ಮಾಂಸಾಹಾರ ತಿನ್ನದಿದ್ದವರು ಸೋಯಾ ಚಂಕ್ಸ್‌ನಾ ಇಷ್ಟಾಪಡ್ತಾರೆ. ಇದು ವೆಜಿಟೇರಿಯನ್ ಫುಡ್ ಆಗಿದ್ದು, ನೋಡಲು ನಾನ್‌ವೆಜ್‌ನಂತೆ ಇದ್ರೂ, ಆರೋಗ್ಯಕ್ಕೆ ತುಂಬಾ ಉತ್ತಮ. ನಾನ್‌ವೆಜ್‌ಗಿಂತಲೂ ಹೆಚ್ಚಿನ ಪೋಷಕಾಂಶ ಇದರಲ್ಲಿರುತ್ತದೆ. ಹಾಗಾದ್ರೆ ಸೋಯಾ ಚಂಕ್ಸ್ ತಿಂದ್ರೆ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಸೋಯಾ ಚಂಕ್ಸ್‌ನಿಂದ ಕರಿ, ಪಲಾವ್, ಪಲ್ಯ, ಸಾಂಬಾರ್ ಇತ್ಯಾದಿಗಳನ್ನ ಮಾಡಿ ತಿಂತೀವಿ. ಸೋಯಾ ಚಂಕ್ಸ್‌ನಿಂದ ಮಾಡಿದ ತಿಂಡಿ ರುಚಿಕರವಾಗಿಯೂ ಇರುತ್ತದೆ. ಅಲ್ಲದೇ ಆರೋಗ್ಯಕ್ಕೂ ಉತ್ತಮ. ಮಾಂಸಾಹಾರದಲ್ಲಿ ಇರು ಪೌಷ್ಟಿಕಾಂಶಕ್ಕಿಂತಲೂ ಹೆಚ್ಚಿನ ಪೌಷ್ಟಿಕಾಂಶ ಸೋಯಾ ಚಂಕ್ಸ್‌ನಲ್ಲಿ ಇರುತ್ತದೆ. ಹೆಚ್ಚು ನಾನ್ ವೆಜ್ ಇಷ್ಟಪಡದವರು ಅಥವಾ ಶಾಖಾಹಾರಿಗಳು ಈ ಆಹಾರವನ್ನ ಇಷ್ಟಾ ಪಡ್ತಾರೆ.
ಸೋಯಾ ಚಂಕ್ಸ್ ಮಾಡೋದಾದ್ರೂ ಹೇಗೆ ಅನ್ನೋ ಪ್ರಶ್ನೆಗೆ ಉತ್ತರ, ಸೋಯಾ ಕಾಳನ್ನ ನೆನೆಸಿ, ಅದನ್ನು ರುಬ್ಬಿ, ಅದರಿಂದ ಹಾಲು ತೆಗೆದು, ಉಳಿದ ಸೋಯಾಬಿನ್ ಪೇಸ್ಟ್‌ನಿಂದ ಸೋಯಾ ಚಂಕ್ಸ್ ತಯಾರಿಸಲಾಗುತ್ತದೆ. ಸೋಯಾ ಬೇಳೆ ತಿಂದು ಅರಗಿಸಿಕೊಳ್ಳೋಕ್ಕೆ ಆಗದಿದ್ದವರು, ಅಥವಾ ಸೋಯಾ ಬೀನ್ ಇಷ್ಟಪಡದವರು ಈ ಸೋಯಾ ಚಂಕ್ಸ್ ಬಳಸಬಹುದು. ನೀವೇ ಮನೆಯಲ್ಲಿ ಸೋಯಾ ಚಂಕ್ಸ್ ಮಾಡುವುದಿದ್ದರೆ, ಸೋಯಾ ಬಿನ್ ಕಾಳನ್ನು ರಾತ್ರಿ ನೆನೆಸಿಟ್ಟು, ಬೆಳಿಗ್ಗೆ ಅದನ್ನು ರುಬ್ಬಿ, ಹಾಲು ತೆಗಿಯದೇ, ಆ ರುಬ್ಬಿದ ಪೇಸ್ಟ್‌ನ್ನು ಸಂಡಿಗೆಯಂತೆ ಬಿಸಿಲಿನಲ್ಲಿ ಒಣಗಿಸಿ. ಹೀಗೆ ಒಣಗಿದ ವಸ್ತುವೇ ಸೋಯಾ ಚಂಕ್ಸ್.
ಇನ್ನು ನೀವು ಸೋಯಾ ಚಂಕ್ಸ್ ಬಳಸುವುದರಂದಿ, ನಿಮ್ಮ ಚೈತನ್ಯ ತುಂಬುತ್ತದೆ. ಶಕ್ತಿ ತುಂಬುತ್ತದೆ. ನಿಮ್ಮ ದೇಹ ಸಧೃಡವಾಗಿರಬೇಕು ಅಂದ್ರೆ ನೀವು ಸೋಯಾಬಿನ್ ಬಳಸಬೇಕು. ನಿಮ್ಮ ದೇಹದಲ್ಲಿ ಫೈಬರ್ ಅಂಶ ಕಡಿಮೆ ಇದ್ದಲ್ಲಿ ಖಂಡಿತವಾಗಿ ಸೋಯಾ ಚಂಕ್ಸ್ ಸೇವಿಸಿ. ಅಲ್ಲದೇ ಇದರಲ್ಲಿ ಮಿನರಲ್ಸ್ ಕೂಡ ಹೇರಳವಾಗಿರುವುದರಿಂದ, ಸೋಯಾ ಚಂಕ್ಸ್ ಸೇವನೆ ಮಾಡಿದ್ದಲ್ಲಿ ನಿಮ್ಮ ಕೂದಲು ಮತ್ತು ತ್ವಚೆ ಆರೋಗ್ಯವಾಗಿರುತ್ತದೆ. ನಿಮ್ಮ ಕೂದಲಿನ ಬುಡ ಗಟ್ಟಿಗೊಳ್ಳುತ್ತದೆ. ತ್ವಚೆ ಕ್ಲೀನ್ ಆಗಿ, ಸುಂದರವಾಗಿ ಕಾಣುತ್ತದೆ. ನೀವು ಪ್ರತಿದಿನ ಸೋಯಾ ಚಂಕ್ಸ್ ಸೇವನೆ ಮಾಡಬೇಕೆಂದಿಲ್ಲ. ವಾರದಲ್ಲಿ ಮೂರು ಬಾರಿ ಸೋಯಾ ಚಂಕ್ಸ್ ಸೇವನೆ ಮಾಡಿದರೂ ಸಾಕು.