ಶ್ರೀಮಂತರಾಗಬೇಕು ಅನ್ನೋ ಆಸೆ ಯಾರಿಗಿರುವುದಿಲ್ಲಾ ಹೇಳಿ.. ಉತ್ತಮ ರೀತಿಯಿಂದಲೇ ಶ್ರಮಪಟ್ಟು ದುಡಿದರೆ, ನಾವು ಅಭಿವೃದ್ಧಿ ಹೊಂದುತ್ತೇವೆ. ಆದ್ರೆ ಎಷ್ಟೇ ಶ್ರಮಪಟ್ಟರೂ ಶ್ರೀಮಂತರಾಗದಿದ್ದಲ್ಲಿ, ಅವನ ಅದೃಷ್ಟ ಖುಲಾಯಿಸಿಯಾದರೂ ಶ್ರೀಮಂತನಾಗಬೇಕು. ಹೀಗಾಗಬೇಕು ಅಂದ್ರೆ, ನಾವು ಮನೆಗೆ ಒಂದು ವಸ್ತುವನ್ನು ತಂದು, ಪ್ರತಿ ದಿನ ಅದಕ್ಕೆ ಪೂಜೆ ಮಾಡಬೇಕು. ಯಾವುದು ಆ ವಸ್ತು ಅನ್ನೋ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.
ಫೋನಿನ ಮೂಲಕವೇ ಪರಿಹಾರ
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155
ನಾವಿವತ್ತು ಹೇಳೋ ವಸ್ತುವನ್ನ ತಂದು ಮನೆಯಲ್ಲಿ ಪೂಜೆ ಮಾಡುವ ಮೊದಲು, ಕೆಲ ನಿಯಮಗಳನ್ನ ನೀವು ಅನುಸರಿಸಬೇಕು. ಆ ನಿಯಮವೇನೆಂದರೆ, ಪ್ರತಿದಿನ ಮನೆಯಲ್ಲಿ ಮತ್ತು ಹೊಸ್ತಿಲು, ಅಂಗಳವನ್ನ ಗುಡಿಸಿ, ವರೆಸಿ, ಸ್ವಚ್ಛವಾಗಿರಿಸಬೇಕು. ಮತ್ತು ಈ ವಿಶೇಷ ವಸ್ತುವನ್ನ ಎಲ್ಲರೂ ಮುಟ್ಟುವಂತಿಲ್ಲ. ಹೊರಗಿನಿಂದ ಬಂದವರಿಗೆ ಈ ವಸ್ತು ತೋರಿಸಬಾರದು. ಪ್ರತಿ ದಿನ ಮಡಿಯಿಂದ ಈ ವಸ್ತುವನ್ನ ಪೂಜಿಸಬೇಕು. ಯಾವುದು ಆ ವಸ್ತು ಅನ್ನೋ ಪ್ರಶ್ನೆಗೆ ಉತ್ತರ, ಏಕಾಕ್ಷಿ ತೆಂಗಿನಕಾಯಿ.
ಏಕಾಕ್ಷಿ ಅಂದ್ರೆ ಒಂದು ಕಣ್ಣು ಎಂದರ್ಥ. ನೀವು ಸಾಮಾನ್ಯವಾಗಿ ತೆಂಗಿನಕಾಯಿ ಜುಟ್ಟು ತೆಗೆದಾಗ, ಮೂರು ಚುಕ್ಕೆಗಳು ಕಾಣುತ್ತದೆ. ಈ ಕಾಯನ್ನ ಮುಕ್ಕಣ್ಣು ಕಾಯಿ ಎನ್ನಲಾಗುತ್ತದೆ. ಶಿವನಿಗೆ ಹೇಗೆ ಮೂರು ಕಣ್ಣುಗಳಿರುತ್ತದೆಯೋ, ಅಂತೆಯೇ ತೆಂಗಿನಕಾಯಿಯಲ್ಲಿ ಮೂರು ಚುಕ್ಕೆಗಳಿರುತ್ತದೆ. ಆದ್ರೆ ಏಕಾಕ್ಷಿ ತೆಂಗಿನಕಾಯಿ ಸಿಗೋದು ತುಂಬಾ ಅಪರೂಪ. ಇಂಥ ತೆಂಗಿನಕಾಯಿ ಹೆಚ್ಚಾಗಿ ದೇವಸ್ಥಾನ, ಮಠ ಮಾನ್ಯಗಳಲ್ಲಿ ಅದೃಷ್ಟವಂತರಿಗೆ ಪ್ರಸಾದವಾಗಿ ಸಿಗುತ್ತದೆ. ಅಥವಾ ಅದೃಷ್ಟವಿದ್ದಲ್ಲಿ ಹುಡುಕಿದರೆ ಸಿಗುತ್ತದೆ.
ಇನ್ನು ಗೃಹಪ್ರವೇಶವಿದ್ದಾಗ, ಹೋಮ ಹವನ, ಲಕ್ಷ್ಮೀ ಪೂಜೆ, ವರಮಹಾಲಕ್ಷ್ಮೀ ಪೂಜೆ, ಸತ್ಯ ನಾರಾಯಣ ಪೂಜೆ, ಅಕ್ಷಯ ತೃತೀಯ ಅಥವಾ ಯಾವುದಾದರೂ ಹಬ್ಬ ಹರಿದಿನದ ದಿನ ಉತ್ತಮ ಮುಹೂರ್ತ ಕಂಡು, ಈ ಏಕಾಕ್ಷಿ ತೆಂಗಿನಕಾಯಿ ಮನೆಗೆ ತಂದು, ಪ್ರತಿ ನಿತ್ಯ ಪೂಜೆ ಮಾಡಿದ್ರೆ, ಲಕ್ಷ್ಮೀಯ ಕೃಪಾಕಟಾಕ್ಷ ನಿಮ್ಮ ಮೇಲಿರುತ್ತದೆ.
