ಕೆಸುವಿನ ಸೊಪ್ಪಿನಲ್ಲಿರುವ ಆರೋಗ್ಯಕರ ಗುಣಗಳನ್ನ ತಿಳಿದರೆ ಆಶ್ಚರ್ಯ ಪಡ್ತೀರಾ..

ಕೆಸುವಿನ ಸೊಪ್ಪನ್ನ ಹೆಚ್ಚಾಗಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಬಳಸಲಾಗುತ್ತದೆ. ಕೆಸುವಿನ ಸೊಪ್ಪಿನ ಸಾರು, ಚಟ್ನಿ, ಪತ್ರೋಡೆಯನ್ನ ಮಾಡಲಾಗತ್ತದೆ. ಇದರಿಂದ ಬರೀ ರುಚಿಯಾದ ತಿಂಡಿ ಮಾಡುವುದಷ್ಟೇ ಅಲ್ಲ. ಬದಲಾಗಿ ಈ ಸೊಪ್ಪನ್ನ ತಿನ್ನುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಮಳೆಗಾಲದಲ್ಲಿ ಸಿಗುವ ಈ ಸೊಪ್ಪಿನಿಂದಾಗುವ ಲಾಭವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ವಿಟಾಮಿನ್‌ ಎ ನಿಂದ ಭರಪೂರವಾಗಿರುವ ಕೆಸುವಿನ ಸೊಪ್ಪಿನ ಸೇವನೆಯಿಂದ ಕಣ್ಣಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ನಿಮಗೆ ಕಣ್ಣು ಸರಿಯಾಗಿ ಕಾಣುತ್ತಿಲ್ಲವೆಂದಲ್ಲಿ ನೀವು ಕೆಸುವಿನ ಸೊಪ್ಪಿನ ಸಾರು, ಚಟ್ನಿ ಅಥವಾ ಸೂಪ್ ಮಾಡಿ ಸೇವಿಸಿ. ಕ್ಯಾರೆಟ್‌ ಸೇವಿಸಿದ್ರೆ ಕಣ್ಣಿನ ಸಮಸ್ಯೆ ಬರುವುದಿಲ್ಲ. ಅದೇ ರೀತಿ ಕೆಸುವಿನ ಸೊಪ್ಪಿನ ಸೇವನೆ ಕೂಡ ಆರೋಗ್ಯಕ್ಕೆ ಒಳ್ಳೆದು.

ಇಷ್ಟೇ ಅಲ್ಲದೇ, ಜೀರ್ಣಕ್ರಿಯೆ ಸಮಸ್ಯೆಗೆ ಕೂಡ ಮುಕ್ತಿ ಸಿಗುತ್ತದೆ. ನಿಮಗೆ ತಿಂದ ಆಹಾರ ಜೀರ್ಣವಾಗದಿದ್ದಲ್ಲಿ, ಅಥವಾ ಪದೇ ಪದೇ ಹೊಟ್ಟೆನೋವು ಆಗುತ್ತಿದ್ದಲ್ಲಿ, ಕೆಸುವಿನ ಸೊಪ್ಪಿನ ಪದಾರ್ಥ ಸೇವಿಸಿ. ಇನ್ನು ನೀವು ಕೀಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ಕೆಸುವಿನ ಸೊಪ್ಪು ನಿಮಗೆ ಸೂಕ್ತ ಆಹಾರವಾಗಿದೆ. ಜಾಯಿಂಟ್ ಪೇನ್ ಇರುವವರು ಕೆಸುವಿನ ಸೊಪ್ಪಿನ ಸಾರು ಅಥವಾ ಚಟ್ನಿ ಮಾಡಿ ಸೇವಿಸಿ.

ಬಿಪಿ ನಿಯಂತ್ರಿಸುವುದರಲ್ಲಿಯೂ ಕೂಡ ಕೆಸುವಿನ ಸೊಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ಇನ್ನು ನೀವೇನಾದ್ರೂ ತೂಕ ಇಳಿಸೋಕ್ಕೆ ಪ್ರಯತ್ನಿಸುತ್ತಿದ್ದಲ್ಲಿ, ಕೆಸುವಿನ ಸೊಪ್ಪನ್ನು ನಿಮ್ಮ ಡಯಟ್ ಲೀಸ್ಟ್‌ನಲ್ಲಿ ಸೇರಿಸಿಕೊಳ್ಳಿ. ಯಾಕಂದ್ರೆ ಇದರಲ್ಲಿ ನಾಾರಿನಂಶ ಇದ್ದು, ಇದು ನಿಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸಿ, ನಿಮ್ಮ ಶರೀರವನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

About The Author