ಫೇಸ್ ಪ್ಯಾಕ್, ಫೇಸ್ ಮಾಸ್ಕ್, ಫೇಶಿಯಲ್ ಇವೆಲ್ಲದರ ಜೊತೆಗೆ ಸ್ಕ್ರಬಿಂಗ್ ಕೂಡ ತ್ವಚೆಯ ಅಂದ ಕಾಪಾಡುವುದರಲ್ಲಿ ಸಹಕಾರಿಯಾಗಿದೆ.
ಸ್ಕ್ರಬಿಂಗ್ ಮಾಡುವುದರಿಂದ ನಿಮ್ಮ ಮುಖದ ಮೇಲಿನ ಡೆಡ್ ಸೆಲ್ಸ್ ತೊಲಗಿ ಹೊಸ ಸೆಲ್ಸ್ ಉತ್ಪತ್ತಿಯಾಗುತ್ತದೆ. ಸ್ಕ್ರಬಿಂಗ್ ನಂತರ ನಿಮ್ಮ ಮುಖ ಸಾಫ್ಟ್ ಆಗುವುದಲ್ಲದೇ, ರಿಫ್ರೆಶ್ ಆಗಿರತ್ತೆ. ಸ್ಕ್ರಬಿಂಗ್ ಮಾಡುವುದರಿಂದ ನಿಮ್ಮ ಮುಖದ ಮೇಲಿನ ಜಿಡ್ಡು ತನ, ಕೊಳೆ ಎಲ್ಲವನ್ನೂ ಹೋಗಲಾಡಿಸುತ್ತದೆ.

ಆದ್ರೆ ಸ್ಕ್ರಬ್ ಬಳಸುವ ಮುನ್ನ ಸ್ವಚ್ಛವಾಗಿ ಮುಖ ತೊಳೆದುಕೊಳ್ಳಿ, ನಂತರ ಸ್ಕ್ರಬಿಂಗ್ ಮಾಡಿ. ಫೇಸ್‌ಪ್ಯಾಕ್ ಹಾಕುವ ಮುನ್ನ ಸ್ಕ್ರಬ್ ಬಳಸಿದರೆ ಉತ್ತಮ ಫಲಿತಾಂಶ ಪಡೆಯಬಹುದು. ವಾರಕ್ಕೆರಡು ಬಾರಿ ಸ್ಕ್ರಬಿಂಗ್ ಮಾಡಬಹುದು. ಅದಕ್ಕಿಂತ ಹೆಚ್ಚು ಮಾಡಿದ್ದಲ್ಲಿ ನಿಮ್ಮ ತ್ವಚೆ ಒಣಗಬಹುದು. ಹಾಗಾದ್ರೆ ಯಾವ ಯಾವ ವಸ್ತುಗಳನ್ನ ಬಳಸಿ ಸ್ಕ್ರಬಿಂಗ್ ಮಾಡಬಹುದು, ನೋಡೋಣ ಬನ್ನಿ.
ಕಿತ್ತಳೆ ಸ್ಕ್ರಬ್: 4 ಸ್ಪೂನ್ ಸಕ್ಕರೆ, 2 ಸ್ಪೂನ್ ಕಿತ್ತಳೆ ರಸ, 1ಸ್ಪೂನ್ ತೆಂಗಿನ ಎಣ್ಣೆ(ಆಲಿವ್ ಎಣ್ಣೆ, ಬಾದಾಮಿ ಎಣ್ಣೆ ಬಳಸಬಹುದು). ಒಂದು ಸ್ಪೂನ್ ಜೇನುತುಪ್ಪ. ಇದೆಲ್ಲವನ್ನ ಸೇರಿಸಿ, ಮುಖಕ್ಕೆ ಸ್ಕ್ರಬ್‌ನಂತೆ ಬಳಸಿ.
ಕಾಫಿ ಪುಡಿ ಸ್ಕ್ರಬ್: 2 ಚಮಚ ಕಾಫಿ ಪುಡಿ, 2 ಚಮಚ ಸಕ್ಕರೆ, 1ರಿಂದ 2 ಚಮಚ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ, ಈ ಮೂರನ್ನು ಸೇರಿಸಿ, 4-7ನಿಮಿಷ ಸ್ಕ್ರಬಿಂಗ್ ಮಾಡಿಕೊಳ್ಳಿ. 3 ನಿಮಿಷ ಬಿಟ್ಟು ಹಸಿ ಬಟ್ಟೆಯಿಂದ ನಿಮ್ಮ ಮುಖ ಒರೆಸಿಕೊಳ್ಳಿ. ನಂತರ ಮುಖ ತೊಳೆದುಕೊಳ್ಳಿ.
ಟೊಮೆಟೋ ಸ್ಕ್ರಬ್: ಟೊಮೆಟೋ, ಸಕ್ಕರೆ. ಟೊಮೆಟೋ ಅರ್ಧಭಾಗ ಕಟ್ ಮಾಡಿಕೊಂಡು ಅದರ ಮೇಲೆ ಸಕ್ಕರೆ ಹರಡಿ. ಇದನ್ನ ಮುಖಕ್ಕೆ ಉಜ್ಜಿ ಸ್ಕ್ರಬಿಂಗ್ ಮಾಡಿ. 4-7 ನಿಮಿಷ ಸ್ಕ್ರಬ್ ಮಾಡಿ, 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