Saturday, July 12, 2025

Latest Posts

ಪೇರಲೆ ಹಣ್ಣಿನಲ್ಲಿ ಎಷ್ಟೆಲ್ಲ ಆರೋಗ್ಯಕರ ಗುಣಗಳಿದೆ ಗೊತ್ತಾ..?

- Advertisement -

ಆರೋಗ್ಯಕರವಾದ ಹಣ್ಣುಗಳಲ್ಲಿ ಪೇರಲೆ ಹಣ್ಣು ಕೂಡಾ ಒಂದು. ಈ ಪೇರಲೆ ಹಣ್ಣನ್ನ ಹಿಂದಿಯಲ್ಲಿ ಅಮೃತ್ ಅಂತಾ ಕರೆಯಲಾಗತ್ತೆ. ಇಂಥ ಅಮೃತದಂಥ ಹಣ್ಣನ್ನ ಸೇವಿಸುವುದರಿಂದ ಆರೋಗ್ಯಕ್ಕಾಗುವ ಲಾಭವೇನು..? ಯಾರು ಈ ಹಣ್ಣನ್ನು ತಿನ್ನಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಆರೋಗ್‌ಯದ ಭಂಡಾರವೆನ್ನಿಸಿರುವ ಪೇರಲೆ ಹಣ್ಣಿನ ಸೇವನೆಯಿಂದ ನಮಗೆ ಹಲವು ಲಾಭಗಳಿದೆ. ಬೇರೆ ಹಣ್ಣುಗಳಿಗಿಂತ ಈ ಹಣ್ಣಿನಲ್ಲಿ ವಿಟಾಮಿನ್ ಸಿ ಪ್ರಮಾಣ ಹೆಚ್ಚಿದೆ. ಆದ್ದರಿಂದ ಈ ಹಣ್ಣಿನ ಸೇವನೆ ಮಾಡಿದ್ರೆ ನಮಗೆ ಕ್ಯಾನ್ಸರ್ ಬರದಂತೆ ತಡೆಗಟ್ಟಲು ಸಹಕಾರಿಯಾಗುತ್ತದೆ. ಅಲ್ಲದೇ, ಇದನ್ನ ನಿಯಮಿತವಾಗಿ ಸೇವಿಸುವುದರಿಂದ ನಮಗೆ ಹೆಚ್ಚು ಮೊಡವೆಗಳಾಗುವುದಿಲ್ಲ. ನಮ್ಮ ತ್ವಚೆ ಕೂಡ ಉತ್ತಮವಾಗಿರುತ್ತದೆ. ಅಲ್ಲದೇ ಹೃದಯದ ಸಮಸ್ಯೆ ಇದ್ದವರು ಕೂಡ ಈ ಹಣ್ಣನ್ನು ಹೆಚ್ಚಾಗಿ ಸೇವಿಸಬೇಕು. ಪೇರಲೆ ಸೇವನೆಯಿಂದ ಹೃದಯದ ಸಮಸ್ಯೆ ಬರದಂತೆ ತಡೆಗಟ್ಟಬಹುದು.

ಪೇರಲೆ ಹಣ್ಣು ದೇಹದಲ್ಲಿರುವ ಸೋಡಿಯಂ ಲೆವಲ್‌ನ್ನು ಕಡಿಮೆ ಮಾಡುವ ಕಾರಣಕ್ಕೆ, ಇದು ಬ್ಲಡ್ ಪ್ಲಶರ್ ಇರುವ ರೋಗಿಗಳಿಗೆ ತುಂಬಾ ಉತ್ತಮ. ಇದರ ಸೆವನೆಯಿಂದ ದೇಹದಲ್ಲಿ ಮ್ಯಾಗ್ನಿಶಿಯಂ, ಪೊಟ್ಯಾಶಿಯಂ ಲೆವಲ್ ಹೆಚ್ಚುತ್ತದೆ. ಈ ಕಾರಣಕ್ಕೆ ಬ್ಲಡ್‌ಪ್ರಶರ್ ಇರುವವರು ಪೇರಲೆಯನ್ನ ನಿಯಮಿತವಾಗಿ ಸೇವಿಸಿ.

ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚಾಗಿದ್ದಲ್ಲಿ, ಪೇರಲೆ ಹಣ್ಣನ್ನು ಸೇವಿಸಬೇಕು. ನಿಮ್ಮ ದೇಹದ ತೂಕ ಇಳಿಸುವಲ್ಲಿ ಇದು ಸಹಕಾರಿಯಾದ ಕಾರಣ, ಈ ಹಣ್ಣನ್ನ ನಿಮ್ಮ ಡಯಟ್ ಲೀಸ್ಟ್‌ನಲ್ಲಿ ಸೇರಿಸಿಕೊಳ್ಳಿ. ಅಜೀರ್ಣ ಸಮಸ್ಯೆ ಇದ್ದವರು ಕೂಡ ಪೇರಲೆ ಸೇವನೆ ಮಾಡಬಹುದು. ಇದು ಜೀರ್ಣಕ್ರಿಯೆ ಸಮಸ್ಯೆಯಿಂದ ಮುಕ್ತಿ ಕೊಡುತ್ತದೆ. ತಾಯಿಯಾಗಲು ಸಿದ್ಧರಿದ್ದವರು ಪ್ರತಿದಿನ ಪೇರಲೆ ಹಣ್ಣನ್ನು ಸೇವಿಸಿದರೆ ತುಂಬಾ ಉತ್ತಮ. ಇಷ್ಟೇ ಅಲ್ಲದೇ, ಗರ್ಭಿಣಿಯರು ಪೇರಲೆ ತಿಂದರೆ ಉತ್ತಮ. ವಾರದಲ್ಲಿ ಎರಡು ಪೇರಲೆ ಹಣ್ಣು ತಿಂದರೂ ಸಾಕು. ಆ್ಯಪಲ್ ತಿನ್ನಲು ಸಾಧ್ಯವಾಗದಿದ್ದಲ್ಲಿ, ಪೇರಲೆ ಹಣ್ಣು ಸೇವಿಸಬಹುದು.  

ನಿಮಗೆ ಹಳೆಯ ತಲೆನೋವಿದ್ದಲ್ಲಿ, ಕೂದಲು ಉದುರುವ ಸಮಸ್ಯೆ ಇದ್ದಲ್ಲಿ ಪೇರಲೆ ಹಣ್ಣಿನ ಸೇವನೆ ಮಾಡಿ. ಇದರಿಂದ ತಲೆ ನೋವು ವಾಸಿಯಾಗುವುದಲ್ಲದೇ, ತಲೆ ಕೂದಲು ಉದುರುವುದೂ ನಿಲ್ಲುತ್ತದೆ. ಇನ್ನು ನಿಮಗೆ ಪೇರಲೆ ಹಣ್ಣು ತಿಂದರೆ ಅಲರ್ಜಿ ಎಂದಾದ್ದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಪೇರಲೆ ಹಣ್ಣು ಸೇವಿಸುವುದು ಉತ್ತಮ.

- Advertisement -

Latest Posts

Don't Miss