Sunday, September 8, 2024

Latest Posts

ಡಯಟ್ ಮಾಡುವವರು ಓದಲೇಬೇಕಾದ ಸ್ಟೋರಿ..

- Advertisement -

ಇವತ್ತು ನಾವು ಹೆಸರು ಬೇಳೆ ಸಲಾಡನ್ನ ಹೇಗೆ ಮಾಡೋದು. ಅದರಲ್ಲಿ ಬಳಸೋ ಇನ್‌ಗ್ರೀಡಿಯನ್ಸ್ ಪ್ರಯೋಜನ ಏನು ಅನ್ನೋದನ್ನ ಹೇಳ್ತೀವಿ ಕೇಳಿ.

ಮೂಂಗ್ ದಾಲ್ ಸಲಾಡ್ ಮಾಡೋಕ್ಕೆ ಏನೇನ್ ಬೇಕು ಅನ್ನೋದನ್ನ ನೋಟ್ ಮಾಡಿಕೊಳ್ಳಿ

1 ಕಪ್ 5ರಿಂದ 6 ಗಂಟೆ ನೆನೆಸಿಟ್ಟ ಹೆಸರು ಬೇಳೆ, 1 ಕಪ್ ಹೆಚ್ಚಿಟ್ಟುಕೊಂಡ ಈರುಳ್ಳಿ, 1 ಸಣ್ಣಗೆ ಹೆಚ್ಚಿಕೊಂಡ ಸೌತೆಕಾಯಿ, ಅರ್ಧ ಕಪ್ ಕ್ಯಾರೆಟ್ ತುರಿ, 1 ಸಣ್ಣಗೆ ಹೆಚ್ಚಿಟ್ಟುಕೊಂಡ ಟೊಮೆಟೋ, ಒಂದಿರಂದ ಎರಡು ಸ್ಪೂನ್ ನಿಂಬೆರಸ, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಹೆಚ್ಚಿದ ಒಂದು ಹಸಿ ಮೆಣಸಿನ ಕಾಯಿ.. ಒಗ್ಗರಣೆ ಹಾಕೋದಕ್ಕೆ ಸ್ವಲ್ಪ ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಚಿಟಿಕೆ ಇಂಗು.

ನೆನೆಸಿಟ್ಟ ಹೆಸರು ಬೇಳೆಗೆ ಕ್ಯಾರೆಟ್ ತುರಿ, ಸಣ್ಣಗೆ ಹೆಚ್ಚಿಟ್ಟುಕೊಂಡ ಸೌತೆಕಾಯಿ, ಈರುಳ್ಳಿ, ಟೊಮೆಟೋ, ಹಸಿಮಣಸು ಹಾಾಕಿ ಮಿಶ್ರಣ ತಯಾರಿಸಿಕೊಳ್ಳಿ.

ಈಗ ಕೊಂಚ ಎಣ್ಣೆ ಬಿಸಿ ಮಾಡಿ ಅದಕ್ಕೆ, ಸಾಸಿವೆ, ಜೀರಿಗೆ, ಕರಿಬೇವು, ಇಂಗು ಹಾಕಿ ಒಗ್ಗರಣೆ ರೆಡಿ ಮಾಡಿ, ಸಲಾಡ್‌ ಮಿಶ್ರಣಕ್ಕೆ ಸೇರಿಸಿ. ಈಗ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ನಿಂಬೆಹಣ್ಣಿನ ರಸ ಸೇರಿಸಿ ಮಿಕ್ಸ್ ಮಾಡಿದ್ರೆ ಮೂಂಗ್ ದಾಲ್ ಸಲಾಡ್ ರೆಡಿ.

ಸಲಾಡ್ ಏನೋ ರೆಡಿಯಾಯ್ತು. ಆದ್ರೆ ಇದನ್ನ ತಿನ್ನೋದ್ರಿಂದ್ ಏನ್ ಉಪಯೋಗ, ಯಾಕೆ, ಯಾವಾಗ ತಿನ್ಬೇಕು ಅನ್ನೋದನ್ನು ಕೂಡ ತಿಳ್ಕೋಳೋಣ ಬನ್ನಿ.

ಡಾಕ್ಟ್ರು, ಡಯಟಿಶೀಯನ್ಸ್ ಕೂಡ ಡಯೇಟ್‌ ಮಾಡುವವರಿಗೆ ಹೆಸರು ಬೇಳೆ ಬಳಸೋ ಸಲಹೆ ಕೊಡ್ತಾರೆ. ಹೈಪ್ರೋಟಿನ್ ಅಂಶವುಳ್ಳ ಈ ಸಲಾಡ್ ತೂಕ ಇಳ್ಸೋದ್ರಲ್ಲಿ ತುಂಬಾನೇ ಯ್ಯೂಸ್‌ಫುಲ್.

ಇನ್ನೊಂದು ವಿಷಯ ಅಂದ್ರೆ, ಪ್ರತಿದಿನ ಹಸಿ ಟೊಮೆಟೋ ಬಳಸೋದು ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ ಅನ್ನತ್ತೆ ಆಯುರ್ವೇದ. ಆಯುರ್ವೇದದ ಪ್ರಕಾರ ಟೊಮೆಟೋ ಹಣ್ಣನ್ನ ಹೆಚ್ಚಾಗಿ ಬಳಸೋಂದ್ರಿಂದ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಅಲ್ಲದೇ, ಟೊಮೆಟೋವನ್ನ ಹಿಂದಿನ ಕಾಲದಲ್ಲಿ ಕುದುರೆಗೆ ಆಹಾರವಾಗಿ ಕೊಡ್ತಿದ್ರಂತೆ.

ಅಲ್ಲದೇ, ಹಸಿ ಮೆಣಸಿನ ಕಾಯಿಯನ್ನ ಪ್ರತಿದಿನ ಸಮ ಪ್ರಮಾಣದಲ್ಲಿ ಉಪಯೋಗ ಮಾಡಿದ್ರೆ ಕ್ಯಾನ್ಸರ್‌ ರೋಗವನ್ನು ತಡೀಬಹುದಂತೆ. ಯೂರೋಪ್‌ನ ಕೆಲ ದೇಶಗಳಲ್ಲಿ ಹಸಿ ಮೆಣಸಿನಕಾಯಿ ಯ್ಯೂಸ್ ಮಾಡಲ್ವಂತೆ. ಅದ್ಕೆ ಆ ದೇಶದಲ್ಲಿ ಕ್ಯಾನ್ಸರ್‌ ಪ್ರಮಾಣ ಹೆಚ್ಚಿಗೆ ಆಗಿರೋದಂತೆ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

- Advertisement -

Latest Posts

Don't Miss