Tuesday, June 3, 2025

Latest Posts

ಶೋಯೇಬ್ ಸನಾಗೂ ಡಿವೋರ್ಸ್ ಕೊಟ್ಟು ಇನ್ನೊಬ್ಬಳನ್ನು ಮದುವೆಯಾಗ್ತಾನೆ: ಬಾಂಗ್ಲಾ ಲೇಖಕಿಯ ಭವಿಷ್ಯ

- Advertisement -

International Sports News: ಪಾಕಿಸ್ತಾನಿ ಕ್ರಿಕೇಟಿಗ ಶೊಯೇಬ್ ಮಲ್ಲಿಕ್, ಸಾನಿಯಾ ಮಿರ್ಜಾಗೆ ಡಿವೋರ್ಸ್ ನೀಡಿ ಮೂರನೇಯ ಮದುವೆಯಾಗಿದ್ದು, ಮುಂದೊಂದು ದಿನ ಈಕೆಗೂ ಡಿವೋರ್ಸ್ ನೀಡಿ, ಮತ್ತೊಂದು ವಿವಾಹವಾಗುತ್ತಾನೆ ಎಂದು ಬಾಂಗ್ಲಾ ಲೇಖಕಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

ಬಾಂಗ್ಲಾ ಲೇಖಕಿ ತಸ್ಲಿಮಾ ನಸ್ರೀನ್ ಈ ರೀತಿ ಭವಿಷ್ಯ ನುಡಿದಿದ್ದು, ಇವನು ವಿಚ್ಛೇದನ ಪಡೆಯುವ ಅಗತ್ಯವೇ ಇರಲಿಲ್ಲ. ಒಂದೇ ಸಮಯದಲ್ಲಿ ನಾಲ್ಕು ಮದುವೆಯಾಗಬಹುದಿತ್ತು ಎಂದು ಹೇಳಿದ್ದಾರೆ. ಶೊಯೇಬ್ 2002ರಲ್ಲಿ ಮೊದಲ ಬಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ 2010ರಲ್ಲಿ ಸಾನಿಯಾ ಮಿರ್ಜಾರನ್ನು ವರಿಸಿದ್ದರು. ಇದೀಗ ಅವರಿಗೂ ಡಿವೋರ್ಸ್ ನೀಡಿ, ಸನಾರನ್ನು ವಿವಾಹವಾಗಿದ್ದಾರೆ.

ಈ ಬಗ್ಗೆ ಬರೆದಿರುವ ತಸ್ಲೀಮಾ, ನಾನು ಶೊಯೇಬ್ ಮತ್ತು ಸಾನಿಯಾ ಮಿರ್ಜಾ ವೈವಾಹಿಕ ಜೀವನ ಉತ್ತಮವಾಗಿದೆ ಎಂದು ಭಾವಿಸಿದ್ದೆ. ಆದರೆ ನನ್ನ ಅನಿಸಿಕೆ ತಪ್ಪಾಗಿದೆ. ಆದರೆ ಇಷ್ಟು ಬುದ್ಧಿವಂತೆಯಾಗಿದ್ದ ಸಾನಿಯಾ ಹೇಗೆ ಇಂಥವನನ್ನು ವಿವಾಹವಾದಳು ಎಂಬುದೇ ನನ್ನ ಪ್ರಶ್ನೆ ಎಂದಿದ್ದಾರೆ.

ಅಲ್ಲದೇ, ಸದ್ಯದಲ್ಲೇ ಶೊಯೇಬ್ ಸನಾಗೂ ಡಿವೋರ್ಸ್ ಕೊಟ್ಟು ಇನ್ನೋರ್ವಳನ್ನು ಮದುವೆಯಾಗುತ್ತಾನೆ. ಬಳಿಕ ಆಕೆಗೆ ಡಿವೋರ್ಸ್ ನೀಡಿ ಮತ್ತೊಬ್ಬಳನ್ನು ಮದುವೆಯಾಗುತ್ತಾನೆ. ಆ ಮತ್ತೊಬ್ಬಳಿಗೂ ಡಿವೋರ್ಸ್ ನೀಡಿ, ಮಗದೊಬ್ಬಳಿಗೆ ವರಿಸುತ್ತಾನೆ. ಆದರೆ ಅವನು ನಿಜವಾಗಲೂ ಇಸ್ಲಾಂನಲ್ಲಿ ನಂಬಿಕೆ ಹೊಂದಿದ್ದರೆ, ಅವನು ಡಿವೋರ್ಸ್ ಪಡೆದು ಮದುವೆಯಾಗಬೇಕೆಂದಿಲ್ಲ. ಬದಲಾಗಿ, ಒಮ್ಮೆಲೆ 4 ಮದುವೆಯಾಗಬಹುದಲ್ಲ ಎಂದು ತಸ್ಲೀಮಾ ವ್ಯಂಗ್ಯವಾಡಿದ್ದಾರೆ.

ಸಾನಿಯಾ ಮಿರ್ಜಾ-ಶೊಯೇಬ್ ವಿಚ್ಛೇದನಕ್ಕೆ ಕಾರಣವೆನೆಂದು ಹೇಳಿದ ಪಾಕ್ ಮೀಡಿಯಾ

ಖೈದಿಗಳನ್ನು ಹೊತ್ತು ಸಾಗುತ್ತಿದ್ದ ರಷ್ಯಾ ವಿಮಾನ ಉಕ್ರೇನ್ ಬಳಿ ಪತನ: 65 ಖೈದಿಗಳು ಸೇರಿ 74 ಮಂದಿ ಸಾವು

ಡಾನ್ಸ್ ಫ್ಲೋರ್ ಕುಸಿದು, ವಧು ವರ ಸೇರಿ 37 ಮಂದಿ ಆಸ್ಪತ್ರೆಗೆ ದಾಖಲು

- Advertisement -

Latest Posts

Don't Miss