ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಬಂದ್‌ಗೆ ಸಂಪೂರ್ಣ ಇಲ್ಲ ,ಜಿಲ್ಲೆಯಲ್ಲಿ ಕೆಎಸ್ ಆರ್ ಟಿಸಿ ಬಸ್ ಗಳು ಎಂದಿನಂತೆ ಸಂಚಾರ ನಡೆಸುತ್ತಿವೆ. ಆದರೆ ಕೆಲ ಸಂಘಟನೆಗಳಿಂದ ಸಾಂಕೇತಿಕವಾಗಿ ಹೋರಾಟ ನಡೆಸುತ್ತಿವೆ. ಕರವೇ ಪ್ರವೀಣ್ ಶೆಟ್ಟಿ ಬಣ ಇಂದು ಬೆಳಿಗ್ಗೆ 10 ಗಂಟೆಯಿಂದ ಜನರದಲ್ಲಿ ಸರ್ಕಾರದ ಅಣುಕು ಶವಯಾತ್ರೆ ಮಾಡಲು ಸಿಧರಿಸಿದ್ದಾರೆ.
ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ, ರಾಯಬಾಗ, ಕಾಗವಾಡ, ಅಥಣಿಯಲ್ಲಿ ಎಂದಿನಂತೆ ಜನಜೀವನ ನಡೆಯುತ್ತಿದ್ದು ಚಿಕ್ಕೋಡಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು, ಖಾಸಗಿ ವಾಹನಗಳ ಯಥಾಸ್ಥಿತಿ ಸಂಚರಿಸಲಿವೆ.ಉಳಿದಂತೆ ವ್ಯಾಪಾರಸ್ತರು ಸಂಘ, ಹೊಟೇಲ್ ಮಾಲಿಕರ ಸಂಘ ಆಟೋ ಚಾಲಕರ ಸಂಘದಿಂದ ಬಂದ್ ಗೆ ಯಾವುದೇ ರೀತಿಯ ಬೆಂಬಲ ಸಿಕ್ಕಿರುವುದಿಲ್ಲ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.
ಕಾವೇರಿ ಹೋರಾಟಕ್ಕೆ ಬೆಂಬಲ ಹಾಗೂ ಚಿಕ್ಕೋಡಿಯ ಜಿಎಲ್‌ಬಿಸಿ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಧರಣಿ ನಡೆಸುತ್ತಿದ್ದರು. ಅಥಣಿ, ಹುಕ್ಕೇರಿಯಲ್ಲೂ ಕನ್ನಡಪರ, ರೈತಪರ ಸಂಘಟನೆಗಳಿಂದ ಸಾಂಕೇತಿಕ ಹೋರಾಟ. ಆಯಾ ತಹಶಿಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧಾರಿಸಿದ್ದಾರೆ.
ಕರ್ನಾಟಕ ಬಂದ್ ಗೆ ಧಾರವಾಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ – ಜಿಲ್ಲಾಧಿಕಾರಿ ಸ್ಫಷ್ಟನೆ..
Haveri Bus stand: ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಖದೀಮನನ್ನು ಹಿಡಿದು ಬೆಂಡೆತ್ತಿದ ಧೀರ ನಾರಿ..!
congress joining: ಕಾಂಗ್ರೆಸ್ಸಿನಲ್ಲಿ ಪ್ರಬಲ ಅಭ್ಯರ್ಥಿಗಳಿಲ್ಲ: ಲಿಂಬಿಕಾಯಿ