Friday, July 11, 2025

Latest Posts

Belagavi News: ಧಾರಾಕಾರ ಮಳೆ ಹಿನ್ನೆಲೆ, ಜೀವ ಕೈಯಲ್ಲಿ ಹಿಡಿದು ಕೆರೆ ದಾಟೋ ಮಕ್ಕಳು

- Advertisement -

Belagavi News: ಬೆಳಗಾವಿ: ಬೆಳಗಾವಿಯಲ್ಲಿ ಹಲವು ದಿನಗಳಿಂದ ಧಾರಾಕಾರವಾಗಿ ಮಳೆ ಶುರುವಾಗಿದ್ದು, ಪುಟ್ಟ ಪುಟ್ಟ ಮಕ್ಕಳು ಶಾಲೆಗೆ ಹೋಗುವ ಸಮಯದಲ್ಲಿ, ಜೀವ ಕೈಯಲ್ಲಿ ಹಿಡಿದು, ಕೆರೆ ದಾಟಿ ಶಾಲೆಗೆ ಹೋಗುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯಾದ್ಯಂತ ಬಾರೀ ಮಳೆಯಾಗಿದ್ದು, ಕೆರೆ, ಹಳ್ಳ, ಕೊಳ್ಳ, ನದಿಗಳು ತುಂಬಿ ಹರಿದಿವೆ. ಈ ಕಾರಣಕ್ಕಾಗಿ ಶಾಲೆಗೆ ಹೋಗುವ ಮಕ್ಕಳು, ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಶಾಲೆಗೆ ಹೋಗಬೇಕಿದೆ. ಗಾಳಿ ತುಂಬಿದ ಟ್ಯೂಬ್ ಬಳಸಿ, ಶಾಲೆಗೆ ಹೋಗುವ ಪರಿಸ್ಥಿತಿ ಈ ಮಕ್ಕಳದ್ದಾಗಿದೆ. ಬೆಳಗಾವಿಯ ಕಿತ್ತೂರು ತಾಲೂಕಿನ ನಿಂಗಾಪುರ ಗ್ರಾಮದ ಮಕ್ಕಳು, ಹುಲಿಕೆರೆ ಹಿನ್ನಿರನ್ನು ದಾಟಿ ಶಾಲೆಗೆ ಹೋಗಬೇಕಿದೆ.

ತಮ್ಮ ಮಕ್ಕಳನ್ನು ಸೇಫ್ ಆಗಿ ಶಾಲೆಗೆ ಕಳಿಸಲು ಪೋಷಕರು ಕೂಡ ಪ್ರಯತ್ನಿಸುತ್ತಿದ್ದು, ಗಾಳಿ ತುಂಬಿದ ಟ್ಯೂಬ್‌ಗೆ ಹಗ್ಗ ಕಟ್ಟಿ ಎಳೆದು ತಂದು ಮಕ್ಕಳನ್ನು ದಾಟಿಸುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಮಕ್ಕಳು ಸ್ವಲ್ಪ ಆಯತಪ್ಪಿದರೂ, ಮಕ್ಕಳು ಕೆರೆ ಪಾಲಾಗುವ ಆತಂಕವಿದೆ. ಹಾಗಾಗಿ ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಮನವಿ ಮಾಡಿದರೂ ಕೂಡ, ಪ್ರಯೋಜನವಾಗಿಲ್ಲ. ಕಳೆದ 20 ವರ್ಷಗಳಿಂದಲೂ ಮಕ್ಕಳು ಸೇತುವೆಗಾಗಿ ಪರದಾಟ ನಡೆಸಿದ್ದಾರೆ. ಅಧಿಕಾರಿಗಳಿಗೆ ಮನವಿ ಮಾಡಿದರೂ ಕೂಡ, ಅಧಿಕಾರಿಗಳು ಮಾತ್ರ ಡೋಂಟ್ ಕೇರ್ ಎಂದಿದ್ದಾರೆ.

- Advertisement -

Latest Posts

Don't Miss