Tuesday, October 22, 2024

Latest Posts

ಬೇವಿನ ಎಲೆಯಲ್ಲಿರುವ ಚಮತ್ಕಾರಿ ಗುಣಗಳ ಬಗ್ಗೆ ನೀವು ತಿಳಿಯಲೇಬೇಕು..

- Advertisement -

ಆಯುರ್ವೇದದಲ್ಲಿ ಮಹತ್ವ ಪಡೆದ ಹಲವು ಎಲೆಗಳಲ್ಲಿ ಬೇವಿನ ಎಲೆ ಕೂಡ ಒಂದು. ಹಲವರಿಗೆ ಬೇವಿನ ಎಲೆ ಹೆಸರು ತೊಕೊಂಡ್ರೇನೆ, ವಾಕರಿಕೆ ಬರತ್ತೆ. ಯಾಕಂದ್ರೆ ಅದು ಕಹಿಯಾಗಿರತ್ತೆ ಅಂತಾ. ಆದ್ರೆ ಬೇವಿನಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ನೀವು ತಿಳಿದುಕೊಂಡ್ರೆ, ಇವತ್ತಿಂದಾನೇ ಬೇವು ಬಳಸೋಕ್ಕೆ ಸ್ಟಾರ್ಟ್ ಮಾಡ್ತೀರಾ. ಹಾಗಾದ್ರೆ ಬೇವಿನ ಸೊಪ್ಪಿನ ಆರೋಗ್ಯಕಾರಿ ಗುಣಗಳು ಯಾವುದು..? ಈ ಸೊಪ್ಪನ್ನ ಬಳಸೋದ್ರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ..

ಮೊದಲನೇಯದಾಗಿ ಇದು ತ್ವಚೆಗೆ ಬಹುಉಪಯೋಗಿ. ಇದನ್ನ ತ್ವಚೆಗೆ ಬಳಸುವುದರಿಂದ ಕಜ್ಜಿ, ತುರಿಕೆ ಹೋಗಲಾಡಿಸುತ್ತದೆ. ನಿಮ್ಮ ತ್ವಚೆ ಸಾಫ್ಟ್ ಆಗಿ, ನ್ಯಾಚುರಲ್ ಗ್ಲೋನಿಂದ ತುಂಬಿರುತ್ತದೆ. ಕೆಲವರು ತಮ್ಮ ಮುಖ ಸುಂದರವಾಗಿ ಕಾಣಲು, ಕೇಸರಿ- ಚಂದನದಿಂದ ಕೂಡಿದ ಸೋಪ್, ಕ್ರೀಮ್, ಫೇಸ್‌ವಾಶ್‌ಗಳನ್ನೆಲ್ಲ ಬಳಕೆ ಮಾಡ್ತಾರೆ. ಇದೆಲ್ಲ ಬಳಸೋದು ತಪ್ಪಲ್ಲ. ಆದ್ರೆ ಇದೆಲ್ಲದ್ದಕ್ಕಿಂತ ಉತ್ತಮ ಫಲಿತಾಂಶ ಕೊಡುವ ಅಂಶ ಅಂದ್ರೆ, ಅದು ಬೇವಿನ ಕ್ರೀಮ್ ಅಥವಾ ಫೇಸ್‌ವಾಶ್. ಹೌದು… ನೀವು ಬೇಕಾದ್ರೆ ಬೇವಿನ ಅಂಶದಿಂದ ಕೂಡಿದ ಸೌಂದರ್ಯವರ್ಧಕವನ್ನು ಬಳಸಿ ನೋಡಿ. ನಿಮ್ಮ ತ್ವಚೆ ಎಷ್ಟು ಚೆಂದಗಾಣಿಸುತ್ತೆ ಅಂತಾ, ನೀವೇ ಆಶ್ಚರ್ಯಪಡ್ತೀರಾ. ಆದ್ರೆ ಯಾವುದೇ ಸೌಂದರ್ಯವರ್ಧಕ ತೆಗೆದುಕೊಳ್ಳುವಾಗ, ಅದರ ಎಕ್ಸ್‌ಪೈರಿ ಡೇಟ್ ನೋಡಿ ತೆಗೆದುಕೊಳ್ಳಿ. ಮತ್ತು ಒಂದೆರಡು ದಿನ ಕೈಗೆ ಆ ಕ್ರೀಮ್ ಬಳಸಿ ನೋಡಿ. ನಿಮಗೆ ಅಲರ್ಜಿ ಆಗದಿದ್ದಲ್ಲಿ, ಅದನ್ನ ಮುಖಕ್ಕೆ ಅಪ್ಲೈ ಮಾಡಿ.

