Hubli News: ಹುಬ್ಬಳ್ಳಿ: ಮನೆಗಳ್ಳತನ ಮತ್ತು ಆಕಳು ಕಳ್ಳತನ ಪ್ರಕರಣವನ್ನು ಬೇಧಿಸಿ, ನಾಲ್ಕು ಆರೋಪಿಗಳನ್ನ ಬಂಧಿಸುವಲ್ಲಿ ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ಮಂಟೂರ್ ರಸ್ತೆಯಲ್ಲಿ ಮಿಲ್ಲತ್ ನಗರದಲ್ಲಿ ಮನೆಗಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಸಮೀರ್ ಭೇಪಾರಿ ಎಂಬ ಕಳ್ಳನನ್ನ ಇನ್ಸ್ಪೆಕ್ಟರ್ ಎಸ್.ಆರ್.ನಾಯಕ ವಿಶೇಷ ತಂಡ ರಚಿಸಿ, ಕೆಲವೆ ದಿನಗಳಲ್ಲಿ ಬಂಧನ ಮಾಡಿ ಆತನಿಂದ 12 ಗ್ರಾಂ ಬಂಗಾರ 40 ಗ್ರಾಂ ಬೆಳ್ಳಿ ವಶಕ್ಕೆ ಪಡೆದು ಅದರ ಮಾಲೀಕರಿಗೆ ಒಪ್ಪಿಸುವ ಕೆಲಸವನ್ನು ಮಾಡಿದ್ದಾರೆ.
ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದ್ರೆ, ಹುಬ್ಬಳ್ಳಿ ಬಿಡ್ನಾಳದಲ್ಲಿ ಪ್ರಕಾಶ ಪಾಟೀಲ ಎಂಬವರು ಎರಡು ಆಕಳನ್ನು ಕದ್ದು ಹಾವೇರಿ ಜಿಲ್ಲೆಯ ದನಗಳ ಸಂತೆಯಲ್ಲಿ ಮಾರಾಟಕ್ಕೆ ಮುಂದಾಗಿದ್ದ ಮೂವರು ಕಳ್ಳರನ್ನು, ಬೆಂಡಿಗೇರಿ ಪೊಲೀಸ್ ಠಾಣೆ ಪೋಲಿಸರು ಬಂಧನ ಮಾಡಿದ್ದಾರೆ. ಬರೊಬ್ಬರಿ ಎಂಬತ್ತು ಸಾವಿರ ಬೆಲೆ ಬಾಳುವ ಎರಡು ಆಕಳನ್ನು ಕದ್ದು ಹಾವೇರಿಯಲ್ಲಿ ಮಾರಾಟಕ್ಕೆ ಮುಂದಾಗಿದ್ದ ನಾಗರಾಜ ಪಾಟೀಲ, ಬಸ್ಸು ಕಟ್ಟಿ ಬಿಡ್ನಾಳ, ರಿಯಾಣ ರೋನ ಎಂಬಾತರನ್ನು ಬಂಧನ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಇನ್ನು ಹಸು ಮಾರಾಟ ಮಾಡುವ ಮುನ್ನ ಕಳ್ಳರು ಯೂಟ್ಯೂಬ್ ಚಾನಲ್ ಗೆ ಇಂಟರ್ ವ್ಯೂವ್ ಕೊಟ್ಟಿದ್ರೂ, ಆ ವೀಡಿಯೋ ಈಗ ಸಖತ್ ವೈರಲ್ ಆಗಿದೆ. ಹಸು ಕದ್ದು ಹಳ್ಳಕ್ಕೆ ಬಿದ್ದ ಕಳ್ಳರ ಕಥೆ ನೋಡಿದ ಹುಬ್ಬಳ್ಳಿ ಜನರು ಇಂತಹವರಿಗೆ ಕಠಿಣ ಶಿಕ್ಷೆ ಆಗಲಿ ಎಂದಿದ್ದಾರೆ.
ಇನ್ನೂ ಎರಡು ಪ್ರಕರಣವನ್ನು ಕಡಿಮೆ ಅವದಿಯಲ್ಲಿ ಬೇದಿಸಿದ ಬೆಂಡಿಗೇರಿ ಠಾಣೆ ಇನ್ಸ್ಪೆಕ್ಟರ್ ಶಶೀದರ್ ನಾಯಕ ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಕಮೀಷನರ್ ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ.




