Banglore News:
ಬೆಂಗಳೂರಿನಲ್ಲೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ತನ್ನ 4 ವರ್ಷದ ಮಗುವನ್ನು ತಾಯಿಯೊಬ್ಬಳು ತನ್ನ ಕೈಯಾರೆ ಕೊಂದ ಘಟನೆ ನಡೆದಿದೆ.ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಗೃಹಿಣಿಯೊಬ್ಬರು ತನ್ನ ನಾಲ್ಕು ವರ್ಷದ ಮಗುವನ್ನು ನೀರಿನ ಟಬ್‌ನಲ್ಲಿ ಮುಳುಗಿಸಿ ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಎಚ್‌ಎಎಲ್ ಸಮೀಪದ ದೊಡ್ಡನೆಕ್ಕುಂದಿಯಲ್ಲಿ ನಡೆದಿದೆ.
ಸಂಯುಕ್ತಾ (4) ಮೃತ ಮಗು. ತನ್ನ ಮಗುವನ್ನು ಕೊಲೆಗೈದು ನೇಣು ಬಿಗಿದುಕೊಂಡಿದ್ದ ಗಾಯತ್ರಿ ದೇವಿ (23) ಬದುಕುಳಿದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮಿಳುನಾಡು ಮೂಲದ ನರೇಂದ್ರ ಹಾಗೂ ಗಾಯತ್ರಿ ದೇವಿ ದಂಪತಿ, ಮಗು ಸಂಯುಕ್ತ ಜತೆ ದೊಡ್ಡನೆಕ್ಕುಂದಿಯ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು. ನರೇಂದ್ರ ಖಾಸಗಿ ಕಂಪೆನಿಯಲ್ಲಿ ಅಕೌಂಟೆಂಟ್ ಆಗಿದ್ದು, ಗಾಯತ್ರಿ ಗೃಹಿಣಿಯಾಗಿದ್ದರು. ಮಗುವನ್ನು ಕಳೆದುಕೊಂಡು ಕುಟುಂಬ ಕಣ್ಣೀರಲ್ಲಿದೆ.