Gold Rate: ಚಿನ್ನ ಕೊಳ್ಳುವವರಿಗೆ ಬಂಪರ್ ಆಫರ್!: ಸತತ 5 ದಿನಗಳಿಂದ ಇಳಿಕೆ ಕಂಡ ಬಂಗಾರದ ಬೆಲೆ

Gold Rate: ಚಿನ್ನ ಖರೀದಿಸುವ ಯೋಚನೆಯಲ್ಲಿರುವವರಿಗೆ ಮತ್ತೆ ಗುಡ್ ನ್ಯೂಸ್ ಸಿಕ್ಕಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಎರಡರ ಬೆಲೆಯೂ ಇಳಿಕೆಯಾಗಿದ್ದು, ಕಳೆದ ಕೆಲ ದಿನಗಳಿಂದ ದರದಲ್ಲಿ ಇಳಿಮುಖ ಮುಂದುವರಿದಿದೆ. ಗುರುವಾರ ಚಿನ್ನದ ದರದಲ್ಲಿ ಮತ್ತೊಮ್ಮೆ ಇಳಿಕೆ ದಾಖಲಾಗಿದೆ. ಪ್ರತಿ ಗ್ರಾಂ ಚಿನ್ನದ ಬೆಲೆ 115 ರೂಪಾಯಿ ಕಡಿಮೆಯಾಗಿದ್ದು, ಕಳೆದ ಐದು ದಿನಗಳಲ್ಲಿ ಒಟ್ಟಾರೆ 350 ರೂಪಾಯಿಗೂ ಹೆಚ್ಚು ಇಳಿಕೆಯಾಗಿದೆ.

ಪ್ರಸ್ತುತ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 13,130 ರೂಪಾಯಿ ಇದ್ದು, 10 ಗ್ರಾಂಗೆ 1,31,300 ರೂಪಾಯಿ ಆಗಿದೆ. ಅದೇ ರೀತಿ 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 14,324 ರೂಪಾಯಿ, ಅಂದರೆ 10 ಗ್ರಾಂಗೆ 1,43,240 ರೂಪಾಯಿ ಇದೆ. 18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 10,743 ರೂಪಾಯಿ ದಾಖಲಾಗಿದೆ. ಬೆಳ್ಳಿ ದರದಲ್ಲೂ ಇಳಿಕೆ ಕಂಡುಬಂದಿದೆ. ಪ್ರತಿ ಗ್ರಾಂಗೆ 5 ರೂಪಾಯಿ ಕಡಿಮೆಯಾಗಿದ್ದು, ಬೆಂಗಳೂರು, ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಪ್ರತಿ ಗ್ರಾಂ ಬೆಳ್ಳಿ 235 ರೂಪಾಯಿ, ಅಂದರೆ 100 ಗ್ರಾಂಗೆ 23,500 ರೂಪಾಯಿ ಇದೆ. ಚೆನ್ನೈ, ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ಪ್ರತಿ ಗ್ರಾಂ ಬೆಳ್ಳಿ ಬೆಲೆ 245 ರೂಪಾಯಿ ದಾಖಲಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆಯಲ್ಲಿ ಉಂಟಾಗಿರುವ ಇಳಿಕೆಯ ಪರಿಣಾಮ ದೇಶೀಯ ಮಾರುಕಟ್ಟೆಯ ಮೇಲೂ ಕಂಡುಬಂದಿದೆ. ಇರಾನ್-ಅಮೆರಿಕ ನಡುವಿನ ಉದ್ವಿಗ್ನತೆಯ ನಡುವೆಯೂ ಬಂಗಾರದ ಬೆಲೆ ಇಳಿಕೆಯಾಗಿರುವುದು ಖರೀದಿದಾರರಿಗೆ ಅನುಕೂಲಕರ ಬೆಳವಣಿಗೆಯಾಗಿದೆ.

ಚಿನ್ನ ಮತ್ತು ಬೆಳ್ಳಿ ದರದಲ್ಲಿ ಸತತ ಇಳಿಕೆ ಮುಂದುವರಿದಿರುವುದು ಮದುವೆ ಸೀಸನ್‌ ಹಾಗೂ ಹೂಡಿಕೆ ಉದ್ದೇಶದಿಂದ ಖರೀದಿ ಮಾಡಲು ಯೋಜಿಸುತ್ತಿರುವವರಿಗೆ ಉತ್ತಮ ಅವಕಾಶವಾಗಿ ಪರಿಣಮಿಸಿದೆ.

About The Author