ನೇಪಾಳದಲ್ಲಿ ಎಂಡಿಎಚ್, ಎವರೆಸ್ಟ್ ಮಸಾಲೆ ಮಾರಾಟ ನಿಷೇಧ

International News: ಭಾರತದ ಪ್ರಾಡಕ್ಟ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಮಸಾಲೆಯಲ್ಲಿ ವಿಷಕಾರಿ ಅಂಶಗಳಿರುವುದು ಪತ್ತೆಯಾಗಿದ್ದು, ಈಗಾಗಲೇ ಹಲವು ರಾಷ್ಟ್ರಗಳು ಇವುಗಳ ಆಮದನ್ನು ನಿಷೇಧಿಸಿದೆ. ಅದೇ ರೀತಿ ಇದೀಗ ನೇಪಾಳ ಕೂಡ ಎಂಡಿಎಚ್ ಮತ್ತು ಎವರೆಸ್ಟ್ ಮಸಾಲೆಗಳನ್ನು ಆಮದು ಮಾಡಿಕೊಳ್ಳದಂತೆ ಆದೇಶಿಸಿದ್ದು, ನೇಪಾಳ ಮಾರುಕಟ್ಟೆಯಲ್ಲಿ ಕೂಡ ಈ ಮಸಾಲೆಗಳ ಮಾರಾಟ ನಿಷೇಧಿಸಲಾಗಿದೆ.

ಸದ್ಯ ಈ ಎರಡೂ ಮಸಾಲೆ ಪುಡಿಗಳಲ್ಲಿರುವ ರಾಸಾಯನಿಕಗಳ ಪರೀಕ್ಷೆ ನಡೆಯುತ್ತಿದ್ದು, ಫಲಿತಾಂಶ ಬರುವವರೆಗೂ ನಿಷೇಧ ಜಾರಿಯಲ್ಲಿರುತ್ತದೆ. ಅಲ್ಲಿಯವರೆಗೂ ಈ ಮಸಾಲೆಗಳನ್ನು ಆಮದು ಮಾಡಿಕೊಳ್ಳುವುದಿಲ್ಲ ಮತ್ತು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದಿಲ್ಲವೆಂದು ನೇಪಾಳ ಸರ್ಕಾರ ತಿಳಿಸಿದೆ.

ಈ ಮಸಾಲೆಗಳಲ್ಲಿ ಎಥಿಲಿನ್ ಆಕ್ಸೈಡ್ ಪ್ರಮಾಣ ಹೆಚ್ಚಾಗಿದ್ದು, ಇದು ಮಾನವನಲ್ಲಿ ಕ್ಯಾನ್ಸರ್ ಹೆಚ್ಚಾಗಲು ಕಾರಣವಾಗಿದೆ. ಅಲ್ಲದೇ ಈ ರಾಸಾಯನಿಕವನ್ನು ಕ್ರಿಮಿನಾಶಕ್ಕಾಗಿ ಬಳಕೆ ಮಾಡಲಾಗುತ್ತದೆ. ಇಂಥ ರಾಸಾಯನಿಕದ ಪ್ರಮಾಣ ಮಸಾಲೆ ಪುಡಿಯಲ್ಲಿ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬಂದ ಕಾರಣಕ್ಕೆ, ಮಸಾಲೆಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಕಾರಣಕ್ಕೆ ಹಾಂಕಾಂಗ್, ಆಸ್ಟ್ರೇಲಿಯಾ, ಅಮೆರಿಕದಲ್ಲಿ ಈ ಮಸಾಲೆ ಪುಡಿಗಳನ್ನು ನಿಷೇಧಿಸಲಾಗಿದೆ.

ಪ್ರವಾಸಿಯ ಕಳೆದುಹೋಗಿದ್ದ ವಾಚ್ ಹಿಂದಿರುಗಿಸಿದ ಭಾರತೀಯ ಹುಡುಗ: ದುಬೈ ಪೊಲೀಸರಿಂದ ಸನ್ಮಾನ

ವಿಶ್ವಕಪ್‌ನಲ್ಲಿ ರಾರಾಜಿಸಲಿದೆ ನಂದಿನಿ, ಕಂಗೊಳಿಸಲಿದೆ ಕನ್ನಡ

ಕೊ* ಪ್ರಕರಣಗಳಲ್ಲಿ ಸರ್ಕಾರದ ಲೋಪ ಹೆಚ್ಚಾಗಿ ಕಾಣುತ್ತಿದೆ: ಶಾಸಕ ಟೆಂಗಿನಕಾಯಿ

About The Author