ಡ್ರೈ ಫ್ರೂಟ್ಸ್‌ಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಹೊಂದಿದ ಒಣಹಣ್ಣು ಅಂದರೆ ಬಾದಾಮಿ. ಬಾದಾಮಿಯಿಂದ ಥರಥರದ ಖಾದ್ಯಗಳನ್ನ ಮಾಡ್ತೇವೆ. ಬಾದಾಮ್ ಇಲ್ಲದೇ ಡೆಸರ್ಟ್ ತಯಾರಾಗೋದೇ ಇಲ್ಲ. ಬಾದಾಮ್ ಬೀಜದ ಉಪಯೋಗಗಳ ಬಗ್ಗೆ ನಾವು ಈ ಮೊದಲೇ ಹೇಳಿದ್ದೇವೆ. ಇದೀಗ ಬಾದಾಮ್ ತೈಲಗಳ ಉಪಯೋಗದ ಬಗ್ಗೆ ತಿಳಿಯೋಣ ಬನ್ನಿ.
1.. ಸಧೃಡವಾದ, ಉದ್ದ, ಕಪ್ಪಾದ ಕೂದಲು ನಿಮ್ಮದಾಗಬೇಕು ಅಂದ್ರೆ ಬಾದಾಮ್ ಎಣ್ಣೆಯ ಮಸಾಜ್ ಖಂಡಿತ ಮಾಡಿ. ಬಾದಾಮ್ ಎಣ್ಣೆ, ತೆಂಗಿನ ಎಣ್ಣೆ ಸಮಪ್ರಮಾಣದಲ್ಲಿ ಸೇರಿಸಿ ಕೊಂಚ ಡಬಲ್ ಬಾಯ್ಲಿಂಗ್ ಮಾಡಿ ಮಸಾಜ್ ಮಾಡಿಕೊಳ್ಳಿ.
2.. ಮುಖದ ಕಾಂತಿ ಇಮ್ಮಡಿಗೊಳ್ಳೋದಕ್ಕೆ ನೀವು ಬಾದಾಮ್ ಎಣ್ಣೆ ಬಳಸಬಹುದು. ಬಾದಾಮ್ ಎಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಬಹುದು.
3.. ದೇಹಕ್ಕೆ ಎಣ್ಣೆ ಮಸಾಜ್ ಮಾಡುವಾಗ ಬಾದಾಮ್ ಎಣ್ಣೆ ಬಳಸಬಹುದು. ಇದರಿಂದ ದೇಹ ಶಕ್ತಿಯುತವಾಗಿರುತ್ತದೆ.
4.. ದೇಹದ ಕೊಬ್ಬು ಕರಗಿಸೋದ್ರಲ್ಲೂ ಬಾದಾಮ್ ತೈಲ ಸಹಕಾರಿಯಾಗಿದೆ. ಡಬಲ್ ಬಾಯ್ಲಿಂಗ್ ಪ್ರೊಸೆಸ್ ಮೂಲಕ ಬಾದಾಮ್ ಎಣ್ಣೆಯನ್ನ ಕರ್ಪೂರದೊಂದಿಗೆ ಕಾಯಿಸಬೇಕು. ಅಂದ್ರೆ ಒಂದು ಬೌಲ್‌ನಲ್ಲಿ ನೀರನ್ನ ಬೀಸಿ ಮಾಡೋಕ್ಕೆ ಇಟ್ಟು, ನೀರು ಬಿಸಿಯಾದ ಬಳಿಕ ಅದರ ಮೇಲೆ ಮತ್ತೊಂದು ಚಿಕ್ಕ ಬೌಲ್ ಇರಿಸಿ, ಅದರಲ್ಲಿ ನಾಲ್ಕು ಚಮಚ ಬಾದಾಮ್ ಎಣ್ಣೆ ಮತ್ತು ಎರಡು ಕರ್ಪೂರ ಪುಡಿ ಮಾಡಿ ಹಾಕಿ ಕೊಂಚ ಬಿಸಿ ಮಾಡಿ. ಆ ಎಣ್ಣೆಯನ್ನ ಕೊಂಚ ತಣ್ಣಗಾದ ಮೇಲೆ ಬೊಜ್ಜಿರುವ ಜಾಗದಲ್ಲಿ 2 ನಿಮಿಷ ಮಸಾಜ್ ಮಾಡಿ. ನಂತರ ಆ ಸ್ಥಳದಲ್ಲಿ ಬಟ್ಟೆಯಿಂದ ಸುತ್ತಿ.
5.. ಬೆಲ್ಲಿ ಬಟನ್ ಆಯ್ಲಿಂಗ್ ಅಂದ್ರೆ ನಾಭಿ ಚಿಕಿತ್ಸೆ ವೇಳೆ ನೀವು ಬಾದಾಮ್ ತೈಲವನ್ನ ಖಂಡಿತ ಬಳಸಬೇಕು. ಬಾದಾಮ್ ಎಣ್ಣೆಯನ್ನ ಹೊಕ್ಕಳಿಗೆ ಹಾಕುವುದರಿಂದ ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದು ಎಂಬುದು ಆಯುರ್ವೇದದ ಅಭಿಪ್ರಾಯ. ಇದರಲ್ಲಿ ವಿಟಮಿನ್ ಇ ಹೇರಳವಾಗಿದ್ದು, ಕೂದಲಿಗೆ ಉತ್ತಮವಾಗಿದೆ. ಇದನ್ನ ಹೊಕ್ಕಳಿಗೆ ಹಾಕುವುದರಿಂದ ಮುಖಕ್ಕೆ ನ್ಯಾಚುರಲ್ ಗ್ಲೋ ಬರುತ್ತದೆ.
6.. ಮಂಡಿ ನೋವಿಗೂ ಬಾದಾಮ್ ಎಣ್ಣೆ ಮೂಲಕ ಪರಿಹಾರ ಕಂಡುಕೊಳ್ಳೂಬಹುದು. ಕೊಂಚ ಬಾದಾಮ್ ಎಣ್ಣೆಯಲ್ಲಿ ಒಂದು ಲವಂಗ ಹಾಕಿ ಬಿಸಿ ಮಾಡಿ, ಅದು ಕೊಂಚ ತಣ್ಣಗಾದ ಮೇಲೆ ಮಂಡಿಗೆ ಹಚ್ಚಿ ಲೈಟ್ ಆಗಿ ಮಸಾಜ್ ಮಾಡಿ.
7.. ಪುಟ್ಟ ಮಕ್ಕಳಿಗೆ ಬಾದಾಮ್ ಎಣ್ಣೆಯಿಂದ ಮಸಾಜ್ ಮಾಡಿದ್ರೆ ಅವರ ಮೂಳೆಗಳು ಗಟ್ಟಿಗೊಳ್ಳುತ್ತದೆ.
8 ಥರ ಥರಹದ ಪರ್ಫ್ಯೂಮ್ ಬಳಸುವ ಬದಲು ಸುಗಂಧಭರಿತ ಬಾದಾಮ್ ಎಣ್ಣೆಯನ್ನ ಕೊಂಚ ಮಸಾಜ್ ಮಾಡಿಕೊಳ್ಳಿ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.