ಮೊಸರು ಯಾಕೆ..? ಯಾವಾಗ..? ಹೇಗೆ ತಿನ್ನಬೇಕು ಗೊತ್ತಾ..?

ಮೊಸರು.. ನಮ್ಮ ದೈನಂದಿನ ಆಹಾರದ ಒಂದು ಭಾಗವಾಗಿದೆ. ಊಟದೊಂದಿಗೆ ಕೆಲವರಿಗೆ ಮೊಸರು ಇರದಿದ್ದರೆ, ಊಟವೇ ಪೂರ್ಣವಾಗುವುದಿಲ್ಲ. ಅಂತೆಯೇ ಕೆಲವರಿಗೆ ಮೊಸರೆಂದರೆ ಅಲರ್ಜಿ.
ಆದರೆ ಮೊಸರು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಲಾಭಗಳಿವೆ. ಹಾಗಾದ್ರೆ ಆ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ.

1.. ಮೊಸರನ್ನ ಅಮೃತಕ್ಕೆ ಹೋಲಿಸಲಾಗತ್ತೆ. ಆದ್ರೆ ಇದನ್ನ ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಸೇವಿಸಬೇಕಾಗುತ್ತದೆ. ಮೊಸರನ್ನ ಸುಮಾರು ಅಡುಗೆಗಳಲ್ಲಿ ಬಳಸಲಾಗುತ್ತದೆ. ರಾಯ್ತಾ, ಸಲಾಡ್, ಮಜ್ಜಿಗೆ, ಲಸ್ಸಿ, ಚಾಟ್ಸ್ ಹೀಗೆ ಅನೇಕ ತಿಂಡಿಯಲ್ಲಿ ನಾವು ಮೊಸರಿನ ಬಳಕೆ ಮಾಡುತ್ತೇವೆ.

ಅಲ್ಲದೇ, ನಮ್ಮ ತ್ವಚೆಯ ಸೌದರ್ಯ ಕಾಪಾಡಿಕೊಳ್ಳಲು, ಫೇಸ್‌ಪ್ಯಾಕ್, ಫೇಸ್‌ಮಾಸ್ಕ್ ಜೊತೆಯೂ ಮೊಸರನ್ನ ಬಳಸುತ್ತೇವೆ.

ಫೇಸ್‌ಮಾಸ್ಕ್ ಮಾಡುವಾಗ ಅರ್ಧ ಚಮಚ ತೆಂಗಿನ ಎಣ್ಣೆ ಅಥವಾ ಆಲಿವ್ ಆಯಿಲ್ ಜೊತೆ, ಅರ್ಧ ಚಮಚ ಮೊಸರು, ಒಂದು ಚಮಚ ಅರಿಷಿಣ, ಒಂದು ಹನಿ ಜೇನುತುಪ್ಪ, ಒಂದರಿಂದ ಎರಡು ಸ್ಪೂನ್ ರೋಸ್ ವಾಟರ್ ಸೇರಿಸಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಪೇಸ್ಟ್‌ನ್ನ ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಮುಖ ತೊಳೆದುಕೊಳ್ಳಿ. ನಂತರ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯಿಂದ ಫೇಸ್ ಮಸಾಜ್ ಮಾಡಿಕೊಳ್ಳಿ.

2.. ಇನ್ನು ಮೊಸರಿನಿಂದ ಸ್ಕ್ರಬ್ ತಯಾರಿಸಿ ಬಳಸಬಹುದು. ಅದಕ್ಕಾಗಿ ಒಂದು ಸ್ಪೂನ್ ಕಾಫಿ ಪುಡಿ, ಒಂದು ಸ್ಪೂನ್ ಸಕ್ಕರೆ, ಒಂದು ಸ್ಪೂನ್ ಮೊಸರು ಸೇರಿಸಿ. ಇದನ್ನ ಮುಖಕ್ಕೆ ಹಚ್ಚುವ ಮುನ್ನ ಸ್ವಚ್ಛವಾಗಿ ಮುಖ ತೊಳೆದುಕೊಂಡು, ಸ್ಟೀಮ್ ತೆಗೆದುಕೊಳ್ಳಿ. ಬಳಿಕ ಇದನ್ನ ಮುಖಕ್ಕೆ ಸ್ಕ್ರಬ್ ರೀತಿ ಬಳಸಿ.

