Sunday, May 12, 2024

Latest Posts

ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಬಾಕ್ಸರ್ ವಿಜಯೇಂದರ್

- Advertisement -

Sports News: ಒಲಂಪಿಕ್ಸ್ ಪದಕ ವಿಜೇತರಾದ ವಿಜಯೇಂದರ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಾರೆ. ಕಳೆದ ಬಾರಿ ಅವರಿಗೆ ಕಾಂಗ್ರೆಸ್‌ನಿಂದ ಲೋಕಸಭೆ ಚುನಾವಣೆಗೆ ಟಿಕೇಟ್ ನೀಡಲಾಗಿತ್ತು. ಆದರೆ ಅವರು ಬಿಜೆಪಿ ಎದುರು ಎಲೆಕ್ಷನ್‌ನಲ್ಲಿ ಸೋತಿದ್ದರು. ಈಗ ವಿಜಯೇಂದರ್ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದು, ನಟಿ ಹೇಮಾಮಾಲೀನಿ ಬದಲು ವಿಜಯೇಂದರ್‌ಗೆ ಟಿಕೇಟ್ ಸಿಗುವ ಎಲ್ಲಾ ಸಾಧ್ಯತೆಗಳಿದೆ.

ಇನ್ನು ವಿಜಯೇಂದರ್ ಬಿಜೆಪಿ ಸೇರಲು ಕೂಡ ಕೆಲಸ ಕಾರಣಗಳಿದೆ. ಆ ಬಗ್ಗೆ ಖುದ್ದು ಅವರೇ ಮಾತನಾಡಿದ್ದಾರೆ. ನಾನು ಇಂದು ಬಿಜೆಪಿ ಸೇರಿದ್ದೇನೆ. ಇದು ನನಗೆ ಘರ್ ವಾಪ್ಸಿಯಂತೆ ಆಗಿದೆ. ನಾವು ಫೈಟ್‌ಗೆ ಬೇರೆ ದೇಶಕ್ಕೆ ಹೋದಾಗ, ಏರ್ಪೋರ್ಟ್‌ನಲ್ಲಿ ನಮಗೆ ಬೇರೆ ಬೇರೆ ಸಮಸ್ಯೆ ಉಂಟಾಗುತ್ತಿದ್ದವು. ಆದರೆ ಈ ಸರ್ಕಾರ ಬಂದಾಗಿನಿಂದ ಆ ಎಲ್ಲ ಸಮಸ್ಯೆ ಸರಿ ಹೋಗಿದೆ. ನಮಗೆ ಗೌರವವೂ ಸಿಗುತ್ತಿದೆ ಎಂದು ವಿಜಯೇಂದರ್ ಹೇಳಿದ್ದಾರೆ.

ಜಾಟ್ ಸಮುದಾಯಕ್ಕೆ ಸೇರಿರುವ ವಿಜಯೇಂದರ್‌ಗೆ ಜಾಟ್ ಸಮುದಾಯದವರ ಬೆಂಬಲ ಸಿಗುವ ಸಾಧ್ಯತೆ ಇದೆ. ಉತ್ತರಪ್ರದೇಶದ ಮಥುರಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಾಟ್ ಸಮುದಾಯವಿದೆ. ಅವರೆಲ್ಲ ವಿಜಯೇಂದರ್‌ಗೆ ಬೆಂಬಲಿಸುವ ಕಾರಣಕ್ಕೆ ಬಿಜೆಪಿ ಹೇಮಾಮಾಲೀನಿ ಬದಲಿಗೆ, ವಿಜಯೇಂದರ್‌ಗೆ ಟಿಕೇಟ್‌ ನೀಡುವ ಎಲ್ಲ ಸಾಧ್ಯತೆ ಇದೆ.

ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ, ಮೋದಿಗೆ ಬೆಂಬಲಿಸುತ್ತೇನೆ: ಸಂಸದೆ ಸುಮಲತಾ ಅಂಬರೀಷ್

ವೆಂಕಟರಮಣಸ್ವಾಮಿ ಮೋದಿ, ನಾಮ ಜೆಡಿಎಸ್ ಪಕ್ಷ ಇದ್ದ ಹಾಗೆ: ಶಾಸಕ ಸಮೃದ್ಧಿ ಮಂಜುನಾಥ್

ಬರೀ ಪ್ರಚಾರಕ್ಕೆಂದೇ ಸಮಯ ಕಳೆಯುವವರು ಏನು ಅಭಿವೃದ್ಧಿ ಮಾಡುತ್ತಾರೆ..?: ಸಂತೋಷ್ ಲಾಡ್ ಪ್ರಶ್ನೆ..

- Advertisement -

Latest Posts

Don't Miss