www.karnatakatv.net :ಬೆಳಗಾವಿ : ಇದೇ ಪ್ರಪ್ರಥಮ ಬಾರಿಗೆ ಕುಂದಾನಗರಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟಬಹುಮತದೊಂದಿಗೆ ವಿಜಯ ಸಾಧಿಸಿದೆ. ಒಟ್ಟು 58 ಸಂಖ್ಯಾ ಬಲದ ಬೆಳಗಾವಿ ಮಹಾನಗರ ಪಾಲಿಕೆಯ 35 ಸ್ಥಾನಗಳನ್ನು ಬಿಜೆಪಿ ಗಳಿಸಿದೆ.
ಇನ್ನು ಕಾಂಗ್ರೆಸ್ 10 ಸ್ಥಾನಕ್ಕೆ ತೃಪ್ತಿಪಟ್ಟರೆ, ಪಕ್ಷೇತರರು 12 ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಎಐಎಂಐಎಂ ಪಕ್ಷ ಒಂದು ಸ್ಥಾನ ಗಳಿಸಿ ತನ್ನ ಖಾತೆ ತೆರೆದಿದೆ.
ಈ ಮೂಲಕ ಭಾಷೆ ಆಧಾರದ ಮೇಲೆ ನಡೆಯುತ್ತಿದ್ದ ಚುನಾವಣೆಯನ್ನ ಬೆಳಗಾವಿ ಜನರು ತಿರಸ್ಕರಿಸಿದ್ದಾರೆ. ಅಲ್ಲದೆ ಇದರಿಂದ ಎಂಇಎಸ್ ಮತ್ತು ಶಿವಸೇನೆ ಸಂಪೂರ್ಣ ನೆಲಕಚ್ಚಿದಂತಾಗಿದೆ. ಇನ್ನು 25 ವರ್ಷಗಳ ಬಳಿಕ ತನ್ನ ಚಿಹ್ನೆಯ ಮೇಲೆ ಸ್ಪರ್ಧೆಗಿಳಿದಿದ್ದ ಬಿಜೆಪಿ ಇದೀಗ ಇಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಅಧಿಕಾರದ ಗದ್ದುಗೆ ಏರಲು ಸಿದ್ಧವಾಗಿದೆ.
ನಾಗೇಶ್ ಕುಂಬಳಿ, ಕರ್ನಾಟಕ ಟಿವಿ- ಬೆಳಗಾವಿ