Thursday, November 21, 2024

Latest Posts

ಜೇನುತುಪ್ಪದಲ್ಲಿದೆ ಚಮತ್ಕಾರಿ ಔಷಧಿಯ ಗುಣ

- Advertisement -

ನಿಸರ್ಗದಿಂದ ಸಿಕ್ಕ ಉಡುಗೊರೆಗಳಲ್ಲಿ ಜೇನುತುಪ್ಪವೂ ಒಂದು. ಭಾರತದಲ್ಲಿ ಜೇನುತುಪ್ಪಕ್ಕೆ ಧಾರ್ಮಿಕ ಪ್ರಾಮುಖ್ಯತೆ ನೀಡಲಾಗಿದೆ. ಪೂಜಾ ಕೈಂಕರ್ಯಗಳಲ್ಲಿ, ದೇವರಿಗೆ ಅಭಿಶೇಕ ಮಾಡುವ ಸಂದರ್ಭದಲ್ಲಿ, ಪ್ರಸಾದ ತಯಾರಿಸುವಾಗ ಜೇನುತುಪ್ಪವನ್ನ ಬಳಸಲಾಗುತ್ತದೆ.

ಇನ್ನು ಆಯುರ್ವೇದದ ಔಷಧಿಗಳನ್ನ ಸೇವಿಸುವಾಗ ಅದರೊಟ್ಟಿಗೆ ಜೇನುತುಪ್ಪವನ್ನ ಬಳಸಲಾಗುತ್ತದೆ.

ಜೇನುತುಪ್ಪ ಆರೋಗ್ಯಕರವಷ್ಟೇ ಅಲ್ಲದೇ, ಸೌಂದರ್ಯಕರವೂ ಹೌದು. ಹಾಗಾದ್ರೆ ಜೇನುತುಪ್ಪ ಬಳಕೆಯಿಂದಾಗುವ ಲಾಭಗಳೇನು ನೋಡೋಣ ಬನ್ನಿ.

1.. ಕೆಮ್ಮು, ಕಫದ ಸಮಸ್ಯೆಗೆ ಆಯುರ್ವೇದ ಔಷಧಿಯೊಂದಿಗೆ ಜೇನುತುಪ್ಪ ಬಳಸುತ್ತಾರೆ. ಏಕೆಂದರೆ ಜೇನುತುಪ್ಪ ಕೆಮ್ಮಿಗೆ, ಗಂಟಲು ಕೆರೆತದ ಸಮಸ್ಯೆಗೆ ರಾಮಬಾಣವಾಗಿದೆ.

2.. ಕ್ಯಾನ್ಸರ್‌ನಂತರ ಮಾರಕ ರೋಗಗಳನ್ನ ತಡೆಗಟ್ಟಲು ಜೇನಿನ ಸೇವನೆ ಸಹಕಾರಿಯಾಗಿದೆ.

3.. ಜೇನುತುಪ್ಪದ ಸೇವನೆಯಿಂದ ದೇಹದಲ್ಲಿ ರಕ್ತಸಂಚಾರ ಸರಾಗವಾಗುತ್ತದೆ.

4.. ವರ್ಕೌಟ್ ಮಾಡಿದ ನಂತರ ಜೇನು ಸೇವಿಸುವುದರಿಂದ ಉಲ್ಲಸಿತವಾಗಿರಬಹುದಲ್ಲದೇ, ಆರೋಗ್ಯಕ್ಕೂ ಒಳ್ಳೆಯದು.

5.. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಿನ ನೀರಿನೊಂದಿಗೆ ನಿಂಬೆಹಣ್ಣಿನ ರಸ ಮತ್ತು ಒಂದು ಸ್ಪೂನ್ ಜೇನುತುಪ್ಪ ಬೆರೆಸಿ ಕುಡಿದರೆ ದೇಹದ ಬೊಜ್ಜು ಕರಗುತ್ತದೆ.

6.. ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ, ಜೇನು ತುಪ್ಪ ಸೇವಿಸುವುದು ಉತ್ತಮ.

7.. ಜೇನುತುಪ್ಪ ಸೇವನೆ ಜೀರ್ಣಕ್ರಿಯೆಗೆ ಉತ್ತಮ ಮತ್ತು ಮಲಬದ್ಧತೆ ಸಮಸ್ಯೆ ತಡೆಗಟ್ಟುವುದರಲ್ಲಿ ಸಹಕಾರಿ.

8.. ಜೇನುತುಪ್ಪ ಸೌಂದರ್ಯವರ್ಧಕವಾಗಿದ್ದು, ಇದರ ಸೇವನೆ ಚರ್ಮದ ರಕ್ಷಣೆ ಮಾಡುವಲ್ಲಿ ಸಹಕಾರಿಯಾಗಿದೆ.

9.. ಬ್ರೆಡ್, ಚಪಾತಿ, ದೋಸೆ ತಿನ್ನುವಾಗ ಜಾಮ್ ಜೊತೆ ತಿನ್ನುವ ಬದಲು ಜೇನುತುಪ್ಪ ಬಳಕೆ ಮಾಡಿ. ಇದು ರುಚಿಕರವಾಗಿರುವುದಲ್ಲದೇ, ಆರೋಗ್ಯಕ್ಕೂ ಒಳ್ಳೆಯದು.

10.. ಜ್ಯೂಸ್, ನಿಂಬೆ ಹಣ್ಣಿನ ಪಾನಕ, ಹಾಲು ಇತ್ಯಾದಿ ಪೇಯಗಳನ್ನ ಕುಡಿಯುವಾಗ ಸಕ್ಕರೆ ಬಳಸುವ ಬದಲು ಜೇನುತುಪ್ಪ ಬಳಸಿ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

https://youtu.be/1d24PyQURBQ

- Advertisement -

Latest Posts

Don't Miss