Belagavi News: ಯರಗಟ್ಟಿ ಐದು ವರ್ಷದ ಬಾಲಕಿಯನ್ನು ಪುಸಲಾಯಿಸಿ ಮಸೀದಿಯೊಳಗೆ ಕರೆತಂದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾದ ಆರೋಪಿಯನ್ನು ಬೆಳಗಾವಿ ಜಿಲ್ಲೆಯ ಮುರಗೋಡ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರ ಪಟ್ಟಣದ ತುಫೇಲ್ ಅಹ್ಮದ್ ದಾದಾಫೀರ್ (22) ಬಂಧಿತ ವ್ಯಕ್ತಿ. 2023 ಅಕ್ಟೋಬರ್ 5ರಂದು ಬಾಲಕೀಯ ಮೇಲೆ ಅತ್ಯಾಚಾರ ಎಸಗಿರುವ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಕುರಿತಾದ ದೃಶ್ಯಗಳು ವೈರಲ್ ಆದ ಬೆನ್ನಲ್ಲೇ ಪೊಲೀಸರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಮಸೀದಿಯೊಂದರಲ್ಲಿ ಘಟನೆ ನಡೆದಿದ್ದು ಬಾಲಕಿ ಅಳುತ್ತ ಮನೆಗೆ ಬಂದಾಗ ಪೋಷಕರು ಮಸೀದಿಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ನೊಂದ ಬಾಲಕಿ ಪೋಷಕರ ಜತೆಗೆ ಸ್ಥಳೀಯ ಮುಸ್ಲಿಂ ಮುಖಂಡರು ಸೇರಿಕೊಂಡು ರಾಜೀ ಸಂಧಾನ ಮಾಡಿಸಿ ಆರೋಪಿಯನ್ನು ಮಸೀದಿಯಿಂದ ಹೊರಹಾಕಿದ್ದಾರೆ.
ಪುನೀತ್ ಕೆರೆಹಳ್ಳಿ ಪೋಸ್ಟ್‌ನಿಂದ ಅಲರ್ಟ್
ನೊಂದ ಬಾಲಕಿ ತಂದೆ ಕುಡಿದ ಅಮಲಿನಲ್ಲಿ ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿಗೆ ಅವರಿಗೆ ಕರೆ ಮಾಡಿ ಪ್ರಕರಣ ಕುರಿತು ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ. ಪುನೀತ್ ಕೆರೆಹಳ್ಳಿ ಈ ಕುರಿತು ಮಾಡಿದ ಪೋಸ್ಟ್ ನೋಡಿ ಎಚ್ಚೆತ್ತ ಮುರಗೋಡೆ ಠಾಣೆ ಪೊಲೀಸರು ಖುದ್ದಾಗಿ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ದೂರು ಕೊಡಲು ವಿನಂತಿಸಿದ್ದಾರೆ. ಆದರೆ, ಮಕ್ಕಳ ಭವಿಷ್ಯದ ಹಿನ್ನೆಲೆ ಹೆತ್ತವರು ದೂರು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಸ್ಥಳೀಯ ಅಂಗಡಿ ಮೇಲ್ವಿಚಾರಕಿ ಕೊಟ್ಟ ದೂರಿನ ಆಧಾರದ ಮೇಲೆ ಪೋಕ್ಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಪ್ರಕರಣ ಮುಚ್ಚಿ ಹಾಕಲು ರಾಜಿ ಪಂಚಾಯತಿ ಮಾಡಿದವರು, ಬೆದರಿಕೆ ಹಾಕಿದವರನ್ನು ವಿಚಾರಣೆಗೆ ಒಳಪಡಿಸತ್ತೇವೆ. ಬಂಧಿತ ಆತನು ಮೌಲಿ ಹೌದೋ ಅಲ್ಲೋ ಎಂಬುದು ತನಿಖೆ ಬಳಿಕ ಗೊತ್ತಾಗಲಿದೆ ಎಂದು ಬೆಳಗಾವಿ ಎಸ್ ಪಿ ಡಾಕ್ಟರ್ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.