3.. ನಿಮಗೆ ಡ್ಯಾಂಡ್ರಫ್ ಸಮಸ್ಯೆ ಇದ್ದಲ್ಲಿ ಮೊಸರು ಬಳಸುವುದು ಉತ್ತಮ. ಮೊಸರಿನ ಹೇರ್ ಪ್ಯಾಕ್ ಹಾಕುವುದರಿಂದ ಹೊಟ್ಟಿನ ಸಮಸ್ಯೆ ಕಡಿಮೆಯಾಗುತ್ತದೆ.

4.. ಮೊಸರಿನಲ್ಲಿ ಕ್ಯಾಲ್ಶಿಯಂ, ವಿಟಾಮಿನ್, ಪ್ರೋಟಿನ್, ಮಿನರಲ್ ಅಂಶಗಳಿದ್ದು, ಭರಪೂರ ಪೋಷಕಾಂಶಗಳಿಂದ ಕೂಡಿದೆ. ಹೀಗಾಗಿ ಕೂದಲು ಉದ್ದವಾಗಿ, ದಟ್ಟವಾಗಿ ಬೆಳೆಯಲು ಮೊಸರು ಸಹಕಾರಿಯಾಗಿದೆ. ವಾರದಲ್ಲಿ ಮೂರು ದಿನ ಮೊಸರಿನ ಹೇರ್ ಪ್ಯಾಕ್ ಹಾಕಿ. ಈ ಹೇರ್ ಪ್ಯಾಕ್‌ನಲ್ಲಿ ಮೊಸರು ಮತ್ತು ತೆಂಗಿನ ಎಣ್ಣೆ ಬಳಸಿ, ಈ ಮಿಶ್ರಣವನ್ನ ತಲೆಗೆ ಹಚ್ಚಿ 30ರಿಂದ 40 ನಿಮಿಷ ಇರಿಸಿ, ಆಮೇಲೆ ತಲೆ ಸ್ನಾನ ಮಾಡಿ.

5.. ಜೀರ್ಣಕ್ರಿಯ ಸಮಸ್ಯೆ ಇದ್ದವರು ಮೊಸರಿನ ಸೇವನೆ ಮಾಡಬಹುದು.

6.. ಮುಟ್ಟಿನ ಸಮಯದಲ್ಲಿ ಕೆಲವರು ಮೊಸರಿನ ಸೇವನೆ ಮಾಡುವುದಿಲ್ಲ. ಆದ್ರೆ ಈ ಸಮಯದಲ್ಲಿ ಮೊಸರಿನ ಸೇವನೆ ಮಾಡಿದ್ರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಹೊಟ್ಟೆ ನೋವಿನ ಸಮಸ್ಯೆ ಶುರುವಾಗುವ ಮೊದಲೇ ಮೊಸರು ಸೇವಿಸಿದರೆ ಇನ್ನೂ ಉತ್ತಮ.

7.. ದೇಹದ ಉಷ್ಣತೆ ಹೆಚ್ಚಾದಲ್ಲಿ ಮೊಸರು ಸೇವಿಸುವುದು ಉತ್ತಮ. ಕೆಲವೊಮ್ಮೆ ಹೀಟ್‌ನಿಂದಾಗಿ ಬಾಯಿಯಲ್ಲಿ ಗುಳ್ಳೆಗಳಾಗುತ್ತದೆ. ಈ ಸಮಯ ಮೊಸರು ಸೇವಿಸಿ.

https://youtu.be/6dnm-Ej5Emw

8.. ಕೊಲೆಸ್ಟ್ರಾಲ್ ಕಂಟ್ರೋಲ್ ಮಾಡುವಲ್ಲಿ ಮೊಸರು ಪ್ರಮುಖ ಪಾತ್ರವಹಿಸುತ್ತದೆ.

9.. ದೇಹದಲ್ಲಿ ನಿಶಕ್ತಿ ಉಂಟಾದಾಗ ಮೊಸರು ಸೇವಿಸಬೇಕು. ಈ ವೇಳೆ ಮೊಸರಿನಲ್ಲಿ ಕಲ್ಲುಸಕ್ಕರೆ ಬಳಸಿ.

10.. ಅಗತ್ಯಕ್ಕಿಂತ ಹೆಚ್ಚು ಮೊಸರಿನ ಸೇವನೆ ಒಳ್ಳೆಯದಲ್ಲ. ಮೊಸರೆಂದರೆ ನಿಮಗೆ ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ಸಲಹೆ ಪಡೆದು ಮೊಸರು ಸೇವಿಸಿ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

About The Author