ನಾವು ದೇವರಿಗೆ ಪ್ರತಿದಿನ ದೀಪದ ಎಣ್ಣೆಯಿಂದಾನೋ, ಎಳ್ಳೆಣ್ಣೆಯಿಂದಾನೋ ದೀಪ ಹಚ್ಚುತ್ತೇವೆ. ಆದ್ರೆ ಹಬ್ಬ ಹರಿದಿನಗಳಲ್ಲಿ, ಮನೆಯಲ್ಲಿ ಏನಾದ್ರೂ ಖುಷಿಯ ಸಂದರ್ಭವಿದ್ದಾಗ, ಅಥವಾ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದಾಗ, ತುಪ್ಪದ ದೀಪವನ್ನ ಹಚ್ಚುತ್ತೇವೆ. ಸ್ಪೇಶಲ್ ದಿನವಿದ್ದರೆ ಮಾತ್ರ ತುಪ್ಪದ ದೀಪವನ್ನ ಹಚ್ಚುತ್ತೇವೆ. ಹಾಗಾದ್ರೆ ತುಪ್ಪದ ದೀಪವನ್ನ ಇಂಥ ದಿನಗಳಲ್ಲೇ ಯಾಕೆ ಹಚ್ತಾರೆ. ಏನಿದರ ಮಹತ್ವ ಅನ್ನೋದನ್ನ ನೋಡೋಣ.

ದೇವರಿಗೆ ತುಪ್ಪದ ದೀಪ ಹಚ್ಚುವುದರಿಂದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತದೆ. ನಾಗದೇವರ ಮುಂದೆ ಅಥವಾ ಸುಬ್ರಹ್ಮಣ್ಯ ಸ್ವಾಮೀಯ ಮುಂದೆ ತುಪ್ಪದ ದೀಪ ಹಚ್ಚಿದ್ದಲ್ಲಿ, ಅಂಥವರಿಗೆ ಸರ್ಪ ದೋಷ ತಾಗುವುದಿಲ್ಲ. ಮಹಾಗಣಪತಿಯ ಮುಂದೆ 21 ದಿನಗಳ ಕಾಲ ತುಪ್ಪದ ದಿನ ಹಚ್ಚಿ ಪೂಜಿಸಿದ್ದಲ್ಲಿ, ಸಕಲ ಕಷ್ಟ ನಿವಾರಣೆಯಾಗುತ್ತದೆ.
ಹಬ್ಬ ಹರಿದಿನಗಳಲ್ಲಿ ದೇವರ ಮುಂದೆ ತುಪ್ಪದ ದೀಪ ಹಚ್ಚಿದರೆ, ಕುಲ ದೇವತೆಯ ಕೃಪೆ ಅವರ ಮೇಲಿರುತ್ತದೆ. ಇಷ್ಟೇ ಅಳ್ಲದೇ, ನೀವು ಶುಭ ಸಂದರ್ಭದಲ್ಲಿ ದೇವರ ಮುಂದೆ ದೀಪ ಹಚ್ಚಿದರೆ ದೇವರ ಕೃಪೆ ನಿಮ್ಮ ಮೇಲಿರುತ್ತದೆ. ಆ ಕೃಪೆ ಹಾಗೇ ಇರಲಿ ಎಂಬ ಕಾರಣಕ್ಕೇನೆ, ಶುಭ ಸಂದರ್ಭದಲ್ಲಿ ತುಪ್ಪದ ದೀಪ ಹಚ್ಚಿ, ಈ ಸಂತೋಷ, ನೆಮ್ಮದಿ ಎಂದು ಹೀಗೆ ಇರಲಿ ಎಂದು ಬೇಡಿಕೊಳ್ಳಲಾಗುತ್ತದೆ.
ದೇವಿ ದೇವಸ್ಥಾನದಲ್ಲಿ ಮಂಗಳವಾರ ಮತ್ತು ಶುಕ್ರವಾರ ತುಪ್ಪದ ದೀಪ ಹಚ್ಚಿದರೆ, ಸಕಲ ಮನೋಕಾಮನೆಗಳು ಪೂರ್ಣಗೊಳ್ಳುತ್ತದೆ. ಸಂತಾನಕ್ಕಾಗಿ ನಾವು ಕೃಷ್ಣನನ್ನು ಜಪಿಸುತ್ತೇವೆ. ಅಂತೆಯೇ ಶ್ರೀಕೃಷ್ಣ ಜನ್ಮಾಷ್ಠಮಿಯಂದು ಗೋಪಾಲನಿಗೆ ತುಪ್ಪದ ದೀಪವನ್ನ ಹಚ್ಚಿ, ಕೃಷ್ಣ ಸಹಸ್ರನಾಮ ಹೇಳಿದ್ರೆ, ಗಂಡು ಸಂತಾನ ಭಾಗ್ಯ ಸಿಗುತ್ತದೆ ಎಂಬ ನಂಬಿಕೆ ಇದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




