Friday, September 20, 2024

Latest Posts

ಸೆಲೆಬ್ರಿಟಿಗಳು ತಮ್ಮ ಡಯಟ್‌ನಲ್ಲಿ ಸೌತೇಕಾಯಿಯನ್ನ ಹೆಚ್ಚು ಬಳಸೋದೇಕೆ ಗೊತ್ತಾ..?

- Advertisement -

ಸೆಲೆಬ್ರಿಟಿಗಳಿಗೆ, ವರ್ಕೌಟ್ ಮಾಡುವವರಿಗೆ, ಡಯೇಟ್ ಮಾಡುವವರಿಗೆ ಫೇವರಿಟ್ ಫುಡ್ ಅಂದ್ರೆ ಸಲಾಡ್. ಅದರಲ್ಲೂ ಸೌತೇಕಾಯಿಗೆ ಪ್ರಮುಖ ಸ್ಥಾನ. ಹಾಗಾದ್ರೆ ಸೌತೇಕಾಯಿ ತಿನ್ನುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ.

1.. ತ್ವಚೆಯ ಸಮಸ್ಯೆಗಾಗಿ ಸೌತೇಕಾಯಿ ಬಳಕೆ ಉತ್ತಮ. ಕಣ್ಣಿನ ಸುತ್ತಲೂ ಕಪ್ಪುಗಟ್ಟುವುದು, ಮುಖದಲ್ಲಿ ಗುಳ್ಳೆಯ ಕಲೆಗಳಿದ್ದಲ್ಲಿ ಅದನ್ನ ಹೋಗಲಾಡಿಸಲು ಸೌತೇಕಾಯಿ ಬಳಸಿ. ಮುಖದಲ್ಲಿ ಗ್ಲೋ ಬರಲು, ಸೌತೇಕಾಯಿಯನ್ನು, ಎಳನೀರಿನೊಂದಿಗೆ ಪೇಸ್ಟ್ ಮಾಡಿಕೊಳ್ಳಿ. ಆ ಪೇಸ್ಟ್‌ನ್ನ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. 15 ನಿಮಿಷದ ಬಳಿಕ ಉಗುರುಬೆಚ್ಚಿನ ನೀರಿನಿಂದ ಮುಖ ತೊಳೆದುಕೊಳ್ಳಿ.

2.. ಐಸ್ ಫೇಶಿಯಲ್ ಮಾಡುವಾಗ ಸೌತೇಕಾಯಿ ಬಳಸಿದ್ದಲ್ಲಿ ಉತ್ತಮ ರಿಸಲ್ಟ್ ಪಡಿಯಬಹುದು. ಕಣ್ಣಿನ ಸುತ್ತಲೂ ಕಪ್ಪುಗಟ್ಟಿದ್ದಲ್ಲಿ, ಕಣ್ಣ ಮೇಲೆ ಸೌತೇಕಾಯಿ ತುಂಡನ್ನಿರಿಸಿಕೊಳ್ಳಿ.

3.. ತೂಕ ಇಳಿಸುವವರಿಗೆ ಸೌತೇಕಾಯಿ ರಾಮಬಾಣ. ಸೌತೇಕಾಯಿ ಶೇ.95ರಷ್ಟು ನೀರಿನ ಅಂಶ, ವಿಟಾಮಿನ್ ಬಿ12, ಮ್ಯಾಗ್ನಿಶಿಯಂ, ಪೊಟ್ಯಾಷಿಯಂ ಅಂಶ ಹೊಂದಿದೆ. ನಾವು ಊಟಕ್ಕೂ ಮುನ್ನ ಸೌತೇಕಾಯಿ ಸಲಾಡ್ ತಿಂದ್ರೆ, ಅರ್ಧ ಹೊಟ್ಟೆ ತುಂಬಿದಂತಾಗುತ್ತದೆ. ಇದರಿಂದ ಊಟ ಕಡಿಮೆ ಮಾಡಲು ಸಹಾಯವಾಗಿ, ತೂಕ ಇಳಿಯುತ್ತದೆ.

4.. ಸೌತೇಕಾಯಿ ತಿನ್ನುವುದರಿಂದ ತೂಕ ಇಳಿಯುವುದಷ್ಟೇ ಅಲ್ಲದೇ, ಮುಖದ ಸೌಂದರ್ಯ ಹೆಚ್ಚುತ್ತದೆ, ಅಲ್ಲದೇ, ಕೂದಲು ಧೃಡವಾಗಲು ಸೌತೇಕಾಯಿ ಸಹಕಾರಿಯಾಗಿದೆ.

5.. ಅಗತ್ಯಕ್ಕೂ ಹೆಚ್ಚು ಸೌತೇಕಾಯಿ ಬಳಕೆ ಬೇಡ. ಅಲ್ಲದೇ ಸೌತೇಕಾಯಿ ತಿಂದರೆ ನಿಮಗೆ ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ಸಲಹೆ ಪಡೆಯಿರಿ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

- Advertisement -

Latest Posts

Don't Miss