Tuesday, December 24, 2024

Latest Posts

ವಾಲ್ನಟ್ ಯಾಕೆ ತಿನ್ಬೇಕು..? ಇದರಿಂದ ಏನು ಪ್ರಯೋಜನ..?

- Advertisement -

ಡ್ರೈಫ್ರೂಟ್ಸ್‌ ಮತ್ತು ನಟ್ಸ್‌ಗಳಲ್ಲಿ ಎಲ್ಲರಿಗೂ ಇಷ್ಟವಾಗುವಾಗೋದಂದ್ರೆ ಪಿಸ್ತಾ ಮತ್ತು ಬಾದಾಮ್. ಗೋಡಂಬಿ ದ್ರಾಕ್ಷಿನೂ ಹಲವರಿಗೆ ಇಷ್ಟಾ ಆಗತ್ತೆ. ಆದ್ರೆ ಅಖ್ರೋಟ್ ಅಂದ್ರೆ ವಾಲ್ನಟ್ ಇಷ್ಟಾ ಪಡುವವರು ತುಂಬಾ ಕಮ್ಮಿ. ಅದು ಸಪ್ಪೆಯಾಗಿರತ್ತೆ ಅಂತಾ ದೂರುವವರೇ ಜಾಸ್ತಿ. ಅದು ಟೇಸ್ಟ್‌ಲೆಸ್‌ ಅಂತಾ ಹಲವು ವಾಲ್ನಟ್ ತಿನ್ನೋಕ್ಕೆ ಇಷ್ಟಾ ಪಡಲ್ಲಾ. ಆದ್ರೆ ಡ್ರೈಫ್ರೂಟ್ಸ್‌ಗಳಲ್ಲಿ ಹೆಚ್ಚು ಪೋಷಕಾಂಶದ ಗುಣಗಳನ್ನು ಹೊಂದಿರುವುದೇ ವಾಲ್ನಟ್. ವಾಲ್ನಟ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಮೆದುಳಿನ ಶೇಪ್‌ನಲ್ಲಿರುವ ವಾಲ್ನಟ್ ತಿನ್ನುವುದರಿಂದ ಬುದ್ಧಿ ಶಕ್ತಿ ಹೆಚ್ಚಾಗುತ್ತದೆ. ಗರ್ಭಿಣಿಯರಿಗೆ ದಿನಕ್ಕೆ ಎರಡರಿಂದ ಮೂರು ವಾಲ್ನಟ್ ತಿನ್ನೋಕ್ಕೆ ಹೇಳ್ತಾರೆ. ಯಾಕಂದ್ರೆ ಹೊಟ್ಟೆಯಲ್ಲಿರುವ ಮಗುವಿನ ಮೆದುಳಿನ ಬೆಳವಣಿಗೆ ಒಳ್ಳೆಯದಾಗಲಿ. ಮಗು ಚುರುಕಾಗಿರಲಿ ಅಂತಾ. ಇನ್ನು ಇದರ ಇನ್ನೊಂದು ಉತ್ತಮ ಗುಣ ಅಂದ್ರೆ, ಹೃದಯ ಸಮಸ್ಯೆಗೆ ಇದರಿಂದ ಪರಿಹಾರ ಸಿಗುತ್ತದೆ. ಹೌದು.. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವವರು ದಿನಕ್ಕೆ ಮೂರರಿಂದ ನಾಲ್ಕು ವಾಲ್ನಟ್ ಸೇವಿಸಿ. ಇದರಿಂದ ಕ್ರಮೇಣ ಹೃದಯದ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಇಷ್ಟೇ ಅಲ್ಲದೇ, ಮೂಳೆಯ ಸಮಸ್ಯೆ ಇದ್ದಲ್ಲಿ ಅದಕ್ಕೂ ಪರಿಹಾರ ಒದಗಿಸುತ್ತದೆ ಈ ವಾಲ್ನಟ್. ಮೂಳೆ ಗಟ್ಟಿಗೊಳಿಸುವಲ್ಲಿ ವಾಲ್ನಟ್ ಸಹಕಾರಿಯಾಗಿದೆ. ಉಗುರುಬೆಚ್ಚು ಹಾಲಿನೊಂದಿಗೆ ವಾಲ್ನಟ್ ಸೇವನೆ ಮಾಡಿದ್ರೆ ಇನ್ನೂ ಒಳ್ಳೆದು. ಕ್ಯಾನ್ಸರ್ ಬರದಂತೆ ನಮ್ಮನ್ನು ನಾವು ಕಾಪಾಡಿಕೊಳ್ಳಲು ವಾಲ್ನಟ್ ಸಹಾಯ ಮಾಡುತ್ತದೆ. ನೀವು ತೂಕ ಹೆಚ್ಚಿಸಿಕೊಳ್ಳೋಕ್ಕೆ ಪ್ರಯತ್ನಿಸುತ್ತಿದ್ದಲ್ಲಿ, ಬಾಳೆ ಹಣ್ಣಿನ ಮಿಲ್ಕ್‌ ಶೇಕ್ ಮಾಡಿ ಕುಡಿಯಿರಿ. ಆ ಬಾಳೆ ಹಣ್ಣಿನ ಮಿಲ್ಕ್ ಶೇಕ್‌ಗೆ 3 ವಾಲ್ನಟ್ ಸೇರಿಸಿ. ಇದು ಹೆಲ್ದಿಯಾಗಿ ತೂಕ ಹೆಚ್ಚಿಸೋಕ್ಕೆ ಸಹಾಯ ಮಾಡುತ್ತದೆ.

ವಾಲ್ನಟ್ ಡಯಾಬಿಟೀಸ್ ಕಂಟ್ರೋಲ್ ಮಾಡೋದ್ರಲ್ಲಿಯೂ ಸಹಾಯ ಮಾಡುತ್ತದೆ. ಡಯಾಬಿಟೀಸ್ ರೋಗಿಗಳು ದಿನಕ್ಕೆ 3 ವಾಲ್ನಟ್ ತಿಂದ್ರೂ ಸಾಕು. ನಿಮ್ಮ ಡಯಾಬಿಟೀಸ್ ಕಂಟ್ರೋಲ್‌ನಲ್ಲಿರುತ್ತದೆ. ಅಲ್ಲದೇ ನಿಮ್ಮ ಜೀರ್ಣಕ್ರಿಯೆ ಹೆಚ್ಚಿಸಿ, ನಿಮ್ಮ ಹೊಟ್ಟೆಯ ಸಮಸ್ಯೆಯನ್ನೂ ಕಿತ್ತು ಹಾಕತ್ತೆ ಈ ವಾಲ್ನಟ್. ನಿದ್ರಾಹೀನತೆ ಸಮಸ್ಯೆ ಇದ್ದಲ್ಲಿ, ವಾಲ್ನಟ್ ಸೇವಿಸಿ. ಇನ್ನು ನಿಮಗೆ ವಾಲ್ನಟ್ ಸೇವಿಸಿದ್ದಲ್ಲಿ ಅಲರ್ಜಿ ಎಂದಾದಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ವಾಲ್ನಟ್ ಸೇವಿಸುವುದು ಉತ್ತಮ.

- Advertisement -

Latest Posts

Don't Miss