Health Tips: ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ಎಚ್ಚರ! | ORS ಯಾವುದು ಸೂಕ್ತ?

Health Tips: ನವಜಾತ ಶಿಶು ಮತ್ತು ಮಕ್ಕಳ ತಜ್ಞೆಯಾಗಿರುವ ಡಾ.ಪ್ರಿಯಾ ಶಿವಳ್ಳಿ ಅವರು ಈಗಾಗಲೇ ಮಕ್ಕಳ ಆರೋಗ್ಯದ ಬಗ್ಗೆ ಹಲವು ಮಾಹಿತಿಯನ್ನು ನಿಮಗೆ ನೀಡಿದ್ದಾರೆ. ಇದೀಗ ಮಕ್ಕಳಿಗೆ ಓಆರ್‌ಎಸ್ ಏಕೆ ನೀಡಲಾಗುತ್ತೆ ಅಂತಲೂ ವೈದ್ಯರು ವಿವರಿಸಿದ್ದಾರೆ.

ಮಕ್ಕಳಿಗೆ ಫುಡ್ ಪಾಯ್ಸನ್ ಆಗಿಯೋ ಅಥವಾ ಬೇರೆ ಯಾವುದೋ ಕಾರಣಕ್ಕೆ ವಾಂತಿ, ಬೇಧಿ ಶುರುವಾಗಬಹುದು. ಇದರ ಜತೆ ಜ್ವರದ ಲಕ್ಷಣವಿದ್ದರೆ, ತಕ್ಷಣ ವೈದ್ಯರ ಬಳಿ ತೋರಿಸಿ, ಚಿಕಿತ್ಸೆ ಕ“ಡಿಸುವುದು ಉತ್ತಮ. ಅಲ್ಲದೇ, ಮಗು ಏನೂ ತಿಂತಿಲ್ಲ, ಕುಡಿತಿಲ್ಲ ಎಂದರೆ ಅದು ತುಂಬಾ ಡೇಂಜರ್ ಅಂತಾರೆ ವೈದ್ಯರು.

ಇಂಥ ಸಂದರ್ಭದಲ್ಲಿ ಮಕ್ಕಳನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿ, ಚಿಕಿತ್ಸೆ ಕ“ಡಿಸಬೇಕಾಗುತ್ತದೆ. ಡ್ರಿಪ್ಸ್ ಹಾಕಿಸಬೇಕಾಗುತ್ತದೆ. ಆದರೆ ಇಂಥ ಲಕ್ಷಣಗಳೇನು ಇಲ್ಲ, ಬರೀ ವಾಂತಿ, ಅಥವಾ ಬೇಧಿಯಾಗಿದೆ . ಸುಸ್ತು ಅಷ್ಟೇ ಇದೆ ಎಂದಲ್ಲಿ, ಮಕ್ಕಳಿಗೆ ಓಆರ್‌ಎಸ್ ಜತೆ ಹೆಚ್ಚು ನೀರು ಕುಡಿಸಬೇಕು.

ಆದಷ್ಟು ಮನೆಯೂಟವನ್ನೇ ನೀಡಬೇಕು. ಅಕ್ಕಿ ಗಂಜಿ, ಎಳನೀರು, ಮಜ್ಜಿಗೆ ಸೇರಿ ತಣ್ಣಗಿರುವ ದ್ರವ ಪದಾರ್ಥವನ್ನು ನೀಡಬೇಕು. ಇನ್ನು ಓಆರ್‌ಎಸ್ ನೀಡುವಾಗ ಡಬ್ಲ್ಯೂ ಎಸ್‌ಓ ರೆಕಮೆಂಡೆಡ್ ಓಆರ್‌ಎಸ್ ನೀಡಬೇಕು. ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author