Bengaluru: ಪಂಜಾಬಿ ಗಾಯಕ ದಿಲ್ಜೀತ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ

Bengaluru News: ಬಾಲಿವುಡ್ ಮತ್ತು ಪಂಜಾಬ್‌ನ ಖ್ಯಾತ ಗಾಯಕ ದಿಲ್ಜೀತ್ ಸಿಂಗ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಬಾಂಬ್ ಹಾಕುವುದಾಗಿ ಇಮೇಲ್‌ ಮೂಲಕ ಬೆದರಿಕೆಯ ಸಂದೇಶ ರವಾನಿಸಲಾಗಿದೆ. ಅಲ್ಲದೇ, ಖಲಿಸ್ತಾನ್ ಜಿಂದಾಬಾದ್ ಎಂದು ಬರೆದು ಕಳುಹಿಸಲಾಗಿದೆ.

ನವೆಂಬರ್ 29ರಂದು ಮಾದನಾಯಕನಹಳ್ಳಿ ಬಳಿಯ ಬಿಇಐಸಿಯಲ್ಲಿ ದಿಲ್ಜೀತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 20ರಿಂದ 25 ಸಾವಿರ ಜನ ಭಾಗಿಯಾಗುವ ನಿರೀಕ್ಷೆ ಇದೆ. ಆದರೆ ಈ ಕಾರ್ಯಕ್ರಮ ನಡೆದರೆ ಇಲ್ಲಿ ಬಾಂಬ್ ಸಿಡಿಸುವುದಾಗಿ ಬೆದರಿಕೆ ಹಾಕಲಾಗಿದೆ.

ಇನ್ನು ಈ ಬೆದರಿಕೆ ಈ ಮೇಲ್ ಬಂದಿರುವುದು ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ಕಚೇರಿಗೆ. ಕಾರ್ಯಕ್ರಮಕ್ಕೆ ಮೆಟ್ರೋದಲ್ಲಿ ಬರಬೇಡಿ, ಮಕ್ಕಳನ್ನು ಕರೆತರಬೇಡಿ ಸ್ಪೋಟ ಮಾಡುತ್ತೇವೆ ಎಂದು ಸಂದೇಶ ರವಾನಿಸಲಾಗಿದೆ.

ಈ ಬಗ್ಗೆ ಉತ್ತರ ವಿಭಾಗದ ಸೆನ್ ಪೋಲಿಸ್ ಸ್ಟೇಶನ್‌ನಲ್ಲಿ ಪ್ರಕರಣ ದಾಖಲಾಾಗಿದ್ದು, ಪೋಲೀಸರು ತನಿಖೆ ಶುರು ಮಾಡಿದ್ದಾರೆ.

About The Author