Uttara Kannada: ಹೋಟೆಲ್‌ನಲ್ಲಿ ಊಟ ಮಾಡುವಾಗ ವ್ಯಕ್ತಿಯ ಬರ್ಬರ ಹ*

Uttara Kannada: ಮುಂಡಗೋಡ ನಗರದಲ್ಲಿ ಶುಕ್ರವಾರ ತಡರಾತ್ರಿ ಬಸ್ ಸ್ಟ್ಯಾಂಡ್ ಬಳಿಯ ಹೋಟೆಲ್ ವೊಂದರಲ್ಲಿ NMD ಜಮೀರ್ ಅಹ್ಮದ್ ದರ್ಗಾವಾಲೆ ಎಂಬ ವ್ಯಕ್ತಿಯ ಭೀಕರ ಹತ್ಯೆ ನಡೆದಿದೆ.ರಾತ್ರಿ ಊಟಕ್ಕೆಂದು ಬಸ್ ನಿಲ್ದಾಣ ಬಳಿಯ ಅಂಬಿಕಾ ಹೋಟೆಲ್ ಗೆ ತೆರಳಿದ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಮುಂಡಗೋಡ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ.

ಭಾರಿ ಸಂಖ್ಯೆಯಲ್ಲಿ ಸೇರಿದ ಜನ: ಹತ್ಯೆ ಮಾಹಿತಿ ತಿಳಿಯುತ್ತಲೇ ಮುಂಡಗೋಡ ಬಸ್ ನಿಲ್ದಾಣ ದ ಘಟನಾ ಸ್ಥಳದ ಎದುರು ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರು, ಕೂಡಲೇ ಎಚ್ಚೆತ್ತ ಮುಂಡಗೋಡ ಪೊಲೀಸರು ಜನರನ್ನು ಚದುರಿಸಿದರು.

ಅಪಹರಣ ನಡೆದಿತ್ತು….!ಕೆಲ ತಿಂಗಳ ಹಿಂದೆ ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎದುರಿನ ರಸ್ತೆಯಲ್ಲಿ ಹತ್ಯೆಯಾಗಿರುವ NMD ಜಮೀರ್ ಅಹ್ಮದ್ ದರ್ಗಾವಾಲೆ ಯನ್ನು ದುಷ್ಕರ್ಮಿಗಳು ಇಳಿ ಸಂಜೆಯ ಸಮಯದಲ್ಲಿ ಅಪಹರಿಸಿದ್ದರು. ಆಗಿನ ಎಸ್ಪಿ ಎಂ ನಾರಾಯಣ ನೇತೃತ್ವದಲ್ಲಿ ಮುಂಡಗೋಡ ಸಿಪಿಐ ರಂಗನಾಥ್ ನೀಲಮ್ಮನವರ ಮತ್ತು ತಂಡ, ಅಪಹರಣ ಪ್ರಕರಣವನ್ನು ಭೇದಿಸಿ NMD ಜಮೀರ್ ಅಹ್ಮದ್ ದರ್ಗಾವಾಲೆ ಯನ್ನು ದುಷ್ಕರ್ಮಿಗಳ ಕೈಯಿಂದ ಬಚಾವ್ ಮಾಡಿದ್ದರು.

ಡಿ ವೈ ಎಸ್ ಪಿ ಭೇಟಿ: ಮುಂಡಗೋಡ ನಗರದಲ್ಲಿ ತಡರಾತ್ರಿ ಹತ್ಯೆ ಮಾಹಿತಿ ತಿಳಿಯುತ್ತಲೇ ಶಿರಸಿ ಉಪ ವಿಭಾಗದ ಡಿ ವೈ ಎಸ್ ಪಿ ಶ್ರೀಮತಿ ಗೀತಾ ಪಾಟೀಲ್ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಮೊಕ್ಕಾಂ ಹೂಡಿದ್ದು ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರೆ.

ಸಿಸಿಟಿವಿ ವಶಕ್ಕೆ: ಹತ್ಯೆ ಬಳಿಕ ಆರೋಪಿಗಳ ಚಲನ ವಲನ ಕುರಿತು ಮಾಹಿತಿ ತಿಳಿದುಕೊಳ್ಳಲು ಮುಂಡಗೋಡ ಪೊಲೀಸರು ನಗರದ ಪ್ರಮುಖ ಭಾಗಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳ ಡಿ ವಿ ಆರ್ ವಶಕ್ಕೆ ಪಡೆದಿದ್ದು ಪೊಲೀಸರ ಸಂಪೂರ್ಣ ತನಿಖೆ ಬಳಿಕ ಹತ್ಯೆಯ ಕುರಿತು ಸಂಪೂರ್ಣ ಚಿತ್ರಣ ದೊರೆಯಲಿದೆ.

ಪೊಲೀಸ್ ಠಾಣೆ ಮುಂದೆ ಬೆಂಬಲಿಗರ ಜಮಾವಣೆ: nmd ಜಮೀರ್ ಅಹ್ಮದ್ ದರ್ಗಾವಾಲೆ ಹತ್ಯೆ ಮಾಹಿತಿ ತಿಳಿಯುತ್ತಲೇ ಬೆಳಗಿನ ಜಾವ 4 ಗಂಟೆ ವರೆಗೆ ಬೆಂಬಲಿಗರು ಪೊಲೀಸ್ ಠಾಣೆ ಮುಂದೆ ಜಮಾವಣೆ ಆಗಿದ್ದರು.

ಬೆಚ್ಚಿಬಿದ್ದ ಮುಂಡಗೋಡ : ನಗರದ ಹೃದಯ ಭಾಗದಲ್ಲೇ ವ್ಯಕ್ತಿಯೋರ್ವರ ಹತ್ಯೆಯಿಂದ ಮುಂಡಗೋಡ ಬೆಚ್ಚಿಬಿದ್ದಿದ್ದು, ಮುಂಡಗೋಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

About The Author