www.karnatakatv.net : ಚಾಮರಾಜನಗರ : RSS ನಂತಹ ದೇಶಭಕ್ತ ಸಂಘಟನೆ ಕುರಿತು ಮಾತನಾಡುವಾಗ ನಾಲಿಗೆ ಮೇಲೆ ಹಿಡಿದವಿರಲಿ ಅಂತ ಚಾಮರಾಜನಗರ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹಂಗಳ ಪ್ರಣಯ್ ತಿರುಗೇಟು ನೀಡಿದ್ದಾರೆ.
RSS ನವರು ಭಾರತದ ನಿಜವಾದ ತಾಲಿಬಾನಿಗಳು ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ದೃವನಾರಾಯಣ್ ಹೇಳಿಕೆ ಖಂಡಿಸಿ ಜಿಲ್ಲಾ ಯುವಮೋರ್ಚಾ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದ್ರು. ಈ ವೇಳೆ ಮಾತನಾಡಿದ ಪ್ರಣಯ್ ಆರ್ ಎಸ್ಎಸ್ ಬಗ್ಗೆ ಮಾತನಾಡೋ ಯಾವ ನೈತಿಕ ಹಕ್ಕೂ ನಿಮಿಗಿಲ್ಲ, ಆರ್ ಎಸ್ಎಸ್ ಎಂದಿಗೂ ದೇಶದ ಹಿತವನ್ನು ಬಯಸುತ್ತದೆಯೇ ಹೊರತು ಕನಸಿನಲ್ಲೂ ಬಯಸುವುದಿಲ್ಲ ನಾಲಿಗೆ ಮೇಲೆ ಹಿಡಿತವಿರಲಿ ಎಂದು ಚಾಮರಾಜನಗರ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹಂಗಳ ಪ್ರಣಯ್ ತಿರುಗೇಟು ನೀಡಿದರು. ಇನ್ನು ರಾಜಕಾರಣದಲ್ಲಿ ಮುತ್ಸದಿಗಳಾಗಿರುವ ತಾವು ಈ ರೀತಿ ವರ್ತಿಸಬಾರದು. ಬಂದೂಕು ಹಿಡಿದು ಜನರನ್ನ ಜೀವಭಯಕ್ಕೆ ನೂಕಿದವರಿಗೂ ದಂಡ ಹಿಡಿದು ದೇಶ ರಕ್ಷಣೆಗೆ ನಿಂತಿರುವವರಿಗೂ ಅಜಗಜಾಂತರ ವ್ಯತ್ಯಾಸವಿದೆ ವಿಮರ್ಶೆ ಮಾಡಿಕೊಳ್ಳಿ ಅಂತ ಇದೇ ವೇಳೆ ಟಾಂಗ್ ನೀಡಿದ್ರು.
ಕರ್ನಾಟಕ ಟಿವಿ- ಚಾಮರಾಜನಗರ