ಡೇಟಿಂಗ್ ಆ್ಯಪ್‌ನಲ್ಲಿ ಸಿಗುವ ಯುವಕನ ಜತೆ ಸಲುಗೆಯಿಂದ ಇರುವ ಮುನ್ನ ಈ ಭಯಾನಕ ಸತ್ಯ ಕಥೆ ಓದಿರಿ..

Crime Story: ನಾವಿಂದು ಯಾವುದೋ ಕಾಲ್ಪನಿಕ ಕಥೆಯೋ, ಚಂದಾಮಾಮ ಕಥೆಯೋ ಹೇಳುತ್ತಿಲ್ಲ. ಬದಲಾಗಿ ಇದು ಇತ್ತೀಚಿನ ದಿನಗಳಲ್ಲಿ ನಡೆದ ಭಯಾನಕ ಘಟನೆ ಬಗ್ಗೆ ಹೇಳಲಿದ್ದೇವೆ. ಈ ಘಟನೆಯ ಬಗ್ಗೆ ಕೇಳಿದಾಗ ನೀವು ಖಂಡಿತವಾಗಿಯೂ ಬೆಚ್ಚಿಬೀಳಲಿದ್ದೀರಿ. ಅಲ್ಲದೇ, ಇದನ್ನು ಓದಿದ ಬಳಿಕ, ನೀವೂ ಅಥವಾ ನಿಮ್ಮ ಮನೆಯಲ್ಲಿ ಯುವತಿಯರಿದ್ದರೆ, ಅವರೂ ಎಚ್ಚೆತ್ತುಕ“ಳ್ಳಬೇಕಾದ್ದದ್ದು ತುಂಬಾ ಮುಖ್ಯ.

ಈಗ ನಾವಿಲ್ಲಿ ಹೇಳಲಿರುವ ಘಟನೆಯ ವ್ಯಕ್ತಿಗಳಿಗೆ ಕಾಲ್ಪನಿಕವಾದ ಹೆಸರನ್ನಿಡಲಿದ್ದೇವೆ. ಆದರೆ ಈ ಘಟನೆ ಮಾತ್ರ ಸತ್ಯವಾದದ್ದು. ಉತ್ತರ ಭಾರತದಲ್ಲಿ ನಡೆದಿದ್ದು.

ರಿಯಾ ಕಾಲೇಜಿಗೆ ಹೋಗುವ ಹುಡುಗಿ. ಆಕೆ ಡೇಟಿಂಗ್ ಆ್ಯಪ್‌ನಲ್ಲಿ ಓರ್ವ ಯುವಕನನ್ನು ಭೇಟಿಯಾಗುತ್ತಾಳೆ. ಸ್ವಲ್ಪ ದಿನದ ಬಳಿಕ ಆತ ಈಕೆಯನ್ನು ಭೇಟಿಯಾಗಲು ಹೇಳುತ್ತಾನೆ. ಇಬ್ಬರೂ ಭೇಟಿಯಾಗುತ್ತಾರೆ. ಕೆಫೆಯಲ್ಲಿ ಕಾಫಿ ಕುಡಿಯುತ್ತಾರೆ. 2ರಿಂದ 3 ಗಂಟೆ ಹರಟುತ್ತಾರೆ.

ಅಷ್ಟರಲ್ಲೇ ರಿಯಾಗೆ ಕಿರಣ್ ಇಷ್ಟವಾಗುತ್ತಾನೆ. ಅದೇ ವೇಳೆ ಕಿರಣ್ ಕೂಡ ರಿಯಾಗೆ ಪ್ರಪೋಸ್ ಮಾಡುತ್ತಾನೆ. ರಿಯಾ ತಕ್ಷಣವೇ ಅವನ ಪ್ರಪೋಸಲ್‌ಗೆ ಓಕೆ ಎನ್ನುತ್ತಾಳೆ. ಬಳಿಕ ಕಿರಣ್ ರಿಯಾಳ ಜತೆ ದೈಹಕ ಸಂಪರ್ಕವಾಗಲು ಬಯಸುತ್ತಾನೆ.

