Political News: ಓಟರ್ ಲೀಸ್ಟ್ನಿಂದ ನಟ ಪ್ರಕಾಶ್ ರಾಜ್ ಹೆಸರನ್ನು ತೆಗೆದು ಹಾಕಿದ್ದರ ಬಗ್ಗೆ ಪ್ರಕಾಶ್ ರಾಜ್ ಬೇಸರ ವ್ಯಕ್ತಪಡಿಸಿ, ನನ್ನ ಓಟ್ ಕಿತ್ಕೋಂಡ್ ಬಿಟ್ರು ಅಂತಾ ಹೇಳಿ, ವೀಡಿಯೋ ಕೂಡ ಮಾಡಿದ್ದರು.
ಈ ಬಗ್ಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಸಿ.ಟಿ.ರವಿ ,’ಜಸ್ಟ್ ಆಸ್ಕಿಂಗ್’ ಎನ್ನುತ್ತಲೇ ಪ್ರತಿದಿನವೂ ಹೊಸ ನಾಟಕಗಳನ್ನು ಮಾಡುತ್ತಾ ನಟ ಪ್ರಕಾಶ್ ರಾಜ್ ತಾನೊಬ್ಬ ಉತ್ತಮ ನಟ ಎನ್ನುವುದನ್ನು ಸಾಬೀತುಪಡಿಸುತ್ತಲೇ ಇದ್ದಾರೆ. ಈಗ ಎಸ್ಐಆರ್ ಪ್ರಕ್ರಿಯೆಯ ಸಂದರ್ಭದಲ್ಲಿ ಹೊಸದೊಂದು ನಾಟಕವಾಡಿ, ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾರೆ! ಎಂದು ರವಿ ವ್ಯಂಗ್ಯವಾಡಿದ್ದಾರೆ.
ಮತದಾರರ ಪಟ್ಟಿಯಲ್ಲಿ ಅವರು ನೋಂದಾಯಿಸಿದ ವಿಳಾಸಕ್ಕೆ ಭೇಟಿ ನೀಡಿದ ಬಿಎಲ್ಒಗಳಿಗೆ ನಾಲ್ಕು ವರ್ಷಗಳಿಂದ ಪ್ರಕಾಶ್ ರಾಜ್ ಆ ವಿಳಾಸದಲ್ಲಿ ವಾಸವಿಲ್ಲದಿರುವುದು ತಿಳಿದು ಬಂದಿದ್ದು, ಕಾನೂನು ಪ್ರಕ್ರಿಯೆ, ಮಹಜರುಗಳನ್ನು ನಡೆಸಿಯೇ ನಿಯಮಾನುಸಾರ ‘ಸ್ಥಳಾಂತರಗೊಂಡಿದೆ’ ಎಂದು ನಮೂದಿಸಲಾಗಿತ್ತು. ತಕ್ಷಣವೇ ಕ್ಯಾಮರಾ ಮುಂದೆ ಬಂದು, ಹೊಸ ನಾಟಕ ಆರಂಭಿಸಿದ ಪ್ರಕಾಶ್ ರಾಜ್, ತನ್ನ ಮತದಾನದ ಹಕ್ಕನ್ನು ಕಿತ್ತುಕೊಳ್ಳಲಾಗಿದೆ ಎಂದು ಆರೋಪಿಸಿದ್ದರು. ಆದರೆ, ಪಾಲಿಕೆ ಪ್ರಕಾಶ್ ರಾಜ್ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಸಾಬೀತುಪಡಿಸಿದೆ.
ಜಸ್ಟ್ ಆಸ್ಕಿಂಗ್ ಎನ್ನುತ್ತಾ ಮನ ಬಂದಂತೆ ಪ್ರಶ್ನಿಸುವ ಮುನ್ನ, ಸತ್ಯ ಎಂದಿದ್ದರೂ ಹೊರ ಬಂದೇ ಬರುತ್ತದೆ ಎನ್ನುವ ಸತ್ಯವನ್ನು ಪ್ರಕಾಶ್ ರಾಜ್ ಅರ್ಥ ಮಾಡಿಕೊಳ್ಳುವುದು ಒಳಿತು! ಎಂದು ಸಿ.ಟಿ.ರವಿ ಹೇಳಿದ್ದಾರೆ.
'ಜಸ್ಟ್ ಆಸ್ಕಿಂಗ್' ಎನ್ನುತ್ತಲೇ ಪ್ರತಿದಿನವೂ ಹೊಸ ನಾಟಕಗಳನ್ನು ಮಾಡುತ್ತಾ ನಟ ಪ್ರಕಾಶ್ ರಾಜ್ ತಾನೊಬ್ಬ ಉತ್ತಮ ನಟ ಎನ್ನುವುದನ್ನು ಸಾಬೀತುಪಡಿಸುತ್ತಲೇ ಇದ್ದಾರೆ. ಈಗ ಎಸ್ಐಆರ್ ಪ್ರಕ್ರಿಯೆಯ ಸಂದರ್ಭದಲ್ಲಿ ಹೊಸದೊಂದು ನಾಟಕವಾಡಿ, ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾರೆ!
ಮತದಾರರ ಪಟ್ಟಿಯಲ್ಲಿ ಅವರು ನೋಂದಾಯಿಸಿದ ವಿಳಾಸಕ್ಕೆ ಭೇಟಿ ನೀಡಿದ… pic.twitter.com/Rws3eQ13Cm
— Dr. Ravi C. T 🇮🇳 ಡಾ. ರವಿ ಸಿ. ಟಿ (@CTRavi_BJP) August 12, 2026




