- Advertisement -
ಕೊರೊನಾ ಕೇಸ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಹಾಗೂ ಟಪ್ ರೂಲ್ಸ್ ಜಾರಿ ಹಿನ್ನಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಹೈ ಅಲರ್ಟ್ ಆಗಿದೆ . ಸೊಂಕೀತರು ಹೆಚ್ಚಾಗುವ ಆತಂಕ ಹಿನ್ನಲೆ ಜಿಲ್ಲಾಡಳಿತ 2300 ಬೆಡ್ ಗಳ ಗುರುತು ಮಾಡಿ ಸಿದ್ದತೆಗೆ ತಯರಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಗಳನ್ನ ಸಿದ್ದತೆಗೆ ಜಿಲ್ಲಾಡಳಿತ ಸಜ್ಜಾಗಿದೆ.
ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿಯೂ ಬೆಡ್ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ ಮಾಡಿಕೊಂಡಿದ್ದಾರೆ. ಆಕ್ಸಿಜನ್ ಕೊರತೆ ಬಾರದೆ ಇರೋ ಹಾಗೆ ಸಿದ್ದಾರ್ಥ್ ಆಸ್ಪತ್ರೆ, ಎಂವಿಜೆ(MVJ), ಆಕಾಶ್ ಆಸ್ಪತ್ರೆ(Akash Hospital)ಯಲ್ಲಿ ಪ್ಲಾಂಟ್ ಗಳ ಅಳವಡಿಕೆ ಮಾಡಲಾಗಿದೆ ಎಂದು ದೇವನಹಳ್ಳಿ(Devanahalli)ಯಲ್ಲಿ ಬೆಂಗಳೂರು ಗ್ರಾಮಾಂತರ ಡಿ ಸಿ ಶ್ರೀನಿವಾಸ್ (D C Srinivas)ಹೇಳಿಕೆ ನೀಡಿದ್ದಾರೆ.
- Advertisement -