Wednesday, October 15, 2025

Latest Posts

Belagavi News: ಸವದತ್ತಿ ಎಲ್ಲಮ್ಮ ದೇವಸ್ಥಾನದಲ್ಲಿ ದಾಖಲೆ ಮೊತ್ತದ ಕಾಣಿಕೆ ಸಂಗ್ರಹ

- Advertisement -

Belagavi News: ಬೆಳಗಾವಿ: ಬೆಳಗಾವಿಯ ಸವದತ್ತಿ ಎಲ್ಲಮ್ಮ ದೇವಸ್ಥಾನದ ಕಾಣಿಕೆ ಎಣಿಸಲಾಗಿದ್ದು, ದಾಖಲೆ ಮೊತ್ತದ ಕಾಣಿಕೆ ಸಂಗ್ರಹವಾಗಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಎಲ್ಲಮ್ಮ ದೇವಸ್ಥಾನ ಭಾರತದಲ್ಲಿರುವ 12 ಶಕ್ತಿ ಪೀಠಗಳಲ್ಲಿ 1. ಹಾಗಾಗಿ ದೇಶದ ಹಲವು ಭಾಗಗಳಿಂದ ದೇವಿಯ ಭಕ್ತರು, ದೇವಿ ದರ್ಶನಕ್ಕಾಗಿ ಇಲ್ಲಿಗೆ ಬರುತ್ತಾರೆ. ಹಾಗೆ ಬರುವ ಭಕ್ತರು ಕಾಣಿಕೆ ಹಾಕಿದ್ದು, ದೇವಿಗೆ ಕೋಟಿ ಕೋಟಿ ಕಾಣಿಕೆ ಬಂದಿದ್ದಲ್ಲದೇ, ಬೆಳ್ಳಿ, ಬಂಗಾರದ ಹರಕೆಗಳೂ ಬಂದಿದೆ.

ಮೂರೇ ತಿಂಗಳಲ್ಲಿ 3.81ಕೋಟಿ ಕಾಣಿಕೆ ಸಂಗ್ರಹವಾಗಿದೆ.  2025ರ ಏಪ್ರಿಲ್ 1ರಿಂದ ಜೂನ್ 30ರ ಅವಧಿಯಲ್ಲಿ ಭಕ್ತರು ಹುಂಡಿಗೆ ಹಾಕಿದ್ದ ಹಣ, ಚಿನ್ನಾಭರಣ, ಬೆಳ್ಳಿ ಆಭರಣಗಳ ಎಣಿಕೆ ಮಾಡಲಾಗಿದೆ..2023ರಲ್ಲಿ ಇದೇ ಅವಧಿಯಲ್ಲಿ 1.65ಕೋಟಿ, 2024ರಲ್ಲಿ ಈ ಅವಧಿಯಲ್ಲಿ 1.96ಕೋಟಿ ಕಾಣಿಕೆ ಸಂಗ್ರಹವಾಗಿತ್ತು. ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ದುಪ್ಪಟ್ಟು ಕಾಣಿಕೆ ಸಂಗ್ರಹವಾಗಿದೆ.

3.81ಕೋಟಿಯಲ್ಲಿ 3.39 ಕೋಟಿ ನಗದು, 32.94 ಲಕ್ಷ ಮೌಲ್ಯದ 340 ಗ್ರಾಂ ಚಿನ್ನಾಭರಣ, 9.79 ಲಕ್ಷದ 8.7 ಕೆಜಿ ಬೆಳ್ಳಿ ಆಭರಣಗಳನ್ನು ದೇವಿಗೆ ಭಕ್ತರು ಅರ್ಪಿಸಿದ್ದಾರೆ. ವಿವಿಧ ಸುಧಾರಣಾ ಕ್ರಮ ಅನುಸರಿಸಿದ್ದರಿಂದ ದೇವಸ್ಥಾನದ ಆದಾಯ ಹೆಚ್ಚಾಗಿದೆ. ಈ ಹಣವನ್ನು ಅಭಿವೃದ್ಧಿ ಕೆಲಸಕ್ಕೆ ಬಳಸುವುದಾಗಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ್ ದುಡಗುಂಟಿ ಹೇಳಿದ್ದಾರೆ.

- Advertisement -

Latest Posts

Don't Miss