ಹಿಂದಿ ಭಾಷೆಯಲ್ಲಿ ದಾಳಿಂಬೆ ಹಣ್ಣಿನ ಬಗ್ಗೆ ಒಂದು ಮಾತಿದೆ. ಏಕ್ ಅನಾರ್ ಸೌ ಬಿಮಾರ್. ಅಂದ್ರೆ ಒಂದು ದಾಳಿಂಬೆ ಸೇವನೆ ನೂರು ರೋಗಗಳನ್ನ ಗುಣಪಡಿಸುವ ಶಕ್ತಿ ಹೊಂದಿದೆ ಎಂದರ್ಥ. ಹಾಗಾದ್ರೆ ದಾಳಿಂಬೆ ಹಣ್ಣಿನ 11 ಲಾಭಗಳೇನು ನೋಡೋಣ ಬನ್ನಿ..

1.. ತೂಕ ಇಳಿಸಿಕೊಳ್ಳಬೇಕೆನ್ನುವವರು ದಾಳಿಂಬೆ ಜ್ಯೂಸ್ ಸೇವಿಸಿ. ಒಂದು ಮಿಡಿಯಂ ಗ್ಲಾಸ್ ದಾಳಿಂಬೆ ಜ್ಯೂಸ್ ನೀವು ಸೇವಿಸಿದ್ದಲ್ಲಿ, ಅದು ಒಂದು ಹೊತ್ತಿಗೆ ಬೇಕಾಗುವ ಊಟದಷ್ಟು ಶಕ್ತಿ ನೀಡುತ್ತದೆ. ಹಾಗಾಗಿ ತುಂಬಾ ಹಸಿವಾದ ಸಂದರ್ಭದಲ್ಲಿ ಅನ್ನ ಸೇವಿಸುವ ಬದಲು ಜ್ಯೂಸ್ ಕುಡಿಯಬಹುದು. ಇದರಿಂದ ಹೊಟ್ಟೆಯೂ ತುಂಬುತ್ತದೆ. ದೇಹಕ್ಕೆ ಬೇಕಾದ ಪೋಷಕಾಂಶವೂ ದೊರೆಯುತ್ತದೆ.
2.. ದಾಳಿಂಬೆ ರಸ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ದಾಳಿಂಬೆ ರಸದ ಸೇವನೆಯಿಂದ ಹೊಟ್ಟೆಯ ಸಮಸ್ಯೆ ಇದ್ದರೆ ಕಡಿಮೆಯಾಗುತ್ತದೆ. ಈ ವೇಳೆ ಜ್ಯೂಸ್ ಕುಡಿಯುವಾಗ ಅದಕ್ಕೆ ಕೊಂಚ ಕಪ್ಪುಪ್ಪು, ಕಪ್ಪುಮೆಣಸಿನ ಪುಡಿ ಸೇರಿಸಿದ್ದಲ್ಲಿ ಹೊಟ್ಟೆ ನೋವಿಗೆ ಉತ್ತಮವಾಗಿರುತ್ತದೆ.
3.. ದಾಳಿಂಬೆ ರಸ ಕೊಲೆಸ್ಟ್ರಾಲ್ ಕಂಟ್ರೋಲ್ ಮಾಡುವುದರಿಂದ, ಹೃದಯ ಸಂಬಂಧಿ ಖಾಲಿಯೆಗೆ ಉತ್ತಮ ಆಹಾರವಾಗಿದೆ.
4.. ವಯಸ್ಸಾದಂತೆ ಮುಖ ಸುಕ್ಕುಗಟ್ಟಲು ಶುರುವಾಗುತ್ತದೆ, ಮುಖದ ಮೇಲೆ ರಿಂಕಲ್ಸ್ ಏಳಲು ಶುರುವಾಗುತ್ತದೆ. ಈ ಸಮಸ್ಯೆ ತಡೆಯಬೇಕೆಂದಿದ್ದಲ್ಲಿ ದಾಳಿಂಬೆ ಜ್ಯೂಸ್ ನಿಯಮಿತವಾಗಿ ಸೇವಿಸಿ.
5.. ಕಣ್ಣು ನೋವು, ಕಣ್ಣು ಕಪ್ಪುಗಟ್ಟುವುದು ಇತ್ಯಾದಿ ಸಮಸ್ಯೆಗಳಿಗೆ ದಾಳಿಂಬೆ ರಾಮಬಾಣವಾಗಿದೆ. ದಾಳಿಂಬೆ ಸೇವನೆಯಿಂದ ಕಣ್ಣಿನ ಸಮಸ್ಯೆ ಪರಿಹಾರವಾಗುತ್ತದೆ.
6.. ದೇಹದಲ್ಲಿ ರಕ್ತ ಕಡಿಮೆಯಾಗಿದ್ದಲ್ಲಿ, ದಾಳಿಂಬೆ ಜ್ಯೂಸ್ ಸೇವಿಸಿ. ದಾಳಿಂಬೆಯಲ್ಲಿ ದೇಹಕ್ಕೆ ಬೇಕಾಗುವಷ್ಟು ಐರನ್ ಅಂಶ ಇರುವುದರಿಂದ ಇದು ದೇಹವನ್ನ ಶಕ್ತಿಯುವತವಾಗಿರಿಸುವಲ್ಲಿ ಸಹಕಾರಿಯಾಗಿದೆ. ದಾಳಿಂಬೆ ರಸದೊಂದಿಗೆ ಕೊಂಚ ಬೀಟ್ರೂಟ್ ರಸ ಸೇರಿಸಿ ಕುಡಿಯಬಹುದು.
7.. ತ್ವಚೆಯ ಸಮಸ್ಯೆ ದೂರವಾಗಿಸಲು ದಾಳಿಂಬೆ ರಸ ಬಳಸಬಹುದು. ದಾಳಿಂಬೆ ಹಣ್ಣನ್ನ ಅಥವಾ ಜ್ಯೂಸನ್ನ ನಿಯಮಿತವಾಗಿ ಕುಡಿಯುವುದರಿಂದ ಮುಖದ ಮೇಲಿನ ಕಲೆ, ಗುಳ್ಳೆಗಳನ್ನ ಇದು ನಿವಾರಣೆ ಆಗುವಂತೆ ಮಾಡುತ್ತದೆ.
8.. ಅಶಕ್ತತೆ ಎದುರಾದಾಗ ದಾಳಿಂಬೆ ರಸ ಕುಡಿಯಬೇಕು. ಇದರಲ್ಲಿ ವಿಟಮಿನ್ ಸಿ ಇರುವುದರಿಂದ , ಇದು ನಮ್ಮ ದೇಹಕ್ಕೆ ಇನ್‌ಸ್ಟಂಟ್ ಶಕ್ತಿ ನೀಡುತ್ತದೆ.
9.. ದಾಳಿಂಬೆ ಹಣ್ಣಿನ ಸೇವನೆಯಿಂದ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ.
10.. ಕಿಡ್ನಿ ಸಮಸ್ಯೆ, ಮೂತ್ರ ಸಮಸ್ಯೆ ಇದ್ದಲ್ಲಿ ದಾಳಿಂಬೆ ಹಣ್ಣಿನ ಸೇವನೆ ಮಾಡಬಹುದು.
11.. ನೆನಪಿನ ಶಕ್ತಿ ಹೆಚ್ಚಿಸುವಲ್ಲಿ ದಾಳಿಂಬೆ ರಸ ಸಹಕಾರಿಯಾಗಿದೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.