ಆದರೆ ರಿಯಾ ಸ್ವಲ್ಪ ದಿನ ಸಮಯ ಬೇಕು ಎನ್ನುತ್ತಾಳೆ. ಸಂಭಾವಿತನಂತೆ ಕಿರಣ್ ಕೂಡ ಅದಕ್ಕೆ ಓಕೆ ಎನ್ನುತ್ತಾನೆ. ಹೀಗೆ 1 ತಿಂಗಳು ಕಳೆಯುತ್ತದೆ. ಆಗ ಕಿರಣ್, ಈಗಲಾದರೂ ನಾವು ಸೇರೋಣ. ಈಗ ಇದೆಲ್ಲಾ ಕಾಮನ್. ಬಾ ಏನಾಗಲ್ಲಾ ಎಂದು ಹೇಳುತ್ತಾನೆ. ಆತನ ಮಾತಿಗೆ ಮರುಳಾದ ರಿಯಾ ಆತನ ಜತೆ ದೈಹಿಕ ಸಂಪರ್ಕ ಮಾಡುತ್ತಾಳೆ.

ಕೆಲ ದಿನಗಳಲ್ಲಿ ಆಕೆಗೆ ಯೂರಿನ್ ಇನ್‌ಫೆಕ್ಷನ್ ಆಗುತ್ತದೆ. ಅದು ಯೂರಿನ್ ಇನ್‌ಫೆಕ್ಷನ್ ಆದ ಕಾರಣಕ್ಕೆ ರಿಯಾ ವೈದ್ಯರ ಬಳಿ ಹೋಗಲು ಮುಜುಗರ ಪಟ್ಟು, ಮನೆಯಲ್ಲೇ ಮದ್ದು ಮಾಡಲು ಆರಂಭಿಸುತ್ತಾಳೆ.

ಆದರೆ ದಿನಗಳೆದಂತೆ ಆ ಇನ್‌ಫೆಕ್ಷನ್ ಹೆಚ್ಚಾಗುತ್ತಾ, ವೈದ್ಯರ ಬಳಿ ಹೋಗದಿದ್ದಲ್ಲಿ, ಅನಾಹುತವಾಗಬಹುದು ಎಂಬುದು ಆಕೆಗೆ ತಿಳಿಯುತ್ತದೆ. ಆಕೆ ವೈದ್ಯರಲ್ಲಿ ಹೋದಾಗ, ವೈದ್ಯರು ಆಕೆಯನ್ನು ಚೆಕ್ ಮಾಡಿ. ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ.

ನೀನು ಯಾರ ಜತೆಗಾದ್ರೂ ಸಂಭೋಗ ಮಾಡಿದ್ದಿಯಾ..? ಎಷ್ಟು ಬಾರಿ ಮಾಡಿದೆ..? ಎಂದು ಹೀಗೆಲ್ಲ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ರಿಯಾ, ಹೌದು ನಾನು ನನ್ನ ಬಾಯ್‌ಫ್ರೆಂಡ್ ಜತೆ 2 ಬಾರಿ ಸಂಭೋಗ ಮಾಡಿದ್ದೇನೆ. ಆದರೆ ಯೂರಿನ್ ಇನ್‌ಫೆಕ್ಷನ್ ಮಾಡಿದ ಬಳಿಕ ಅದು ಸಾಧ್ಯವಾಗಿಲ್ಲ ಎನ್ನುತ್ತಾಳೆ.

ಅದಕ್ಕೆ ವೈದ್ಯರು ನೀನು ನಾಳೆ ನಿನ್ನ ಬಾಯ್‌ಫ್ರೆಂಡ್‌ನನ್ನು ಕರೆದುಕ“ಂಡು ಬಾ ಎನ್ನುತ್ತಾರೆ. ಆಕೆ ಹೇಗೋ ಅವನನ್ನು ಮರುದಿನ ವೈದ್ಯರ ಬಳಿ ಕರೆ ತರುತ್ತಾಳೆ. ಅದಾಗಲೇ ವೈದ್ಯರು ಪೋಲೀಸರು, ಅಧಿಕಾರಿಗಳನ್ನೆಲ್ಲ ಕರೆಸಿರುತ್ತಾರೆ. ಮತ್ತು ಕಿರಣ್‌ನ ವೈದ್ಯಕೀಯ ತಪಾಸಣೆ ನಡೆಸಿ, ಪೋಲೀಸರು ಆತನನ್ನು ಬಂಧಿಸಿ, ಕರೆದೋಯ್ಯುತ್ತಾರೆ.

