Thursday, February 6, 2025

Latest Posts

Belagavi News: ದೀಪಸ್ವರೂಪದಲ್ಲಿ ಭಕ್ತೆಗೆ ದರ್ಶನ ನೀಡಿದ ಗುರು ರಾಘವೇಂದ್ರ ಶ್ರೀಗಳು

- Advertisement -

Belagavi News: ದೀಪ ಸ್ವರೂಪ ರೀತಿಯಲ್ಲಿ ಭಕ್ತೆಗೆ ಮಂತ್ರಾಲಯದ ರಾಘವೇಂದ್ರ ಸಾಮಿಗಳು ದರ್ಶನ ನೀಡಿದ ಪವಾಡ ಸದೃಶ್ಯ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ ನಡೆದಿದೆ. ಈ ಮೂಲಕ ಗುರು ರಾಯರು ಭಕ್ತೆಯೊಬ್ಬಳಿಗೆ ದರ್ಶನ ನೀಡಿದ್ದಾರೆ. ತನ್ನಷ್ಟಕ್ಕೆ ತಾನು ರಾಯರ ನಾಮಸ್ಮರಣೆ ಮಾಡುತ್ತ ಪೂಜ್ಯಾಯ ರಾಘವೇಂದ್ರಾಯ ಮಂತ್ರ ಮಂತ್ರ ಪಠಿಸುತ್ತಿದ್ದ ವೇಳೆ ಭಕ್ತೆ ಶಿವಲೀಲಾ ಕೇದಾರಿ ಎಂಬುವವರ ಭಕ್ತಿಗೆ ಮೆಚ್ಚಿ ಯಾರೂ ಸಹ ನೂಕದೇ ರಾಘವೇಂದ್ರ ಸಾಮಿಗಳ ಭಾವಚಿತ್ರದ ಎದುರಿಗೆ ಇಡಲಾಗಿದ್ದ ದೀಪ ಮಂತ್ರ ನಿಧಾನವಾಗಿ ಮುಂದೆ ಸರಿಯುವ ಅಚ್ಚರಿ ಮೂಡಿಸಿದೆ.

ಅಲ್ಲದೆ ಮೊದಲ ಬಾರಿ ಹೀಗಾಗಿದನ್ನು ಕಂಡು ಶಿವಲೀಲಾ ತಮ್ಮ ಬಳಿಯ ಮೊಬೈಲ್‌ ತೆಗೆದು‌ ವಿಡಿಯೋ ರೆಕಾರ್ಡ್ ಮಾಡಲು ಮುಂದಾದಾಗಲೂ ಸಹ ಮತ್ತೊಮ್ಮೆ ಇದೇ ರೀತಿಯಾಗಿಯೇ ದೀಪ ಮುಂದೆಸರಿದಿದೆ. ಭಕ್ತರು ಬೇಡಿದ ವರಗಳನ್ನು ಕರುಣಿಸುತ್ತಾ ಕಲಿಯುಗದ ಕಾಮಧೇನು ಅಂತಲೇ ಭಕ್ತರಿಂದ ಕರೆಯಿಸಿಕೊಳ್ಳುವ ಗುರು ರಾಯರು ಬೃಂದಾವಬಸ್ಥರಾಗಿ ಶತಮಾನಗಳೇ ಕಳೆದರೂ ಸಹ ಅವರ ಆ ದಿವ್ಯ ಶಕ್ತಿಯ ಬಲದಿಂದ ನಿರಂತರ ಒಂದಿಲ್ಲೊಂದು ರೀತಿಯಲ್ಲಿ ಈ ರೀತಿಯ ಪವಾಡಗಳು ನಡೆಯುತ್ತಲೇ ಇರುತ್ತವೆ. ಏಕಾಗ್ರತೆ ಮತ್ತು ಪವಿತ್ರ ಮನಸ್ಸಿನಿಂದ ದಿನಕ್ಕೆ ಹಲವಾರು ಬಾರಿ ಈ ಸ್ತೋತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಎಲ್ಲಾ ರೀತಿಯ ತೊಂದರೆಗಳು ಮತ್ತು ಸಮಸ್ಯೆಗಳನ್ನು ನಿವಾರಿಸಬಹುದು ಎಂದು ಅನೇಕ ಭಕ್ತರು ಇಂದಿಗೂ ನಂಬುತ್ತುದ್ದಾರೆ. ಇದೇ ಕಾರಣಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತರು ಅನೇಕ ಸಂದರ್ಭಗಳಲ್ಲಿ ಅವರ ದರ್ಶನದ ಮತ್ತು ಅನುಗ್ರಹವನ್ನು ಪಡೆದಿದ್ದಾರೆ.

- Advertisement -

Latest Posts

Don't Miss