ ಕಾಣಿಕೆ ಕಳಿಸಿದ್ದಾರೆ. ಇನ್ನು ಜನವರಿ 23ರಿಂದ 11 ದಿನದಲ್ಲಿ 11 ಲಕ್ಷ ರೂಪಾಯಿ ಕಾಣಿಕೆ ಸಂಗ್ರಹವಾಗಿತ್ತು. ಇನ್ನು ಕೆಲವರು ದೇವಸ್ಥಾನಕ್ಕಾಗಿ ಚೆಕ್, ಬ್ಯಾಂಕ್ ಮುಖಾಂತರ ದೇಣಿಗೆ, ಕಾಣಿಕೆ ನೀಡಿದ್ದಾರೆ. ಇವೆಲ್ಲವೂ ಸೇರಿಸಿ, ರಾಮಲಲ್ಲಾನಿಗೆ 25 ಕೋಟಿ ಕಾಣಿಕೆ ಹರಿದು ಬಂದಿದೆ.

ಅಷ್ಟೇ ಅಲ್ಲದೇ, ಅಯೋಧ್ಯೆಗೆ ಬರುವ ರಾಮನ ಭಕ್ತರು ಚಿನ್ನ ಮತ್ತು ಬೆಳ್ಳಿಯಿಂದ ತಯಾರಿಸಿದ ರಾಮನ ಮೂರ್ತಿಯನ್ನು ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡುತ್ತಿದ್ದಾರೆ. ಇವೆಲ್ಲದರ ಬೆಲೆ ಸೇರಿಸಿ 25 ಕೋಟಿ ರೂಪಾಯಿ ಸೇರಿದೆ.

ಇಬ್ಬರು ರಾಷ್ಟ್ರಮಟ್ಟದ ನಾಯಕರಿಗೆ ಸಾವಿನ ಕಂಟಕ ಕಾದಿದೆ..! ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ

ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿ ಎಬ್ಬಿಸಿ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಅರವಿಂದ ಬೆಲ್ಲದ್

ಬೈಕ್ ರೈಡ್ ಮೂಲಕ ಕಾಶ್ಮೀರಕ್ಕೆ ಸೊಲೋ ಟ್ರಿಪ್: ಹೊಸ ದಾಖಲೆ ಬರೆದ ಧಾರವಾಡ ಯುವತಿ

- Advertisement -

Latest Posts

Don't Miss