Political News: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ವೀರ್ ಸಾವರ್ಕರ್ ಮೊಮ್ಮಗ ಸತ್ಯಕಿ ಅಶೋಕ್ ಲೀಗಲ್ ನೋಟೀಸ್ ಕಳುಹಿಸಿದ್ದಾರೆ.
ಇದಕ್ಕೆ ಕಾರಣವೇನೆಂದರೆ, ಸೋನಿಯಾ ಗಾಂಧಿಯವರ ಬಿಲಾಂಗಿಂಗ್ ಎ ಜರ್ನಿ ಆಫ್ ಲವ್ ಪುಸ್ತಕದಲ್ಲಿ ಸಾವರ್ಕರ್ ಬಗ್ಗೆ ಸೋನಿಯಾ ಬರೆದಿರುವ ಕೆಲ ಮಾತುಗಳನ್ನು ಸತ್ಯಕಿ ವಿರೋಧಿಸಿದ್ದಾರೆ. ಅಲ್ಲದೇ ಸಾವರ್ಕರ್ ಬಗ್ಗೆ ಬರೆದಿರುವ ಬರಹಗಳು ಆಧಾರ ರಹಿತ ಮತ್ತು ತಪ್ಪು ಸಂದೇಶ ರವಾನಿಸುವ ಬರಹವಾಗಿದೆ ಎಂದು ಸತ್ಯಕಿ ಆರೋಪಿಸಿದ್ದಾರೆ.
ಅಲ್ಲದೇ ಸಾವರ್ಕರ್ ಅವರ ಪರಂಪರೆ ಮತ್ತು ಗೌರವಕ್ಕೆ ಧಕ್ಕೆ ತರುವ ಕೆಲಸವಾಗಿದೆ. ಹಾಗಾಗಿ ಸೋನಿಯಾ ಗಾಂಧಿಯವರು ಈ ಕುರಿತು ಬೇಷರತ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ, ಸೋನಿಯಾ ಗಾಂಧಿಯವರಿಗೆ ಸತ್ಯಕಿ ಅಶೋಕ್ ಲೀಗಲ್ ನೋಟೀಸ್ ಕಳುಹಿಸಿದ್ದಾರೆ.
ಸತ್ಯಕಿ ಅವರು ತಮ್ಮ ವಕೀಲರಾದ ಸಂಗ್ರಾಮ್ ಕೋಲ್ಹತ್ಕರ್ ಮೂಲಕ ನೋಟೀಸ್ ಕಳುಹಿಸಿದ್ದು, ಪೇಜ್ ನಂಬರ್ 201ರಲ್ಲಿ ಇರುವ ಹೇಳಿಕೆಯನ್ನು ನನ್ನ ಕಕ್ಷಿದಾರರು ಖಡಾಖಂಡಿತವಾಗಿ ವಿರೋಧಿಸಿದ್ದಾರೆ. ಇದರಲ್ಲಿ ಸ್ವಾತಂತ್ರ್ಯವೀರ ವಿನಾಯಕ ದಾಮೋದರ್ ಸಾವರ್ಕರ್ ಅವರು ಬ್ರಿಟೀಷರಿಗೆ ಸಹಕಾರ ನೀಡಿದ್ದರು ಎಂದು ಸೋನಿಯಾ ಗಾಂಧಿ ತಪ್ಪು ಸಂದೇಶ ರವಾನಿಸಿದ್ದಾರೆ. ಸಾವರ್ಕರ್ ಅವರ ಸೆರೆವಾಸ ಅರ್ಜಿಗಳು ಮತ್ತು ರಾಜಕೀಯ ಚಟುವಟಿಕೆಗಳನ್ನು ಪರಿಶೀಲಿಸಬೇಕಾದ ಐತಿಹಾಸಿಕ ಸಂದರ್ಭದಿಂದ ಇದು ಬೆಂಬಲಿತವಲ್ಲ ಎಂದು ಹೇಳುತ್ತಾರೆ ಎಂದು ನೋಟೀಸ್ ನಲ್ಲಿ ಹೇಳಲಾಗಿದೆ.




