State News:
Feb:27:ಇಂದು ಶಿವಮೊಗ್ಗ ಹಾಗು ಕುಂದಾನಗರಿ ಬೆಳಗಾವಿಯಲ್ಲಿ ನಮೋ ಮೇನಿಯಾ ಜೋರಾಗಿತ್ತು. ಹಾಗೆಯೇ ನರೇಂದ್ರ ಮೋದಿ ಕೂಡಾ ಜನಪರ ಭಾಷಣ ಮಾಡಿ ಜನಪರ ಯೋಜನೆಗಳ ಬಗ್ಗೆ ಶ್ಲಾಘಿಸಿದರು. ಜೊತೆಗೆ ಯಡಿಯೂರಪ್ಪ ಅನ್ನದಾನ ಯೋಜನೆಯನ್ನು ಸಿರಿಧಾನ್ಯ ಯೋಜನೆ ಕುರಿತಾಗಿ ಹೇಳುವಂತಹ ಸಂದರ್ಭದಲ್ಲಿ ಮರುಕಳಿಸಿದರು. ಈ ವೇಳೆ ಯಡಿಯೂರಪ್ಪ ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರ ಅವರ ಅನ್ನದಾನ ಯೋಜನೆ ಅನೇಕ ಕುಟುಂಬಗಳಿಗೆ ವರದಾನವಾಗಿದೆ ಬಿಎಸ್ವೈ ಅವರ ಸಹಕಾರ ಸಿರಿಧಾನ್ಯ ಯೋಜನೆಯಲ್ಲಿ ಬಹಳಷ್ಟಿದೆ ಎಂದ ಮೋದಿ ಶ್ರೀಅನ್ನದ ಬಗ್ಗೆಯೂ ಉಲ್ಲೇಖಿಸಿದರು. ಯಡಿಯೂರಪ್ಪ ರೈತ ಬಂಧು ಎಂದು ಕೊಂಡಾಡಿದರು.
ಬೆಳಗಾವಿಯಲ್ಲಿ ‘ನಮೋ’ ಕನ್ನಡ ಪ್ರೇಮ: ಕನ್ನಡದಲ್ಲಿ ಮಾತು ಪ್ರಾರಂಭಿಸಿದ ನರೇಂದ್ರ ಮೋದಿ..!