ಆದ್ರೆ ಅಂಗಡಿಯಲ್ಲಿ ಸಿಗುವ ಸೌಂದರ್ಯವರ್ಧಕ ಬಳಸೋದಕ್ಕಿಂತ, ಮನೆಯಲ್ಲೇ ತಯಾರಿಸಿ, ಬಳಸೋದು ಒಳ್ಳೆಯದು. ಇಂದಿನ ಯುವಪೀಳಿಗೆಯವರು ಕೆಲಸದಲ್ಲಿ ಬ್ಯುಸಿ ಇರುವ ಕಾರಣ, ಇದನ್ನೆಲ್ಲಾ ಮಾಡಿಕೊಳ್ಳಲು ಸಮಯವಿಲ್ಲದವರು ಕ್ರೀಮ್ ಬಳಸುತ್ತಾರೆ. ಹಾಗಾಗಿ ಈ ಮಾಹಿತಿ ಕೊಟ್ಟಿದ್ದು.

ಇನ್ನು ಕೂದಲು ಉದುರುವ ಸಮಸ್ಯೆ ಇದ್ದಲ್ಲಿ, ಡ್ಯಾಂಡ್ರಫ್ ಸಮಸ್ಯೆ ಇದ್ದಲ್ಲಿ, ಬೇವಿನ ಎಣ್ಣೆ ತಯಾರಿಸಿ, ಕೂದಲಿಗೆ ಮಾಲೀಶ್ ಮಾಡಿ, ಹರ್ಬಲ್ ಶ್ಯಾಂಪೂವಿನಿಂದ ಕೂದಲು ತೊಳೆದರೆ, ಒಳ್ಳೆಯದು. ಇನ್ನು ಮುಖದ ಮೇಲೆ ಗುಳ್ಳೆಗಳಾಗಿದ್ದಲ್ಲಿ, ಬೇವಿನ ಎಲೆ ಮತ್ತು ಪುದೀನಾ ಎಲೆಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು, ಪೇಸ್ಟ್ ಮಾಡಿ, ಗುಳೆಗಳಾದಲ್ಲಿ ಹಚ್ಚಿ, 20 ನಿಮಿಷ ಬಿಟ್ಟು, ಫೇಸ್‌ವಾಶ್‌ ಮಾಡಿಕೊಳ್ಳಿ. ಕೆಲ ದಿನಗಳಲ್ಲೇ ನಿಮ್ಮ ತ್ವಚೆಯ ಸಮಸ್ಯೆ ದೂರವಾಗುತ್ತದೆ.

ಇನ್ನು ಬೇವಿನ ಎಲೆಯ ಇನ್ನೊಂದು ಉಪಯೋಗ ಅಂದ್ರೆ, ಶುಗರ್ ಕಂಟ್ರೋಲ್‌ನಲ್ಲಿಡಲು ಇದು ಸಹಾಯ ಮಾಡತ್ತೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 5 ಬೇವಿನ ಎಲೆಯನ್ನು ಚೆನ್ನಾಗಿ ಅಗಿದು ತಿನ್ನಬೇಕು. ಆಗ, ಶುಗರ್ ಕಂಟ್ರೋಲಿಗೆ ಬರತ್ತೆ. ಜ್ವರ, ಶೀತ, ನೆಗಡಿ ಇದ್ದಲ್ಲಿ, ಬೇವಿನ ಎಲೆಯ ಕಶಾಯ ಸೇವಿಸುವುದು ಉತ್ತಮ. ಇನ್ನು ಬೇವಿನ ಕಡ್ಡಿಯಿಂದ ಹಲ್ಲು ಉಜ್ಜಿದರೆ, ಹುಳುಕು ಹಲ್ಲು ಇರುವುದಿಲ್ಲ. ನಿಮ್ಮ ಹಲ್ಲು ಆರೋಗ್ಯಕರವಾಗಿರುತ್ತದೆ.

 ಸ್ನಾನ ಮಾಡುವ ಮುನ್ನ ಬಿಸಿ ನೀರಿಗೆ ಕೆಲ ಬೇವಿನ ಎಲೆಯನ್ನು ಹಾಕಿಡಿ. ಅರ್ಧ ಗಂಟೆಯ ಬಳಿಕ, ಆ ನೀರಿನಿಂದಲೇ ಸ್ನಾನ ಮಾಡಿ. ಇದರಿಂದ ನಿಮಗೆ ಕಜ್ಜಿ, ತುರಿಕೆಗಳು ಬರುವುದಿಲ್ಲ. ಇನ್ನು ಮನೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ರೆ, ಆ ಕೋಣೆಯಲ್ಲಿ ಬೇವಿನ ಎಲೆಯನ್ನು ನೇತುಹಾಕಿದ್ರೆ, ಸೊಳ್ಲೆಯ ಕಾಟ ತಪ್ಪುತ್ತದೆ. ಬೇವಿನ ಎಲೆಯನ್ನು ಪೇಸ್ಟ್ ಮಾಡಿ, ಕಜ್ಜಿ, ತುರಿಕೆ ಇದ್ದ ಜಾಗದಲ್ಲಿ ಹಚ್ಚಿದ್ರೆ, ಕಜ್ಜಿ, ತುರಿಕೆ ಮಾಯವಾಗುತ್ತದೆ.

- Advertisement -

Latest Posts

Don't Miss