ರಿಯಾಗೆ ಇದನ್ನೆಲ್ಲ ನೋಡಿ, ಇಲ್ಲೇನಾಗುತ್ತದೆ ಅಂತಲೇ ತಿಳಿಯುವುದಿಲ್ಲ. ಬಳಿಕ ಆಕೆ ವೈದ್ಯರಲ್ಲಿಗೆ ಬಂದು, ನನ್ನ ಬಾಯ್‌ಫ್ರೆಂಡ್‌ನನ್ನು ಏಕೆ ಬಂಧಿಸಿದ್ದು ಎಂದು ಕೇಳುತ್ತಾಳೆ. ಆಗ ವೈದ್ಯರು ಹೇಳಿದ ಸತ್ಯ ಕಂಡು ಆಕೆ ಬೆಚ್ಚಿ ಬೀಳುತ್ತಾಳೆ.

ಏಕೆಂದರೆ, ಎಲ್ಲರಿಗೂ ಆಗುವುದು ನಾರ್ಮಲ್ ಯೂರಿನ್ ಇನ್‌ಫೆಕ್ಷನ್. ಆದರೆ ಆಕೆಗಾಗಿದ್ದು ನಾರ್ಮಲ್ ಅಲ್ಲ. ಬದಲಾಗಿ ಗಂಭೀರ ಖಾಯಿಲೆ. ಇದು ಬರೋದು, ಯಾರು ಶವದ ಜತೆ ದೈಹಿಕ ಸಂಪರ್ಕ ಮಾಡುತ್ತಾರೋ, ಅವರಿಂದ ಈ ಖಾಯಿಲೆ ಹರಡುತ್ತದೆ.

ಅಂದರೆ ಕಿರಣ್ ಶವದ ಜತೆ ದೈಹಿಕ ಸಂಪರ್ಕ ಮಾಡುತ್ತಿದ್ದ. ಬಳಿಕ ಈಕೆಯ ಜತೆ ದೈಹಿಕ ಸಂಪರ್ಕ ಮಾಡುತ್ತಿದ್ದ. ಹಾಗಾಗಿಯೇ ಈಕೆಗೆ ಆ ರೋಗ ಬಂದಿದ್ದು. ಅಲ್ಲದೇ, ತನಿಖೆ ನಡೆಸುವಾಗ ಆತನ ಮನೆಯಲ್ಲಿ 2 ಯುವತಿಯರ ಶವ ಪತ್ತೆಯಾಗಿತ್ತು. ಪೋಲೀಸರ ಬಳಿ ಆತ ಹೇಳಿದ್ದೇನೆಂದರೆ, ರಿಯಾ ದೈಹಿಕ ಸಂಪರ್ಕಕ್ಕೆ ಓಕೆ ಎನ್ನದಿದ್ದರೆ, ಆಕೆಯನ್ನೂ ಸಾಯಿಸಿ, ಆಕೆಯ ಶವದ ಜತೆ ನಾನು ಸೆಕ್ಸ್ ಮಾಡುತ್ತಿದ್ದೆ ಎಂದು.

ಇದು ಸೋಶಿಯಲ್ ಮೀಡಿಯಾ ಜಮಾನ. ಇಲ್ಲಿ ಎಲ್ಲವೂ ಕಲರ್‌ಫುಲ್ ಆಗಿ ಕಾಣಬಹುದು. ಆದರೆ ಸ್ವಲ್ಪ ಯಾಮಾರಿದ್ರೆ, ಅದು ನಮ್ಮ ಜೀವ ಮತ್ತು ಜೀವನಕ್ಕೆ ಅಪಾಯ ತರುತ್ತದೆ. ಹಾಗಾಗಿ ಇಂದಿನ ಯುವ ಪೀಳಿಗೆ ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ.

About The Author