Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮುಂಗಾರು ಜೂನ್ ತಿಂಗಳ ಕೊನೆವರೆಗೂ ಬರಲಿಲ್ಲ. ಇದರಿಂದ ರೈತರಿಗೆ ಸಾಕಷ್ಟು ನಷ್ಟ ಆಗಿದೆ. ಆಗಸ್ಟ್ ನಲ್ಲಿ ಮಳೆ ಮತ್ತೆ ಹೋಗಿದೆ. ಸರ್ಕಾರ ಮೂರು ತಿಂಗಳಿಂದ ಬರಗಾಲ ಘೋಷಣೆ ಮಾಡಿಲ್ಲ. ಬೆಳೆ, ಕುಡಿಯುವ ನೀರಿನ ಬಗ್ಗೆ ಯೋಚನೆ ಮಾಡಿಲ್ಲ. ಕೂಡಲೇ ಬರಗಾಲ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೇ, ಕುಡಿಯುವ ನೀರು, ಬೆಳೆ ಸಮೀಕ್ಷೆ ಮಾಡಿ ಪರಿಹಾರ ನೀಡಬೇಕು. ಮುಂದಿನ ದಿನಗಳಲ್ಲಿ ತೀವ್ರ ಕ್ಷಾಮ ನೋಡಬೇಕಾಗುತ್ತೆ. ನೀರಿನ ಕಡಿಮೆ ಪ್ರಮಾಣದಿಂದ ವಿದ್ಯುತ್ ಉತ್ಪಾದನೆ ಕಡಿಮೆ ಆಗಿದೆ. ತೀವ್ರವಾಗಿ ವಿದ್ಯುತ್ ಕಟ್ ಮಾಡಲಾಗುತ್ತಿದೆ. ಅದು ರೈತರಿಗೆ ಗೊತ್ತು. ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ವರ್ಗಾವಣೆ ದಂಧೆ ಸೇರಿದಂತೆ ತಮ್ಮ ಹಿತಕ್ಕಾಗಿ ಬಡಿದಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ವಿರುದ್ಧ ಧ್ವನಿ ಎತ್ತುವವರ ವಿರುದ್ಧ ಧಮನ ಮಾಡುವ ಕೆಲಸ ನಡೆದಿದೆ. ಎಂ.ಎಲ್.ಎ ಗಳ ಪತ್ರ ಪ್ರಕಟ ಮಾಡಿದ ಪತ್ರಕರ್ತರಗೆ ನೋಟಿಸ್ ಕೊಡ್ತಾರೆ. ಪತ್ರಿಕಾ ಸ್ವಾತಂತ್ರ್ಯ ಧಮನ ಮಾಡುವ ಕೆಲಸ ಮಾಡ್ತಾ ಇದ್ದಾರೆ. ಕಾಂಗ್ರೆಸ್ ಗೆ ಭಯ ಹುಟ್ಟಿಕೊಂಡಿದೆ. ಲೋಕಸಭಾ ಸಮೀಕ್ಷೆ ಬಂದ ನಂತರ, ಲೋಕಸಭೆಯಲ್ಲಿ ಹೆಚ್ಚಾಗಿ ಸೀಟ್ ಬರದೇ ಇದ್ದಲ್ಲಿ ಅದರ ಪರಿಣಾಮ ನೇರವಾಗಿ ರಾಜ್ಯ ಸರ್ಕಾರದ ಮೇಲೆ ಬೀಳುತ್ತೆ. ಹೀಗಾಗಿ ಆಪರೇಷನ್ ಹಸ್ತ ಮಾಡ್ತಾ ಇದ್ದಾರೆ. ಆದರೆ ಅವು ಯಾವು ಯಶಸ್ವಿ ಆಗಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ.
Laxmi hebbalkar; ನಂಜನಗೂಡು ಶ್ರೀಕಂಠೇಶ್ವರನ ದರ್ಶನ ಪಡೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
Congress: ಹತ್ತಿ ಇಳಿಯಲು ಕಾಂಗ್ರೆಸ್ ಪಕ್ಷ ಬಸ್ ಅಲ್ಲ: ಡಿಕೆ ಶಿವಕುಮಾರ್
Neharu Dream :ಇಸ್ರೋ ಯಶಸ್ಸು; ನೆಹರು ಕನಸು ನನಸಾಗಿದೆ: ಡಿ.ಕೆ.ಶಿವಕುಮಾರ್

