Wednesday, September 11, 2024

Latest Posts

ಬಾಂಗ್ಲಾ ಪ್ರಧಾನಿ ನಿವಾಸದಲ್ಲಿ ಉದ್ವಿಗ್ನ ಪರಿಸ್ಥಿತಿ: ಬ್ಲೌಸ್, ಒಳ ಉಡುಪನ್ನೂ ಬಿಡದೇ ದೋಚಿದ ಜನ

- Advertisement -

International news: ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಅಲ್ಲಿನ ಪ್ರಧಾನಿಯಾಗಿದ್ದ ಶೇಖ್ ಹಸೀನಾ, ಬಾಂಗ್ಲಾ ಬಿಟ್ಟು, ಭಾರತಕ್ಕೆ ಬಂದು ಸೇರಿದ್ದಾರೆ.

ಇದೀಗ ಬಾಂಗ್ಲಾ ಪ್ರಧಾನಿ ನಿವಾಸದಲ್ಲಿ ಬಾಂಗ್ಲಾ ಜನ ನುಸುಳಿ, ಕೈಗೆ ಸಿಕ್ಕಿದ್ದನ್ನು ದೋಚಿಕೊಂಡು, ನಡೆಗದುಕೊಂಡೇ ಮನೆ ಕಡೆ ಹೊರಟಿದ್ದಾರೆ. ಆದ್ರೆ ಹಾಗೇ ಸುಮ್ಮನೆ ಹೋಗದೇ, ವೀಡಿಯೋ, ರೀಲ್ಸ್ ಮಾಡಿ, ತಾವು ಯಾವ ವಸ್ತುವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ತೋರಿಸಿದ್ದಾರೆ.

ಕೆಲವರು ನಿವಾಸದಲ್ಲಿದ್ದ ಸ್ವೀಟ್ ಬಾಕ್ಸ್ ತೆಗೆದುಕೊಂಡು, ಅದನ್ನು ತಿನ್ನುತ್ತ ವೀಡಿಯೋ ಮಾಡಿದರೆ, ಇನ್ನೋರ್ವ ವ್ಯಕ್ತಿ ಪ್ರಧಾನಿಯ ಸೀರೆಯುಟ್ಟು ತಮಾಷೆ ಮಾಡಿದ್ದಾರೆ. ಮತ್ತೋರ್ವ ಯುವಕ ಪ್ರಧಾನಿಗೆ ಸೇರಿದ ಬ್ಲೌಸ್, ಒಳ ಉಡುಪಿನ ಜೊತೆ ಫೋಟೋ ತೆಗೆಸಿಕೊಂಡು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ.

ಇನ್ನು ಕೆಲವರು ಪ್ರಧಾನಿ ನಿವಾಸದ ಕಿಚನ್‌ನಲ್ಲಿದ್ದ ತಿಂಡಿಗಳನ್ನು ಕೂತು ತಿನ್ನುತ್ತ, ಎಂಜಾಯ್ ಮಾಡಿದ್ದಾರೆ. ಮತ್ತೆ ಕೆಲವರು ಅಲ್ಲಿರುವ ಕೋಳಿ, ಕುರಿ, ಬಾತುಕೋಳಿ ಮಾಂಸಗಳನ್ನು ತೆಗೆದುತೊಂಡು ಹೋಗಿದ್ದಾರೆ. ಮಹಿಳೆಯೊಬ್ಬಳು, ಸೂಟ್‌ಕೇಸ್‌ನ್ನನು ಹೊತ್ತು ತಂದಿದ್ದಾರೆ.

ಕೆಲವು ಕಿಡಿಗೇಡಿಗಳು, ನಿವಾಸದೊಳಗೆ ಕೂತು ಸಿಗರೇಟ್ ಸೇದುತ್ತ, ಮದ್ಯಪಾನ ಮಾಡಿದ್ದಾರೆ. ಇದು ಪ್ರಧಾನಿ ನಿವಾಸದ ಕಥೆಯಾದರೆ, ಇನ್ನು ಕೆಲ ಕಿಡಿಗೇಡಿಗಳು, ಭಾರತ ಬಾಂಗ್ಲಾಕ್ಕೆ ನೀಡಿದ್ದ ಆ್ಯಂಬುಲೆನ್ಸ್ ಸೇರಿ, ಭಾರತಕ್ಕೆ ಸೇರಿದ ಎಲ್ಲಾ ವಸ್ತುಗಳನ್ನು ಸರ್ವನಾಶ ಮಾಡಿದ್ದಾರೆ. ಅಲ್ಲಿರುವ ಹಿಂದೂ ದೇವಾಲಯವನ್ನು ಧ್ವಂಸ ಮಾಡಿದ್ದಾರೆ. ಒಟ್ಟಾರೆಯಾಗಿ ಮೀಸಲಾತಿ ವಿಷಯವಾಗಿ, ಶೇಖ್ ಹಸೀನಾ ಎಡವಟ್ಟು ಮಾಡಿ, ರಾಜೀನಾಮೆ ನೀಡಿ, ದೇಶ ಬಿಟ್ಟಿದ್ದು, ಬಾಂಗ್ಲಾ ದೇಶವನ್ನು ಆ ದೇವರೇ ಕಾಪಾಡಬೇಕಿದೆ.

- Advertisement -

Latest Posts

Don't Miss