ಬೆಂಗಳೂರು: ರಾಜ್ಯದಾನಿಯಲ್ಲಿ ಪದೇ ಪದೇ ಅಗ್ನಿ ಅವಘಡ ಸಂಭವಿಸುತ್ತಿದೆ , ಕೆಲವು ದಿನಗಳ ಹಿಂದೆ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ, ಹಾಗೂ ಕೆಲವು ದಿನಗಳ ಹಿಂದೆ ಕೋರಮಂಗಲದ ಕಟ್ಟಡ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ವೀರಭದ್ರನಗರ ವೆಲ್ಡಿಂಗ್ ವರ್ಕ್ ಶಾಪ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ವೀರಭದ್ರ ನಗರದಲ್ಲಿರುವ ಬಸ್ ಗಳ ಬಾಡಿ ಬಿಲ್ಡಿಂಗ್ ಮತ್ತು ವೆಲ್ಡಿಂಗ್ ವರ್ಕ್ ಶಾಪ್ನಲ್ಲಿ ನಿಂತಿರುವ ಬಸ್ ಗಳಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಎರಡು ಬಸ್ ಗಳು ಸುಟ್ಟು ಹೋಗಿವೆ. ಇದರಿಂದಾಗಿ ವಠಾರದ ತುಂಬೆಲ್ಲ ದಟ್ಟ ಹೊಗೆ ಆವರಿಸಿಕೊಂಡಿರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಿಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಬೆಂಕಿಯ ತೀವ್ರತೆಗೆ ದಟ್ಟ ಹೊಗೆ ಆವರಿಸಿದ ಹಿನ್ನೆಲೆ ವಾಹನ ದಟ್ಟಣೆ ಅಧಿಕವಾಗಿತ್ತು, ಸಂಚಾರಿ ಪೊಲೀಸರು ವಾಹನ ದಟ್ಟಣೆ ತಿಳಿಗೊಳಿಸಲು ಹೈರಾಣಾಗಿದ್ದಾರೆ. ಇದರಿಂದಾಗಿ ಸ್ಥಳಿಯರಲ್ಲಿ ಆತಂಕದ ಛಾಯೆ ಮನೆಮಾಡಿದೆ. ಮೊದಲು ಒಂದು ಬಸ್ ಗೆ ಬೆಂಕಿ ಹೊತ್ತಿಕೊಂಡು ನಂತರ ಪಕ್ಕದಲ್ಲಿರುವ ಬಸ್ ಗೂ ಬೆಂಕಿ ಅವರಿಸಿದೆ . ನಂತರ ಪಕ್ಕದಲ್ಲಿರುವ ಆರು ವಾಹನಗಳು ಬೆಂಕಿಗೆ ಆಹುತಿಯಾಗಿದೆ ಎಂದು ಪ್ರಾಥಮಿಕ ಹಂತದಲ್ಲಿ ತಿಳಿದುಬಂದಿದೆ.
Award Function:ಘಟಿಕೋತ್ಸವದಲ್ಲಿ ಹಲವು ಸಾಧಕರಿಗೆ ಪ್ರಶಸ್ತಿ ಪ್ರಧಾನ: ರಾಜ್ಯಪಾಲ ಗೆಹ್ಲೋಟ್ ಭಾಗಿ..!
ಸರ್ಕಾರಿ ಬಸ್ ನ್ನು ಬಿಡದ ಕದೀಮರು..! ರಾತ್ರಿ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಬೆಳಗಾಗೊದರೊಳಗೆ ಮಾಯ..!
ಪ್ರತಿಭಾವಂತ ವಿದ್ಯಾರ್ಥಿನಿಗೆ ನೆರವಾದ ಸಂತೋಷ್ ಲಾಡ್ ಜಪಾನ್‌ಗೆ ತೆರಳಲು ಧನಸಹಾಯ