Friday, March 14, 2025

Latest Posts

ಕಾಂಗ್ರೆಸ್‌ನಿಂದ ಪಾಠ ಕಲಿಯಬೇಕಿಲ್ಲ- ಬಸವರಾಜ ಬೊಮ್ಮಾಯಿ

- Advertisement -

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿನ ಸತ್ಯಾ ಸತ್ಯತೆ ಹೊರ ಬರುವುದು ಹಾಗೂ ಅಪರಾಧಿಗಳಿಗೆ ಶಿಕ್ಷೆ ಆಗೋದು ಕಾಂಗ್ರೆಸ್ ಪಕ್ಷಕ್ಕೆ ಬೇಕಾಗಿಲ್ಲ. ಹೀಗಾಗಿ  ಸಿಡಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಕಾಂಗ್ರೆಸ್ ಪಕ್ಷ ವನ್ನು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

ಮಂಗಳವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದವರು ಸಿಡಿ ವಿಚಾರವನ್ನು ಮುಂದಿಟ್ಟುಕೊಂಡು ಸದನದ ಬಾವಿಗಿಳಿದು ಧರಣಿ ನಡೆಸುತ್ತಿದ್ದ ಕಾಂಗ್ರೆಸ್ ಸದಸ್ಯರ ನಡವಳಿಕೆಯನ್ನು  ಬೊಮ್ಮಾಯಿ ಕಟುವಾಗಿ ಟೀಕಿಸಿದರು.

ಕಾಂಗ್ರೆಸ್ ಪಕ್ಷದವರೇನು ಸತ್ಯ ಹರಿಶ್ಚಂದ್ರರೇನಲ್ಲ. ೨೦೧೬ ರಲ್ಲಿ ಅಂದಿನ ಸಚಿವ ಮೇಟಿ ಪ್ರಕರಣದಲ್ಲಿ ಏನಾಯ್ತು? ಆಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದರು. ಮಾಧ್ಯಮದಲ್ಲಿ ಪ್ರಸಾರವಾಗಿರುವ ಸಿಡಿಯ ಸತ್ಯಾಸತ್ಯತೆ ಅರಿಯಲು ಮೇಟಿ ಪ್ರಕರಣವನ್ನು ಸಿಐಡಿಗೆ ವಹಿಸಲಾಯಿತು. ವಿಚಾರಣೆ ಮಾಡಿ ವರದಿ ಕೊಡಿ ಅಂತಾ ಸೂಚಿಸಲಾಗಿತ್ತು. ಆಗ ಮೇಟಿ ಪ್ರಕರಣದ ಕುರಿತು ಯಾವ ಪೊಲೀಸ್ ಠಾಣೆಯಲ್ಲಿಯೂ FIR ಎಫ್ ಐ ಆರ್ ದಾಖಲಾಗಿರಲಿಲ್ಲ. ವಿಚಾರಣೆಗೆ ಟರ್ಮ್ಸ್ ಮತ್ತು ರೆಫರೆನ್ಸ್ ಇರಲಿಲ್ಲ. ಆಗ ರಾಮಲಿಂಗಾರೆಡ್ಡಿ ಅವರು ಗೃಹ ಸಚಿವರಾಗಿದ್ದರು. ಆಗ ಅವರೂ ಇದನ್ನೇ ಮಾಡಿದ್ದಾರೆ. ಆದರೆ ಈಗ ಜಾರಕಿಹೊಳಿ ಪ್ರಕರಣದಲ್ಲಿ ಎಫ್ ಐ ಆರ್ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ ಪಕ್ಷದವರು ಸತ್ಯ ಹರಿಶ್ಚಂದ್ರ ರಲ್ಲ‌ ಎಂದು ದಾಖಲೆ ಸಮೇತ ಸದನದ ಗಮನ ಸೆಳೆದರು.

ಆಗ ಮೇಟಿ ಪ್ರಕರಣದಲ್ಲಿ ಒಬ್ಬ ಅಧಿಕಾರಿಯನ್ನೇ  ತನಿಖಾಧಿಕಾರಿ ಮತ್ತು ವಿಚಾರಣಾಗೆ ನೇಮಿಸಲಾಗಿತ್ತು. ಆದರೆ ನಾವುಎಸ್ ಐ ಟಿ ಯನ್ನು ರಚಿಸಿದ್ದೇವೆ. ವಿಚಾರಣೆಗಿಂತ ಮೊದಲೇ ಪ್ರಕರಣದಲ್ಲಿ ಮೇಟಿ ಅವರಿಗೆ ಕ್ಲಿನ್ ಚಿಟ್ ನೀಡಲಾಗಿದೆ‌ ಎಂದು ಆ ಸಂದರ್ಭದಲ್ಲಿ ಹೊರಡಿಸಲಾದ ಆದೇಶ ಪ್ರತಿಗಳನ್ನು ಮಾಧ್ಯಮಗಳಿಗೆ ಪ್ರದರ್ಶನ ಮಾಡಿದರು.

ಆಗ ಆ ಸಿಡಿಯಲ್ಲಿ ಇದ್ದ ಮಹಿಳೆಯ ಗತಿ ಏನಾಯಿತು. ಆಗ ಇದೇ ಕಾಂಗ್ರೆಸ್ ಶಾಸಕರು ಮತ್ತು ಸರ್ಕಾರ ಆ ಮಹಿಳೆಯ ವಿರುದ್ಧ ನಿಂತಿತ್ತು. ಹೀಗಾಗಿ ಕಾಂಗ್ರೆಸ್ ಪಕ್ಷದಿಂದ ನಾವು ಪಾಠ ಕಲಿಯಬೇಕಿಲ್ಲ. ಜನರೇ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಧಿಕ್ಕಾರ ಹಾಕಲಿದ್ದಾರೆ ಎಂದು ಬೊಮ್ಮಾಯಿ  ಧರಣಿ ನಿರತ ಕಾಂಗ್ರೆಸ್ ಸದಸ್ಯರನ್ನು ಕುಟುಕಿದರು.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

- Advertisement -

Latest Posts

Don't Miss