ಕಿತ್ತಳೆ ಹಣ್ಣು. ದಿನಕ್ಕೊಂದು ಕಿತ್ತಳೆ ಹಣ್ಣು ಸೇವನೆ ನಿಮ್ಮನ್ನ ಆರೋಗ್ಯವಂತರಾಗಿ, ಉಲ್ಲಸಿತರಾಗಿ, ಶಕ್ತಿಯುತರಾಗಿರಿಸಲು ಸಹಕಾರಿಯಾಗಿದೆ.
ಅಲ್ಲದೇ, ಕಿತ್ತಳೆಹಣ್ಣು ವಿಟಮಿನ್ ಸಿ, ಮ್ಯಾಗ್ನಿಶಿಯಂ, ಫೈಬರ್, ಪೊಟ್ಯಾಷಿಯಂ ಒಳಗೊಂಡಿದ್ದು, ನಿಮ್ಮ ಸೌಂದರ್ಯವನ್ನ ಇಮ್ಮಡಿಗೊಳಿಸುವುದರಲ್ಲಿ ಸಹಕಾರಿಯಾಗಿದೆ.
ಆದ್ರೆ ಮಾರುಕಟ್ಟೆಯಲ್ಲಿ ಅಟ್ರ್ಯಾಕ್ಟ್ ಮಾಡಲು ಮಾರುವ ಹೈಬ್ರೀಡ್ ಕಿತ್ತಳೆ ಹಣ್ಣು ಆರೋಗ್ಯಕ್ಕೆ ಅಷ್ಟೊಂದು ಉತ್ತಮವಲ್ಲ. ಇದನ್ನು ಜ್ಯೂಸ್ ಸೆಂಟರ್‌ಗಳಲ್ಲಿ ಜ್ಯೂಸ್ ಮಾಡಲೆಂದೇ ಬಳಸುತ್ತಾರೆ. ಜವಾರಿ ಕಿತ್ತಳೆ ಹಣ್ಣಿನ ಸೇವನೆ ಆರೋಗ್ಯಕ್ಕೆ ಉತ್ತಮ.

ಹಾಗಾದ್ರೆ ಕಿತ್ತಳೆ ಹಣ್ಣಿನ ಉಪಯೋಗವೇನು ಅನ್ನೋದನ್ನ ನೋಡೋಣಾ ಬನ್ನಿ
1.. ಜೀರ್ಣಕ್ರಿಯೆ ಸಮಸ್ಯೆ ಇದ್ದವರು ಕಿತ್ತಳೆಹಣ್ಣಿನ ಸೇವನೆ ಮಾಡಿದರೆ ಜೀರ್ಣಕ್ರಿಯೆ ಸುಲಭವಾಗುವುದು
2.. ಅಸ್ತಮಾ, ಒಣಕೆಮ್ಮು ಇರುವರು ಕಿತ್ತಳೆ ಹಣ್ಣನ್ನ ಸೇವಿಸಬೇಕು. ಇದರ ಸೇವನೆಯಿಂದ ಅಸ್ತಮಾ ರೋಗ ಬರುವುದನ್ನೂ ತಡೆಯಬಹುದು.
3.. ಕಣ್ಣಿನ ಆರೋಗ್ಯಕ್ಕೂ ಕಿತ್ತಳೆ ಹಣ್ಣು ಒಳ್ಳೆಯದು.

