ನಾವು ಪ್ರತಿದಿನ ಸೋಶಿಯಲ್ ಮೀಡಿಯಾ ಓಪೆನ್ ಮಾಡಿದ್ರೆ, ಸಾವಿರಾರು ವೀಡಿಯೋಗಳು ಕಾಣ ಸಿಗುತ್ತದೆ. ಕೆಲವು ವೀಡಿಯೋಗಳು ಸಿಟ್ಟು ತರಿಸಿದ್ರೆ, ಕೆಲವು ವೀಡಿಯೋಗಳು ಅಸಹ್ಯ ಹುಟ್ಟಿಸುತ್ತದೆ. ಇನ್ನು ಕೆಲವು ಮನಸ್ಸಿಗೆ ನೆಮ್ಮದಿ ನೀಡುವ ವೀಡಿಯೋಗಳಾಗಿರುತ್ತದೆ. ಮತ್ತೆ ಕೆಲವು ವೀಡಿಯೇಗಳನ್ನು ನೋಡಿದಾಗ, ನಮಗೆ ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸಿದ್ರೆ, ಇನ್ನು ಕೆಲ ವೀಡಿಯೋಗಳು ಮುಖದ ಮೇಲೆ ಮಂದಹಾಸ ಬೀರುವಂತೆ ಮಾಡುತ್ತದೆ. ಅಂಥದ್ದೇ ಒಂದು ವೀಡಿಯೋ ಇಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರ ಮುಖದ ಮೇಲೆ ಮಂದಹಾಸ ತಂದಿದೆ.
ಕಾಡಿನಲ್ಲಿ ಕರಡಿ ಮರಿ, ತನಗೆ ಯಾರೂ ನೋಡುತ್ತಿಲ್ಲವೆಂಬ ಧೈರ್ಯದಿಂದ ಕುಣಿದು ಕುಪ್ಪಳಿಸಿದೆ. ಪುಟ್ಟ ಮಗುವಂತೆ ಡಾನ್ಸ್ ಮಾಡಿದ ಈ ಕರಡಿ ಮರಿ, ನೋಡೋಕ್ಕೆ ಸಖತ್ ಮುದ್ದು ಮುದ್ದಾಗಿ ಕಾಣ್ತಿದೆ. ಈ ವೀಡಿಯೋವನ್ನ ಯೋಧಾಫಾರೆವರ್ ಎನ್ನುವ ಟ್ವೀಟರ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. 13 ಸೆಕೆಂಡಿನ ಈ ಫನ್ನಿ ವೀಡಿಯೋವನ್ನ 2ಕ್ಕೂ ಹೆಚ್ಚು ಮಿಲಿಯನ್ ಜನ ವೀಕ್ಷಿಸಿದ್ದಾರೆ.
ಇದಕ್ಕೆ ಹಲವರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಕೆಲವರು ಈ ಕರಡಿ ಮರಿ ಎಷ್ಟು ಮುದ್ದು ಮುದ್ದಾಗಿ ಡಾನ್ಸ್ ಮಾಡುತ್ತದೆ ಎಂದು ಕಾಮೆಂಟ್ ಮಾಡಿದ್ರೆ, ಇನ್ನು ಕೆಲವರು ಇದು ನೋಡೋಕ್ಕೇನೋ ಮುದ್ದಾಗಿದೆ, ಆದ್ರೆ ತುಂಬಾ ಡೇಂಜರ್. ಫೋಟೋಗ್ರಾಫರ್ ಯಾಕೋ ರಿಸ್ಕ್ ತೊಕೊಂಡಿದ್ದಾನೆ ಅಂತಾ ಹೇಳಿದ್ದಾರೆ.
Dance like nobody's watching…🐻🕺😍😅 pic.twitter.com/GoEr16oog2
— 𝕐o̴g̴ (@Yoda4ever) June 2, 2022