ನಾವು ಶಕ್ತಿಶಾಲಿಗಳಾಗಬೇಕು. ಗಟ್ಟಿಮುಟ್ಟಾಗಿರಬೇಕು ಅಂದ್ರೆ ಕೆಲ ಆಹಾರಗಳನ್ನ ತಿನ್ನಬೇಕು. ಅಂಥ ಶಕ್ತಿ ಕೊಡುವ ಆಹಾರ ಧಾನ್ಯಗಳಲ್ಲಿ ಸೋಯಾಬಿನ್ ಕೂಡ ಒಂದು. ಸೋಯಾಬಿನ್ನ್ನು ಹೇಗೆ ಸೇವಿಸಬೇಕು. ಇದನ್ನ ತಿನ್ನೋದ್ರಿಂದ ಆಗೋ ಲಾಭವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ನಿಮ್ಮ ತೋಳುಗಳಲ್ಲಿ ಶಕ್ತಿ ಬರಬೇಕು ಅಂದ್ರೆ ಸೋಯಾಬಿನ್ ತಿನ್ಬೇಕು. ಪೈಲ್ವಾನ್ಗಳು, ಬಾಡಿ ಬಿಲ್ಡರ್ಗಳು ಹೆಚ್ಚಾಗಿ ಸೇವಿಸುವ ಆಹಾರ ಅಂದ್ರೆ ಸೋಯಾಬಿನ್. ಮಾಂಸಾಹಾರ ತಿನ್ನದವರು ಅದರ ಬದಲು ಸೋಯಾಬಿನ್ ತಿಂತಾರೆ. ಇನ್ನು ಕೆಲವರಿಗೆ ಸೋಯಾಬಿನ್ ತಿಂದರೆ ಸರಿಯಾಗಿ ಜೀರ್ಣವಾಗುವುದಿಲ್ಲ. ಅಂಥವರು ಒಂದು ಮುಷ್ಠಿ ಸೋಯಾಬಿನ್ನ್ನು ನೀರಿನಲ್ಲಿ ನೆನೆಸಿಟ್ಟು, ಮರುದಿನ ಬೆಳಿಗ್ಗೆ ಅದನ್ನು ರುಬ್ಬಿ, ಅದರ ಹಾಲು ತೆಗೆದು ಕುಡಿಯಬೇಕು. ಈ ಹಾಲು , ದನದ ಹಾಲಿಗಿಂತಲೂ ಹೆಚ್ಚು ಪೋಷ್ಠಿಕಾಂಶ ಹೊಂದಿರುತ್ತದೆ.
ಇನ್ನು ಜಿಮ್ ಹೋಗುವವರು ಪ್ರೋಟಿನ್ ಪೌಡರ್ ತೆಗೆದುಕೊಳ್ಳುವ ಬದಲು ಪ್ರತಿದಿನ ಈ ಸೋಯಾ ಹಾಲನ್ನು ಕುಡಿದರೆ ಉತ್ತಮ. ಇದರಿಂದ ನಿಮ್ಮ ದೇಹ ದಷ್ಟಪುಷ್ಟವಾಗುತ್ತದೆ. ನೀವು ಈ ಹಾಲನ್ನು ಕುಡಿದು ಕಸರತ್ತು ಮಾಡಿದರೆ, ಬಾಡಿ ಬೆಳೆಸಲು ಸಹಾಯವಾಗುತ್ತದೆ. ಪ್ಯಾಕೇಟ್ನಲ್ಲಿ ಕೂಡ ಸೋಯಾ ಹಾಲು ಲಭ್ಯವಿದೆ. ಆದ್ರೆ ಅದರಲ್ಲಿ ಪ್ರಿಸರ್ವೇಟಿವ್ಸ್ ಬಳಸುವ ಕಾರಣ, ಅದನ್ನ ಕುಡಿಯುವುದು ಅಷ್ಟು ಒಳ್ಳೆಯದಲ್ಲ.
ಇನ್ನು ನಿಮಗೆ ಸೋಯಾ ನೆನೆಸಿ ರುಬ್ಬಿ ಅದರ ಹಾಲು ತೆಗೆದು ಕುಡಿಯುವುದು ಕಷ್ಟವಾದರೆ, ನೀವು ಯಾವುದಾದರೂ ದೋಸೆಗೆ ಹಿಟ್ಟು ರುಬ್ಬುತ್ತಿದ್ದರೆ, ಅದಕ್ಕೆ ನೆನೆಸಿದ ಸೋಯಾಕಾಳನ್ನ ಸೇರಿಸಿ ಬಿಡಿ. ಇದರಿಂದ ಸೋಯಾ ಹಾಲು ದೋಸೆ ಹಿಟ್ಟಿನಲ್ಲಿ ಮಿಕ್ಸ್ ಆಗಿ, ದೋಸೆನೂ ಟೇಸ್ಟಿಯಾಗತ್ತೆ, ನಿಮ್ಮ ಆರೋಗ್ಯನಾ ಅಭಿವೃದ್ಧಿಯಾಗತ್ತೆ.