ಹೂ ಕೋಸು, ಎಲೆ ಕೋಸನ್ನ ನೀವೆಲ್ಲ ತಿಂದಿರ್ತೀರಾ. ನವಿಲು ಕೋಸನ್ನ ಕೂಡ ತಿಂದಿರ್ತೀರಾ. ಆದ್ರೆ ಆ ತರಕಾರಿ ನಿಮಗೆ ಹಿಡಿಸಿದ್ದು ತುಂಬಾ ಕಮ್ಮಿಯಾಗಿರಬಹುದು. ಹೌದು.. ಸುಮಾರು ಜನರಿಗೆ ನವಿಲು ಕೋಸು ಅಂದ್ರೆ ಅಷ್ಟಕ್ಕಷ್ಟೆ. ಆದ್ರೆ ನವಿಲು ಕೋಸಿನಲ್ಲಿ ಹಲವು ಆರೋಗ್ಯಕರ ಗುಣಗಳಿದೆ. ಆ ಬಗ್ಗೆ ತಿಳಿಯೋಣ ಬನ್ನಿ..
ನವಿಲು ಕೋಸಿನ ಸೇವನೆಯಿಂದ ಕೆಮ್ಮು ಕಡಿಮೆಯಾಗುತ್ತದೆ. ನಿಮ್ಮಲ್ಲಿ ಯಾರಾದರೂ ಕೆಮ್ಮಿನಿಂದ ಬಳಲುತ್ತಿದ್ದರೆ, ನವಿಲುಕೋಸಿನ ಪಲ್ಯ, ಸಾರು ಅಥವಾ ಸೂಪ್ ಮಾಡಿ ಕುಡಿಯಿರಿ. ಕೆಮ್ಮು ಎರಡೇ ದಿನದಲ್ಲಿ ಮಾಯವಾಗುತ್ತದೆ. ಆದ್ರೆ ಈ ನವಿಲು ಕೋಸನ್ನ ಹಸಿಯಾಗಿ ತಿನ್ನಲಾಗುವುದಿಲ್ಲ. ಬೇಯಿಸಿಯೇ ತಿನ್ನಬೇಕು.
ದೇಹದಲ್ಲಿ ಶಕ್ತಿ ಇಲ್ಲದೇ ಹಲವರು ನರಳುತ್ತಿರುತ್ತಾರೆ. ಅಂಥವರಿಗೆ ಈ ನವಿಲುಕೋಸಿನ ಪದಾರ್ಥ ಮಾಡಿಕೊಡಿ. ವಾರದಲ್ಲಿ ಎರಡು ದಿನವಾದ್ರೂ ನವಿಲು ಕೋಸಿ ಪದಾರ್ಥ ತಿಂದರೆ ಒಳ್ಳೆಯದು. ಇನ್ನು ನೀವೇನಾದ್ರೂ ತೂಕ ಇಳಿಸಿಕೊಳ್ಳೋಕ್ಕೆ ಪ್ರಯತ್ನ ಪಡುತ್ತಿದ್ದರೆ, ನಿಮ್ಮ ಡಯಟ್ ಲೀಸ್ಟ್‌ನಲ್ಲಿ ನವಿಲು ಕೋಸನ್ನ ಸೇರಿಸಿಕೊಳ್ಳಿ. ಮನುಷ್ಯ 30 ಪರ್ಸೆಂಟ್ ವ್ಯಾಯಾಮ ಮಾಡಿ ತೂಕ ಇಳಿಸಿಕೊಂಡರೆ, 70 ಪರ್ಸೆಂಟ್ ಡಯಟ್ ಮಾಡುವುದರಿಂದ ತೂಕ ಇಳಿಯುತ್ತದೆ. ಹಾಗಾಗಿ ಡಯಟ್ ವೇಳೆ ತರಕಾರಿ ಸೊಪ್ಪುಗಳ ಸೂಪ್ ಮಾಡಿ ತಿನ್ನಬೇಕು. ಆಗ ನೀವು ನವಿಲು ಕೋಸನ್ನ ಕೂಡ ಬಳಸಬಹುದು.
ಕ್ಯಾಲ್ಸಿಯಂನಿಂದ ಭರಪೂರವಾಗಿರುವ ನವಿಲು ಕೋಸನ್ನ ತಿಂದ್ರೆ ಮೂಳೆಗಳು ಗಟ್ಟಿಯಾಗುತ್ತದೆ. ಕೀಲು ನೋವಿಗೂ ಇದು ರಾಮಬಾಣ. ಹಾಗಾಗಿ ವಯಸ್ಸಾದವರು ಈ ತರಕಾರಿಯನ್ನ ಆದಷ್ಟು ತಿನ್ನಬೇಕು. ಇನ್ನು ನಿಮಗೆ ನವಿಲು ಕೋಸು ತಿಂದ್ರೆ ಅಲರ್ಜಿಯಾಗುತ್ತದೆ ಎಂದಾದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ನವಿಲು ಕೋಸು ಸೇವಿಸುವುದು ಉತ್ತಮ.