Sandalwood: ಮಕ್ಕಳನ್ನು ಬಸ್, ಆಟೋ, ಕಾರ್, ವ್ಯಾನ್‌ನಲ್ಲಿ ಶಾಲೆಗೆ ಕಳುಹಿಸುವ ಪೋಷಕರಿಗೆ ಮಾಸ್ಟರ್ ಆನಂದ್ ಕಿವಿ ಮಾತು ಹೇಳಿದ್ದಾರೆ. ನಿಜವಾಗಿಯೂ ನಡೆದ ಘಟನೆಯನ್ನು ವಿವರಿಸಿ, ಪೋಷಕರು ಈ ಬಗ್ಗೆ ಎಚ್ಚರ ವಹಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.
ಕಿವಿಮಾತು ಏನಂದ್ರೆ, ನಿಮ್ಮ ಮಕ್ಕಳನ್ನು ಪಿಕ್ ಮಾಡೋಕ್ಕೆ ಸ್ಕೂಲ್ ಬಸ್, ಆಟೋ ಬರತ್ತೆ. ಹಾರ್ನ್ ಮಾಡ್ತಾರೆ. ನೀವು ಕೆಲಸದಲ್ಲಿ ಬ್ಯುಸಿ ಇರಬಹುದು. ಯಾರು ಏನು ನೋಡದೇ, ಅರ್ಜೆಂಟ್‌ನಲ್ಲಿ ಶಾಲೆಗೆ ಲೇಟಾಯ್ತು ಹೋಗ್ರೋ, ಅಂತಾ ಕಳಿಸಿಬಿಡ್ತೀವಿ. ಅದನ್ನ ಕೇಳಿ ಮಕ್ಕಳೂ ಹೋಗಿ ಬಸ್ ಹತ್ತುತ್ತಾರೆ. ಈ ವಿಷಯವನ್ನು ಅರಿತ ಓರ್ವ ಮಕ್ಕಳ ಕಳ್ಳ, ಶಾಲೆ ಬಸ್ ಬರುವುದಕ್ಕೂ ಅರ್ಧಗಂಟೆ ಮುನ್ನ, ಮಕ್ಕಳ ಮನೆಯ ಹತ್ತಿರ ಬೇರೆ ಬಸ್ ಮೇಲೆ ಬಂದು, ಹಾರ್ನ್ ಮಾಡಿದ್ದಾನೆ.
ಪುಣ್ಯಕ್ಕೆ ಪೋಷಕರು ಇದು ಬೇರೆ ಬಸ್, ಈತ ಬೇರೆ ಡ್ರೈವರ್, ಅಲ್ಲದೆ, ಅರ್ಧ ಗಂಟೆ ಬೇಗ ಬಂದಿದ್ದಾನೆ ಎಂದು ಅನುಮಾನಿಸಿ. ಡ್ರೈವರ್‌ಗೆ ಕಾಲ್ ಮಾಡಿದ್ದಾರೆ. ಶಾಲೆ ನಿಜವಾದ ಡ್ರೈವರ್, ನಾನು ಇನ್ನು ಅರ್ಧ ಗಂಟೆ ಬಳಿಕ ಬರುತ್ತೇನೆ. ಪ್ರತಿದಿನ ಬರುವ ಸಮಯಕ್ಕೆ ಬರುತ್ತೇನೆ ಎಂದಿದ್ದಾನೆ. ಹಾಗಾಗಿ ಬಂದಿರುವ ಮಕ್ಕಳ ಕಳ್ಳನನ್ನು ಸರಿಯಾಗಿ ವಿಚಾರಿಸಿದಾಗ, ಆತ ಡ್ರೈವರ್ ಇವತ್ತು ರಜೆ. ಅದಕ್ಕೆ ನಾನು ಬಂದಿದ್ದೀನಿ ಎಂದಿದ್ದಾನೆ. ಬಳಿಕ ಆತ ಮಕ್ಕಳ ಕಳ್ಳ ಎಂದು ತಿಳಿದಿದೆ.
ಹೀಗಾಗಿ ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಬಸ್, ಆಟೋದಲ್ಲಿ ಕಳುಹಿಸುವ ಪೋಷಕರು, ಮಕ್ಕಳನ್ನು ಬಸ್ ತನಕ ಹೋಗಿ, ಅದೇ ಬಸ್, ಅದೇ ಡ್ರೈವರ್ ಅಲ್ವಾ ಅಂತಾ ನೋಡಿ ಕಳುಹಿಸಿ. ಮಕ್ಕಳ ಬಗ್ಗೆ ಎಚ್ಚರ ವಹಿಸಿ ಎಂದು ಮಾಸ್ಟರ್ ಆನಂದ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಮಾಸ್ಟರ್ ಆನಂದ್ ವೀಡಿಯೋ ನೋಡಲು ಇಲ್ಲಿ ಪ್ರೆಸ್ ಮಾಡಿ..