Thursday, April 17, 2025

Latest Posts

ಬಾಳೆಹಣ್ಣು ತಿಂದ್ರೆ ತೂಕ ಹೆಚ್ಚುತ್ತಾ..? ತೂಕ ಇಳಿಯುತ್ತಾ..?: ಇಲ್ಲಿದೆ ನೋಡಿ ಉತ್ತರ..

- Advertisement -

ದಪ್ಪಗಿದ್ದವರು ಸಣ್ಣಗಾಗೋಕ್ಕೆ, ಸಣ್ಣಗಿದ್ದವರು ದಪ್ಪಗಾಗೋಕ್ಕೆ ಏನೇನೆಲ್ಲಾ ಮಾಡ್ತಾರೆ. ಈ ಎರಡೂ ಕಾರಣಕ್ಕೆ ಜಿಮ್‌ ಸೇರ್ತಾರೆ. ಮಾರ್ಕೆಟ್‌ನಲ್ಲಿ ಸಿಗೋ ಪ್ರಾಡಕ್ಟ್‌ಗಳನ್ನೆಲ್ಲ ಬಳಕೆ ಮಾಡ್ತಾರೆ. ಆದ್ರೆ ಆ ಪ್ರಾಡೆಕ್ಟ್‌ಗಳಿಂದಾಗುವ ಎಫೆಕ್ಟ್‌ಗಳಿಗಿಂತ ಸೈಡ್ ಎಫೆಕ್ಟ್‌ಗಳೇ ಹೆಚ್ಚು.

ಇನ್ನು ಅದು ತಿಂದ್ರೆ ದಪ್ಪಗಾಗ್ತಾರಾ..? ಇದು ತಿಂದ್ರೆ ಸಣ್ಣ ಆಗ್ತಾರಾ ಅಂತಾ ಎಲ್ಲ ಆಹಾರಗಳ ಮೇಲೆ ಪ್ರಶ್ನೆ ಉದ್ಭವಿಸುತ್ತಿರುತ್ತೆ. ಇವುಗಳಲ್ಲಿ ಬಾಳೆಹಣ್ಣು ತಿನ್ನೋ ಡೌಟ್ ಕೂಡಾ ಒಂದು. ಬಾಳೆಹಣ್ಣು ತಿಂದ್ರೆ ದಪ್ಪ ಆಗ್ತಾರಾ..? ಇಲ್ಲಾ ಸಣ್ಣ ಆಗ್ತಾರಾ..? ತೂಕ ಹೆಚ್ಚಿಸಿಕೊಳ್ಳೋಕ್ಕೆ ಮತ್ತು ತೂಕ ಇಳಿಸಿಕೊಳ್ಳೋಕ್ಕೆ ಹೊರಟಿರೊ ಜನರಲ್ಲಿ ಮೂಡುವ ಸಾಮಾನ್ಯ ಪ್ರಶ್ನೆ ಇದು.

ಸಣ್ಣ ಮತ್ತು ದಪ್ಪ ಆಗೋದು ನಾವು ಎಷ್ಟು ಮತ್ತು ಯಾವಾಗ ಬಾಳೆಹಣ್ಣು ತಿನ್ನುತ್ತೇವೆ ಅನ್ನೋದರ ಮೇಲೆ ಡಿಪೆಂಡ್ ಆಗಿರತ್ತೆ. ಬಾಳೆ ಹಣ್ಣು ತಿಂದಾಗ ತುಂಬಾ ಹೊತ್ತು ಶಕ್ತಿಯುತವಾಗಿರ್ತೀವಿ. ಕ್ರಿಯಾಶೀಲರಾಗಿರ್ತೀವಿ.
ಬಾಳೆಹಣ್ಣಿನಲ್ಲಿ ಕ್ಯಾಲೋರೀಸ್ ಇರುತ್ತದೆಂಬ ಕಾರಣಕ್ಕೆ ಕೆಲವರು ಇದನ್ನ ತಿನ್ನಲು ಹಿಂಜರಿಯುತ್ತಾರೆ. ಆದರೆ ಇದರ ಜೊತೆಗೆ ಬಾಳೆಹಣ್ಣಿನಲ್ಲಿ ಮ್ಯಾಗ್ನಿಷಿಯಮ್, ವಿಟಾಮಿನ್ ಬಿ6, ವಿಟಾಮಿನ್ ಸಿ, ಪೊಟ್ಯಾಷಿಯಮ್ ಇದೆ.

ಇನ್ನು ತೂಕ ಕಳೆದುಕೊಂಡು ಸ್ಲಿಮ್ ಆಗ್ಬೇಕು ಅಂದ್ರೆ ಬೆಳಿಗ್ಗೆ ಖಾಲಿ ಹೊಟ್ಟೇಲಿ ಒಂದು ಬಾಳೆಹಣ್ಣು ತಿನ್ನಿ. ಇದರಿಂದ ತೂಕ ಕಳೆದುಕೊಳ್ಳಬಹುದು. ಒಮ್ಮೆಲೆ 2,3 ಬಾಳೆಹಣ್ಣು ತಿನ್ನೋ ಸಾಹಸ ಮಾಡ್ಬೇಡಿ. ಅಲ್ಲದೇ, ಕೆಲವರಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಿತ್ತಳೆ, ಬಾಳೆಹಣ್ಣು ಹೀಗೆ ದೇಹಕ್ಕೆ ತಂಪು ನೀಡುವ ಹಣ್ಣು ತಿಂದ್ರೆ ಶೀತ- ಕೆಮ್ಮು ಶುರುವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಕ್ರಮ ಅನುಸರಿಸುವ ಮೊದಲು ನಿಮ್ಮ ದೇಹ ಇದಕ್ಕೆ ಒಗ್ಗುತ್ತಾ ಅನ್ನೋದನ್ನಾ ತಿಳಿದುಕೊಳ್ಳಿ.

ಇನ್ನು ದಪ್ಪ ಆಗ್ಬೇಕು ಅಂದ್ರೆ, ಬೆಳಿಗ್ಗೆ ತಿಂಡಿ ಆದ್ನಂತ್ರ ಮತ್ತು ಮಧ್ಯಾಹ್ನ ಊಟ ಮಾಡೋಕಿಂತ ಮುಂಚೆ ಎರಡು ಬಾಳೆ ಹಣ್ಣು ತಿನ್ನಿ. ಫಿಟ್‌ ಆ್ಯಂಡ್ ಫೈನ್ ಆಗಿರ್ಬೇಕು ಅಂದ್ರೆ ಮಧ್ಯಾಹ್ನಾ ಊಟಾ ಆದ್ಮೇಲೆ ಒಂದ್ ಬಾಳೆ ಹಣ್ಣು ತಿನ್ನಿ.

ಸೂರ್ಯಾಸ್ತದ ನಂತರ ಬಾಳೆಹಣ್ಣು ತಿನ್ನೋದು ಆರೋಗ್ಯಕ್ಕೆ ಒಳ್ಳೆದಲ್ಲ. ಇನ್ನು ಬಾಳೆಹಣ್ಣು ತಿಂದ್ರೆ ನಿಮಗೆ ಅಲರ್ಜಿ ಅನ್ನೋದಾದ್ರೆ ಒಮ್ಮೆ ಡಾಕ್ಟರ್‌ ಹತ್ರಾ ಚೆಕ್ ಮಾಡಿಸಿಕೊಳ್ಳಿ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

- Advertisement -

Latest Posts

Don't Miss