4.. ನಿಯಮಿತ ಕಿತ್ತಳೆ ಹಣ್ಣಿನ ಸೇವನೆ ಕ್ಯಾನ್ಸರ್ ರೋಗ ಬರುವುದನ್ನು ತಡೆಯುತ್ತದೆ.
5.. ಕಿತ್ತಳೆಯಲ್ಲಿ ಮ್ಯಾಗ್ನಿಷಿಯಮ್ ಇರುವುದರಿಂದ ರಕ್ತಸಂಚಲನವಾಗುವುದಕ್ಕೂ ಇದು ಸಹಕಾರಿಯಾಗಿದೆ. ಅಲ್ಲದೇ ಕಿತ್ತಳೆ ತಿನ್ನುವುದರಿಂದ ಹೃದಯ ಸಂಬಂಧಿ ಖಾಯಿಲೆಯಿಂದ ದೂರವಿರಬಹುದು.
6.. ವಯಸ್ಸಾದಂತೆ ಮೂಳೆ ಸಂಬಂಧಿ ತೊಂದರೆ, ಮಂಡಿನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಈ ವೇಳೆ ಕಿತ್ತಳೆ ಹಣ್ಣನ್ನು ಸೇವಿಸಿದರೆ ಮೈ ಕೈ ನೋವಿನಲ್ಲಿ ಕೊಂಚ ರಿಲೀಫ್ ಸಿಗುತ್ತದೆ.

7.. ಕಿತ್ತಳೆ ಆರೋಗ್ಯವರ್ಧಕದ ಜೊತೆ ಸೌಂದರ್ಯವರ್ಧಕವೂ ಹೌದು. ಕಿತ್ತಳೆ ಹಣ್ಣನ್ನ ನಿಯಮಿತವಾಗಿ ಸೇವಿಸುವುದರಿಂದ ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬಹುದು.
8.. ಕಿತ್ತಳೆ ಜೊತೆ ಅದರ ಸಿಪ್ಪೆಯೂ ಔಷಧಿ ಗುಣ ಹೊಂದಿದೆ. ಕಿತ್ತಳೆ ಹಣ್ಣಿನ ರಸ ಸೇವನೆ ಮತ್ತು ಕಿತ್ತಳೆ ಸಿಪ್ಪೆಯನ್ನು ಒಣಗಿಸಿ, ಪುಡಿ ಮಾಡಿ ಅದರಿಂದ ಹಲ್ಲುಜ್ಜುವುದರಿಂದ ಹಲ್ಲಿನ ಹೊಳಪು ಹೆಚ್ಚಾಗುವುದು.
9.. ಹಸಿ ಸಿಪ್ಪೆಯಿಂದ ಚಟ್ನಿ ಮಾಡಿ ಸೇವಿಸುವುದರಿಂದ ಹಲವು ಉಪಯೋಗಗಳಿದೆ. ಅಲ್ಲದೇ ಕಿತ್ತಳೆ ಸಿಪ್ಪೆಯನ್ನು ಒಣಗಿಸಿ, ಪುಡಿ ಮಾಡಿ, ಅದಕ್ಕೆ ಜೇನುತುಪ್ಪ ಸೇರಿಸಿ ಫೇಸ್‌ಪ್ಯಾಕ್ ಹಾಕಬಹುದು.
10.. ಕಿತ್ತಳೆ ಹಣ್ಣಿನಿಂದ ವಿವಿಧ ಖಾದ್ಯಗಳನ್ನೂ ಮಾಡಬಹುದು. ಕಿತ್ತಳೆ ಹಣ್ಣಿನಿಂದ ಜ್ಯೂಸ್, ಕೇಕ್, ಬಿಸ್ಕೇಟ್ಸ್, ಐಸ್‌ಕ್ರೀಮ್ ಇನ್ನೂ ಹಲವು ರುಚಿಕರ ಪದಾರ್ಥಗಳನ್ನು ತಯಾರಿಸಬಹುದು.
ಕಿತ್ತಳೆಹಣ್ಣು ಅಥವಾ ಕಿತ್ತಳೆ ಹಣ್ಣಿನ ರಸದ ಉಪಯೋಗದಿಂದ ಉತ್ತಮ ಫಲಿತಾಂಶ ಪಡೆಯಬಹುದು. ಆದರೆ ಅತೀಯಾಗಿ ಕಿತ್ತಳೆ ಹಣ್ಣಿನ ಸೇವನೆ ಆರೋಗ್ಯಕ್ಕೆ ಹಾನಿಕರವಾಗಬಹುದು.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