Saturday, July 27, 2024

Latest Posts

ಐಸ್ ಫೇಶಿಯಲ್: ಬಾಲಿವುಡ್ ಫೇಮಸ್ ನಟಿಯ ಬ್ಯೂಟಿ ಸಿಕ್ರೇಟ್ ಇದು..!

- Advertisement -

ಐಸ್ ಫೇಶಿಯಲ್, ಬಾಲಿವುಡ್ ಬೆಡಗಿಯರ ಮೋಸ್ಟ್ ಫೆವರಿಟ್ ಫೇಶಿಯಲ್. ಫಾರಿನ್ ಬೆಡಗಿ ಕತ್ರೀನಾ ಕೈಫ್ ಸೌಂದರ್ಯದ ಗುಟ್ಟು ಕೂಡ ಐಸ್ ಫೇಶಿಯಲ್.

ಮನೆಮದ್ದು ಅಂತಾ ನಾವು ಕಡ್ಲೆಹಿಟ್ಟು, ಮುಲ್ತಾನಿ ಮಿಟ್ಟಿ, ಶ್ರೀಗಂಧದ ಮಿಶ್ರಣ, ಅರಿಶಿಣ, ನಿಂಬೆಹಣ್ಣು, ಮೊಸರು ಇತ್ಯಾದಿ ವಸ್ತುಗಳನ್ನ ಬಳಸಿ ಫೇಸ್‌ಪ್ಯಾಕ್ ಹಾಕ್ತೀವಿ. ಆದ್ರೆ ಇವೆಲ್ಲಕ್ಕಿಂತ ಈಸಿಯಾಗಿ ಐಸ್ ಫೇಶಿಯಲ್ ಮಾಡಬಹುದು. ಹಾಗಾದ್ರೆ ಐಸ್ ಫೇಶಿಯಲ್‌ಗೆ ಬೇಕಾಗುವ ಸಾಮಗ್ರಿ ಏನು ಅಂತಾ ನೋಡೋಣ ಬನ್ನಿ.

ದೊಡ್ಡ ಬೌಲ್ ತಣ್ಣೀರು, 7-8 ಐಸ್ ಕ್ಯೂಬ್ಸ್, 5-6 ತುಂಡು ಸೌತೆಕಾಯಿ , 3-4 ಸ್ಪೂನ್ ರೋಸ್ ವಾಟರ್.
ನಿಮ್ಮ ಮುಖ ಮುಳುಗುವಷ್ಟು ದೊಡ್ಡ ಬೌಲನ್ನ ತೆಗೆದುಕೊಳ್ಳಿ.ಬೌಲ್‌ನಲ್ಲಿ ತಣ್ಣೀರು ಹಾಕಿ ಅದಕ್ಕೆ ಐಸ್ ಕ್ಯೂಬ್ಸ್, ಸೌತೆಕಾಯಿ, ರೋಸ್‌ ವಾಟರ್ ಹಾಕಿ ಮಿಕ್ಸ್ ಮಾಡಿ. ಅದರಲ್ಲಿ ನಿಮ್ಮ ಮುಖವನ್ನ 10 ಸೆಕೆಂಡ್ಸ್ ಇರಿಸಿ, ನಂತರ 10 ಸೆಕೆಂಡ್ಸ್ ಬ್ರೇಕ್ ತೆಗೆದುಕೊಳ್ಳಿ. ಹೀಗೆ 2ರಿಂದ 3 ಬಾರಿ ಮಾಡಿ. ಈ ಫೇಶಿಯಲನ್ನ ನೀವು ಪ್ರತಿದಿನ ಮಾಡಬಹುದು.

ಐಸ್ ಫೇಶಿಯಲ್ ಮಾಡುವುದರಿಂದ ಆಗುವ ಲಾಭವೇನು..?
ಐಸ್ ಫೇಶಿಯಲ್ ಮಾಡುವುದರಿಂದ ನಮ್ಮ ಮುಖ ಫ್ರೆಶ್ ಆಗಿ ಕಾಣುವುದು. ಇನ್ನು ನಿಮಗೆ ಮೇಕಪ್ ಹಾಕಿದಾಗ ಪದೇ ಪದೇ ಮೇಕಪ್ ಹಾಳಾಗುವ ಸಮಸ್ಯೆ ಉಂಟಾದ್ರೆ, ಖಂಡಿತಾ ಈ ಫೇಶಿಯಲ್ ಟ್ರೈ ಮಾಡಿ. ಇದರಿಂದ ಮೇಕಪ್ ಕರೆಕ್ಟ್ ಆಗಿ ಅಪ್ಲೈ ಮಾಡಬಹುದು.

ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ನೀವು ಐಸ್ ಫೇಶಿಯಲ್ ಮಾಡುವುದರಿಂದ ನಿಮ್ಮ ತ್ವಚೆ ಯಂಗ್‌ ಆಗಿ ಕಾಣುತ್ತದೆ. ಅಲ್ಲದೇ, ಇಡೀ ದಿನ ಉಲ್ಲಸಿತರಾಗಿರುವಂತೆ ಮಾಡಲು ಈ ಫೇಶಿಯಲ್ ಸಹಕಾರಿ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

https://youtu.be/QJjNPyyJl-E
- Advertisement -

Latest Posts

Don't Miss