ಗಟ್ಟಿ ಮುಟ್ಟಾದ ಸಧೃಡ ಕೂದಲು ಎಲ್ಲ ಮಹಿಳಾ ಮಣಿಗಳ ಕನಸು. ಆದ್ರೆ ಕೆಮಿಕಲ್ ಭರಿತವಾದ ಶ್ಯಾಂಪು, ಸೋಪಿನ ಉಪಯೋಗದ ಪರಿಣಾಮವಾಗಿ ಈ ಕನಸು ಕನಸಾಗೇ ಉಳಿದಿದೆ. ಈ ಕಾರಣಕ್ಕೆ ನಾವಿವತ್ತು ಅಕ್ಕಿ ತೊಳೆದ ನೀರನ್ನ ಉಪಯೋಗಿಸಿ, ಕೂದಲು ಉದರುವ ಸಮಸ್ಯೆಯನ್ನು ಹೇಗೆ ತಡೆಗಟ್ಟಬಹುದು..? ಮತ್ತು ಉದ್ದವಾದ ಕೂದಲು ಪಡೆದುಕೊಳ್ಳುವುದು ಹೇಗೆ ಅನ್ನೋದನ್ನ ತಿಳಿಯೋಣ.
ಅನ್ನಕ್ಕೆ ಬಳಸೋ ಅಕ್ಕಿ ಬಳಸಿ ನಿಮ್ಮ ಕೂದಲಿನ ಸೌಂದರ್ಯವನ್ನ ಇಮ್ಮಡಿಗೊಳಿಸಬಹುದು.ಏಷ್ಯನ್ ಮಹಿಳೆಯರು ಸಧೃಡ ಕೂದಲಿಗಾಗಿ ಅಕ್ಕಿ ತೊಳೆದ ನೀರನ್ನ ಬಳಸುತ್ತಿದ್ದರಂತೆ. ಹೀಗಾಗಿ ಅವರ ಕೂದಲು ಸಖತ್ ಸಿಲ್ಕಿ ಮತ್ತು ಉದ್ದವಾಗಿತ್ತು.
ಆದ್ರೆ ಅಕ್ಕಿ ನೀರನ್ನ ಸರಿಯಾಗಿ ಬಳಸಿದ್ರೆ ಮಾತ್ರ ನೀವು ಇದರ ಲಾಭ ಪಡೆಯಬಹುದು. ಹಾಗಾದ್ರೆ ಅಕ್ಕಿ ನೀರನ್ನ ಹೇಗೆ ಬಳಸೋದು ಅನ್ನೋದನ್ನ ತಿಳಿಯೋಣ ಬನ್ನಿ.

ಎರಡು ಸ್ಪೂನ್ ಅಕ್ಕಿಗೆ ನೀರು ಹಾಕಿ ಒಮ್ಮೆ ಸ್ವಚ್ಛವಾಗಿ ತೊಳೆಯಿರಿ. ನಂತರ ಹಳೆ ನೀರನ್ನ ಬಿಸಾಕಿ, ಅದಕ್ಕೆ ಅರ್ಧ ಕಪ್ ನೀರು ಹಾಕಿ 24ಗಂಟೆ ನೆನೆಯಲು ಬಿಡಿ.
ಈಗ ಒಂದು ಚಮಚದ ಸಹಾಯದಿಂದ ಫರ್ಮೆಂಟೆಡ್ ರೈಸ್ ವಾಟರನ್ನ ಚೆನ್ನಾಗಿ ಕದಡಿ, ಅಕ್ಕಿ ಸೋಸಿ ನೀರನ್ನಷ್ಟೇ ಚಿಕ್ಕ ಸ್ಪ್ರೇ ಬಾಟಲ್‌ಗೆ ಹಾಕಿಡಿ. ಆ ಸ್ಪ್ರೇ ಬಾಟಲನ್ನು 10 ನಿಮಿಷಗಳ ಕಾಲ ಫ್ರಿಜ್‌ನಲ್ಲಿರಿಸಿ ತೆಗಿಯಿರಿ. ಹೀಗೆ ಮಾಡುವುದರಿಂದ ಅಕ್ಕಿ ನೀರಿನಲ್ಲಿದ್ದ ವಾಸನೆ ಕಡಿಮೆಯಾಗುತ್ತದೆ.
ಈಗ ಈ ಸ್ಪ್ರೇಬಾಟಲ್‌ನಿಂದ ನಿಮ್ಮ ಕೂದಲಿಗೆ ಫರ್ಮೆಂಟೆಡ್ ರೈಸ್ ವಾಟರನ್ನ ಸ್ಪ್ರೇ ಮಾಡಿಕೊಳ್ಳಿ. ಬುಡದಿಂದ ತುದಿಯವರೆಗೂ ನೀರು ತಾಗುವಂತೆ ಸ್ಪ್ರೇ ಮಾಡಿಕೊಳ್ಳಿ. 20 ನಿಮಿಷ ಹಾಗೆ ಬಿಡಿ. ನಂತರ 5 ನಿಮಿಷ ನಿಧಾನಕ್ಕೆ ಮಸಾಜ್ ಮಾಡಿಕೊಂಡು, ಉಗುರು ಬೆಚ್ಚು ನೀರಿನಲ್ಲಿ ತಲೆ ಸ್ನಾನ ಮಾಡಿ. ಆದಷ್ಟು ಕೆಮಿಕಲ್‌ಯುಕ್ತ ಶ್ಯಾಂಪು ಬಳಸೋದನ್ನ ಕಡಿಮೆ ಮಾಡಿ. ಹೀಗೆ ವಾರದಲ್ಲಿ 2 ಬಾರಿ ಈ ಟಿಪ್ಸ್ ಪ್ರಯೋಗಿಸಿದ್ರೆ ಒಳ್ಳೆಯ ಫಲಿತಾಂಶ ಕಂಡುಕೊಳ್ಳಬಹುದು.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