Friday, February 7, 2025

Latest Posts

ಬೆಂಗಳೂರು ಯುವತಿಗೆ ಮಾಸ್ಟರ್ ಆಫ್ ಆಕಿಟೆಕ್ಚರ್ ನಲ್ಲಿ ಮೊದಲ ರ್ಯಾಂಕ್

- Advertisement -

Bengaluru News: ಬೆಂಗಳೂರು: ಗೋಪಾಲನ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಮತ್ತು ಪ್ಲಾನಿಂಗ್ನ ಮಾಸ್ಟರ್ ಆಫ್ ಆರ್ಕಿಟೆಕ್ಚರ್ ನಲ್ಲಿ ವಿದ್ಯಾರ್ಥಿನಿ ಮೆರಿನ್ ಮ್ಯಾಥ್ಯೂ ಅವರು ಪ್ರಥಮ ರ್ಯಾಂಕ್‌ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅಡಿಯಲ್ಲಿ 9.76 ಸಿಜಿಪಿಎ ಅಂಕಗಳೊಂದಿಗೆ ಮಾಸ್ಟರ್ ಆಫ್ ಆರ್ಕಿಟೆಕ್ಚರ್ ನ ಕನ್‌ಸ್ಟ್ರಕ್ಷನ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್‌ನಲ್ಲಿ ಮಹತ್ತರ ಸಾಧನೆಗೈದಿರುವುದು ಹೆಮ್ಮೆಯ ಸಂಗತಿಯಾಗಿದೆ.

ಈ ಕುರಿತು ಗೋಪಾಲನ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಅಂಡ್ ಪ್ಲಾನಿಂಗ್ ನ ಪ್ರಾಂಶುಪಾಲರಾದ ಡಾ. ವಿಮಲಾ ಸ್ವಾಮಿ ಮಾತನಾಡಿ, “ಮೆರಿನ್ ಅವರ ಸಾಧನೆ ನಿಜಕ್ಕೂ ಪ್ರಶಂಸನೀಯ. ಆಕೆಯ ಅಧ್ಯಯನವು ಇಂದಿನ ಅಗತ್ಯತೆಗೆ ಪೂರಕವಾಗಿರುವಂತಹದ್ದಾಗಿದೆ. ಶ್ರಮ ಮತ್ತು ಸೃಜನಶೀಲನೆಯಿಂದ ಇಂದು ಆಕೆ ಅದ್ವಿತೀಯ ಸಾಧನೆ ತೋರಿದ್ದಾಳೆ. ಅಧ್ಯಯನದ ಅವಧಿಯಲ್ಲಿ ವಿವಿಧ ಪ್ರಾಜೆಕ್ಟ್ಗಳು, ಸಂಶೋಧನೆ ಮತ್ತು ವಿನ್ಯಾಸ ಕಲಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದುದು ಕೂಡ ಈ ಯಶಸ್ಸಿಗೆ ಕಾರಣʼ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss