Saturday, March 2, 2024

Latest Posts

ಕಾಂಗ್ರೆಸ್ ಗೆ ಕೈ ಕೊಟ್ಟ ಶಾಸಕ- ಆನಂದ್ ಸಿಂಗ್ ರಾಜೀನಾಮೆ..!

- Advertisement -

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಇನ್ನೂ 4 ವರ್ಷ ಏನೂ ಆಗಲ್ಲ ಸುಭದ್ರವಾಗಿರುತ್ತೆ ಅಂತ ಹೇಳಿಕೊಂಡು ಓಡಾಡ್ತಿದ್ದ ಮೈತ್ರಿ ನಾಯಕರಿಗೆ ಕಾಂಗ್ರೆಸ್ ಆನಂದ್ ಸಿಂಗ್ ಇದೀಗ ರಾಜೀನಾಮೆ ನೀಡೋ ಮೂಲಕ ದಂಗುಬಡಿಸಿದ್ದಾರೆ.

ಬಳ್ಳಾರಿಯ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಇದೀಗ ರಾಜೀನಾಮೆ ನೀಡಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. ಮೈತ್ರಿ ಸರ್ಕಾರದ ಶಾಸಕರು ಸಾಮೂಹಿಕ ರಾಜೀನಾಮೆ ನೀಡ್ತಾರೆ ನೋಡ್ತಾ ಇರಿ ಅಂತ ಬಿಜೆಪಿ ಹೇಳಿದ್ದ ಮಾತು ಇದೀಗ ನಿಜವಾಗವ ಲಕ್ಷಣ ಕಾಣ್ತಿದೆ. ನಿನ್ನೆ ದಿಢೀರನೆ ದೆಹಲಿಗೆ ಹೋಗಿ ಬಿಜೆಪಿಯ ರಾಜನಾಥ್ ಸಿಂಗ್ ರನ್ನು ಭೇಟಿ ಮಾಡಿದ್ದ ಆನಂದ್ ಸಿಂಗ್ ಇದೀಗ ರಾಜೀನಾಮೆ ನೀಡಿದ್ದು ಬಿಜೆಪಿ ಸೇರೋ ಮುನ್ಸೂಚನೆ ನೀಡಿದ್ದಾರೆ. ಅಲ್ಲದೆ ತಮ್ಮ ರಾಜೀನಾಮೆಯಿಂದ ಎದುರಾಗುವ ಉಪಚುನಾವಣೆಯಲ್ಲಿ ಬಿಜೆಪಿಯಿಂದ ತಮ್ಮ ಪುತ್ರ ಸಿದ್ಧಾರ್ಥ್ ಗೆ ಟಿಕೆಟ್ ನೀಡುವಂತೆಯೂ ಆನಂದ್ ಸಿಂಗ್ ಕೇಳಿದ್ದಾರೆ ಎನ್ನಲಾಗಿದೆ.

ಇನ್ನು ಶಾಸಕ ಆನಂದ್ ಸಿಂಗ್ ರಾಜೀನಾಮೆಗೆ ಕಾರಣಗಳನ್ನು ನೋಡೋದಾದ್ರೆ, ತಮ್ಮ ಮೇಲೆ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕನ ವಿರುದ್ಧ ಕ್ರಮ ಕೈಗೊಳ್ಳದ್ದಕ್ಕೆ ಆನಂದ್ ಸಿಂಗ್ ಪಕ್ಷದ ವಿರುದ್ಧ ಸಿಟ್ಟಾಗಿದ್ರು. ಅಲ್ಲದೇ ಇದೇ ಕಂಪ್ಲಿ ಗಣೇಶ್ ವಿಚಾರವಾಗಿ ಮೃದು ಧೋರಣೆ ತೋರಿದ್ದ ಪಕ್ಷದ ಮುಖಂಡರು ಗಣೇಶ್ ಅಮಾನತು ಆದೇಶ ವಾಪಸ್ ಪಡೆದದ್ದು ಕೂಡ ಆನಂದ್ ಸಿಂಗ್ ಕೋಪನ್ನು ಮತ್ತಷ್ಟು ಜಾಸ್ತಿ ಮಾಡಿತ್ತು. ಇನ್ನು ಇದೇ ವಿಚಾರವಾಗಿ ಆನಂದ್ ಸಿಂಗ್ ಕುಟುಂಬಸ್ಥರೂ ಕೂಡ ರಾಜೀನಾಮೆ ನೀಡುವಂತೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಒಟ್ಟಾರೆ ಆನಂದ್ ಸಿಂಗ್ ರಾಜೀನಾಮೆ ಬಳಿಕ ಮತ್ತಷ್ಟು ಶಾಸಕರು ರಾಜೀನಾಮೆ ನೀಡೋದಕ್ಕೆ ಸಜ್ಜಾಗಿದ್ದಾರೆ ಅಂತ ಹೇಳಲಾಗ್ತಿದ್ದು ಮೈತ್ರಿ ನಾಯಕರಿಗೆ ಇದೀಗ ಢವಢವ ಶುರುವಾಗಿದೆ.

ಜೆಡಿಎಸ್ ಜೊತೆ ಸೇರಿ ಹಾಳಾಯ್ತಾ ಕಾಂಗ್ರೆಸ್..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=COpWrYx6x4A
- Advertisement -

Latest Posts

Don't Miss